ಕ್ರೀಡೆ

ಶುಮಾಕರ್‌ಗೆಮನೆಯಲ್ಲೇ ಆಸ್ಪತ್ರೆ

Published On :

ಲಂಡನ್: ಸ್ಕೀಯಿಂಗ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೂರು ತಿಂಗಳು ಕಾಲ ಆಸ್ಪತ್ರೆಯಲ್ಲಿ ಕೋಮಾದಲ್ಲಿರುವ ಫಾರ್ಮುಲಾ 1 ಮಾಜಿ ಚಾಂಪಿಯನ್ ಮೈಕೆಲ್ ಶುಮಾಕರ್‌ಗೆ ಅವರ ನಿವಾಸದಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಅವರ ಪತ್ನಿ ಕೋರಿನ್ನಾ ಶುಮಾಕರ್ ಸಜ್ಜಾಗಿದ್ದಾರೆ.
ಸ್ವೀಜರ್ಲೆಂಡ್‌ನ ಲೇಕ್ ಜಿನೇವಾದಲ್ಲಿರುವ 10 ಮಿಲಿಯನ್ ಪೌಂಡ್ ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಸಿದ್ಧಪಡಿಸಲಾಗುತ್ತಿದೆ. ಶುಮಾಕರ್‌ಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಒದಗಿಸಲು ಒಟ್ಟು 500 ಮಿಲಿಯನ್ ಪೌಂಡ್ ಹಣವನ್ನು ಕೋರಿನ್ನಾ ಉಪಯೋಗಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಶುಮಾಕರ್ ಕೋಮಾದಿಂದ ಹೊರಬರುವ ಸಾಧ್ಯತೆಗಳಿಲ್ಲ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ. ಆದಾಗ್ಯೂ, ಅವರನ್ನು ಮನೆಗೆ ಕರೆದುಕೊಂಡು ಹೋಗಲು ಕೋರಿನ್ನಾ ಮನ ಮಾಡಿದ್ದಾರಂತೆ. ಡಿಸೆಂಬರ್ 29ರಂದು ಸ್ಕೀಯಿಂಗ್ ಅಪಘಾತದಲ್ಲಿ ಮೈಕೆಲ್ ಶುಮಾಕರ್ ಅವರು ತೀವ್ರವಾಗಿ ಗಾಯಗೊಂಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ತುರ್ತು ನಿಗಾ ಘಟಕದಲ್ಲೇ ಇದ್ದಾರೆ. ಈ ವಾರದ ಆರಂಭದಲ್ಲಿ ಫಾರ್ಮುಲಾ 1 ಮಾಜಿ ಮುಖ್ಯ ವೈದ್ಯರಾದ ಗ್ಯಾರಿ ಹಾರ್ಟಿಸ್ಟೈನ್ ಅವರು, ಶುಮಾಕರ್ ಬಗ್ಗೆ ಕೆಟ್ಟ ಸುದ್ದಿ ಕೇಳಲು ಸಿದ್ಧರಾಗಿರಿ ಎಂದು ಅಭಿಮಾನಿಗಳಿಗೆ ಹೇಳಿದ್ದರು. ಆದರೆ, ಶುಮಾಕರ್ ಕುಟುಂಬ ಮಾತ್ರ ಅವರನ್ನು ಬದುಕಿಸಿಕೊಳ್ಳುವ ವಿಶ್ವಾಸವನ್ನು ಬಿಟ್ಟುಕೊಟ್ಟಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.