ಶೂಟಿಂಗ್: ರಜತ ಗೆದ್ದ ಹೀನಾ ಸಿಧು

ನವದೆಹಲಿ: ವಿಶ್ವದ ನಂಬರ್ 2 ಏರ್ ಪಿಸ್ತೂಲ್ ಶೂಟರ್, ಭಾರತದ ಹೀನಾ ಸಿಧು ಅವರು ಅಮೆರಿಕದಲ್ಲಿ ನಡೆಯುತ್ತಿರುವ ಐಎಸ್ಎಸ್ ವಿಶ್ವಕಪ್ ಶೂಟಿಂಗ್ನಲ್ಲಿ ಆಕರ್ಷಕ ಪ್ರದರ್ಶನ ನೀಡುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಲೂಧಿಯಾನ ಮೂಲದ 24 ವರ್ಷದ ಶೂಟರ್ ನಾಲ್ಕು ಸುತ್ತುಗಳಲ್ಲಿ ಆಕರ್ಷಕ ಪ್ರದರ್ಶನ ನೀಡಿ 98, 96, 96, 96 ಅಂಕ ಗಳಿಸಿ, ಒಟ್ಟು 386 ಅಂಕ ಪಡೆದುಕೊಳ್ಳುವ ಮೂಲಕ ಅವರು ಬೆಳ್ಳಿಗೆ ಕೊರಳೊಡ್ಡಿದರು. ಈಗ ಹೀನಾ ಅವರು ವಿಶ್ವಕಪ್ನಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಭಾರತದ ಆಟಗಾರ್ತಿ ಎನಿಸಿದ್ದಾರೆ. ಇದರೊಂದಿಗೆ ಹೀನಾ ಅವರು ಅಂತಾರಾಷ್ಟ್ರೀಯಮಟ್ಟದಲ್ಲಿ ಸತತ ಮೂರನೇ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ನವೆಂಬರ್ನಲ್ಲಿ ಮ್ಯೂನಿಚ್ನಲ್ಲಿ ನಡೆದ ವಿಶ್ವಕಪ್ ಮತ್ತು ಕಳೆದ ತಿಂಗಳು ಕುವೈತ್ನಲ್ಲಿ ನಡೆದ ಏಷ್ಯಾ ಏರ್ಗನ್ ಚಾಂಪಿಯನ್ಶಿಪ್ನಲ್ಲೂ ಹೀನಾ ಪ್ರಶಸ್ತಿ ಗೆದ್ದುಕೊಂಡಿದ್ದರು.
'ಈ ಪ್ರಶಸ್ತಿಯೊಂದಿಗೆ ಹೀನಾ ಅವರು ವಿಶ್ವದ ನಂಬರ್ 1ನೇ ಸ್ಥಾನಕ್ಕೇರಿದ್ದಾರೆ. ಪ್ರಸಕ್ತ ಅವರು ವಿಶ್ವದ 2ನೇ ರ್ಯಾಂಕಿಂಗ್ ಹೊಂದಿರುವ ಆಟಗಾರ್ತಿ ಎನಿಸಿದ್ದಾರೆ' ಎಂದು ರಾಷ್ಟ್ರೀಯ ರೈಫಲ್ ಸಂಸ್ಥೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


