ಕ್ರೀಡೆ

ವಿಶ್ವಕಪ್ ನಂತರ ಉತ್ತರ: ಧೋನಿ

Published On :

ಮಿರ್ಪುರ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ತಮ್ಮ ತಂಡವನ್ನು ಸತತವಾಗಿ ಯಶಸ್ಸಿನತ್ತ ಸಾಗಿಸುತ್ತಿರುವ ನಾಯಕ ಮಹೇಂದ್ರ ಸಿಂಗ್ ಧೋನಿ, ಪಂದ್ಯಾವಳಿಯಲ್ಲಿ ಟಿ20 ಹೊರತುಪಡಿಸಿದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
'ನಮ್ಮ ಡ್ರೆಸ್ಸಿಂಗ್ ರೂಮ್ ಉತ್ತಮ ವಾತಾವರಣದಿಂದ ಕೂಡಿದೆ. ಪಂದ್ಯಾವಳಿಯಲ್ಲಿ ದೊರಕಿದ ಯಶಸ್ಸನ್ನು ಆಟಗಾರರು ಪರಸ್ಪರ ಹಂಚಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮಗೆ ಸಂಬಂಧಪಟ್ಟ ಹಲವಾರು ಘಟನೆಗಳು ನಡೆಯಬಹುದು. ಆದರೆ, ನಾವು ನಮ್ಮ ಕರ್ತವ್ಯದ ಕುರಿತು ಗಮನಹರಿಸುವ ಅಗತ್ಯವಿದೆ' ಎಂದು ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.     ಚೆನ್ನೈ ತಂಡದ ನಾಯಕತ್ವ ತ್ಯಜಿಸುತ್ತಿರುವುದು ನಿಜವೇ ಅಥವಾ ಇಲ್ಲವೆ ಎಂಬ ಪ್ರಶ್ನೆಯನ್ನು ಧೋನಿ ತಳ್ಳಿ ಹಾಕಿದರು. 'ಆ ಪ್ರಶ್ನೆಗೆ ನಾನು ಉತ್ತರಿಸುವುದಿಲ್ಲ. ಈಗ ವಿಶ್ವಟಿ20 ಪಂದ್ಯಾವಳಿಗೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿತ್ತೇನೆ. ಭಾರತಕ್ಕೆ ಕೇವಲ 40 ನಿಮಿಷಗಳ ವಿಮಾನ ಇದೆ. ಅನಂತರ ನೀವು ಅಲ್ಲಿ ನನಗೆ ಈ ಪ್ರಶ್ನೆ ಕೇಳಬಹುದು' ಎಂದು ಧೋನಿ ಉತ್ತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.