ಪಂದ್ಯಾವಳಿಯಲ್ಲಿ ಎಲ್ಲರಿಗೂ ಅವಕಾಶ
ಬೆಂಗಳೂರು: ಐಪಿಎಲ್ 7ನೇ ಆವೃತ್ತಿಯಲ್ಲಿ ದುಬಾರಿ ಆಟಗಾರನಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಯ್ಕೆಯಾಗಿರುವ ಯುವರಾಜ್ ಸಿಂಗ್, ಐಪಿಎಲ್ 7ನೇ ಆವೃತ್ತಿಯಲ್ಲಿ ಈಗಲೂ ಎಲ್ಲಾ ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶಿಸುವ ಅವಕಾಶವನ್ನು ಹೊಂದಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಯುಎಇಯಲ್ಲಿನ ಮೊದಲ ಹಂತದ ಪಂದ್ಯಾವಳಿ ಮುಕ್ತಾಯದ ವೇಳೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ ಸಹ, ಉಳಿದ ಎಲ್ಲಾ ತಂಡಗಳೂ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ನಾಕೌಟ್ ಹಂತಕ್ಕೆ ಪ್ರವೇಶಿಸುವ ಅವಕಾಶವಿದೆ ಎಂದು ತಿಳಿಸಿದ್ದಾರೆ.
ಆರ್ಸಿಬಿ ತಂಡದ ವೆಬ್ಸೈಟ್ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಯುವರಾಜ್, ಪಂದ್ಯಾವಳಿಯಲ್ಲಿ ಒಂದೆರಡು ತಂಡಗಳು ಅಗ್ರಸ್ಥಾನದಲ್ಲಿ ಮುಂದುವರಿಯುತ್ತಿವೆಯಾದರೂ, ಆರ್ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಂತಹ ತಂಡಗಳೂ ಸಹ ಪಂದ್ಯಾವಳಿಯಲ್ಲಿ ಮತ್ತೆ ಗೆಲವಿನ ಲಯಕ್ಕೆ ಮರಳುವ ಮೂಲಕ ತಮ್ಮ ಅದೃಷ್ಟ ಬದಲಿಸಿಕೊಳ್ಳುವ ಅವಕಾಶವಿದೆ. ಈ ಕ್ರೀಡೆಯಲ್ಲಿ ಏನುಬೇಕಾದರೂ ನಡೆಯುತ್ತದೆ. ಹಾಗಾಗಿ ನನ್ನ ಅನುಭವದ ಪ್ರಕಾರ ಎಲ್ಲಾ ತಂಡಗಳು ಅವಕಾಶ ಹೊಂದಿವೆ ಎಂದು ಯುವರಾಜ್ ತಿಳಿಸಿದ್ದಾರೆ. ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಿದ್ದೇ ಆದಲ್ಲಿ ನಾವು ಮತ್ತೇ ಅಗ್ರ ಸ್ಥಾನಕ್ಕೇರುವ ಅವಕಾಶವಿದೆ. ಮುಂದಿನ ಪಂದ್ಯಕ್ಕೆ ಕೆಲವು ದಿನಗಳ ವಿಶ್ರಾಂತಿ ದೊರೆತಿದ್ದು, ನಾವು ಮತ್ತೆ ಉಮ್ಮಸ್ಸಿನಿಂದ ಕಣಕ್ಕಿಳಿಯಲಿದ್ದೇವೆ. ತವರು ಅಭಿಮಾನಿಗಳ ಬೆಂಬಲದಿಂದ ಉತ್ತಮ ಪ್ರದರ್ಶನ ನೀಡಿ ಮತ್ತೆ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸಿರುವುದು ತೀವ್ರ ಹಿನ್ನಡೆಯಾಗಿದೆ. ಹಾಗಾಗಿ ಅದರಿಂದ ಆದಷ್ಟುಬೇಗ ಹೊರಬರಬೇಕಿದೆ. ರಾಜಸ್ಥಾನ ವಿರುದ್ಧದ ಪಂದ್ಯ ನಮ್ಮ ಪಾಲಿಗೆ ಕೆಟ್ಟದ್ದಾಗಿತ್ತು. ಇನ್ನು ಉಳಿದ ಎರಡು ಪಂದ್ಯಗಳಲ್ಲಿ ಮಹತ್ವದ ಹಂತದಲ್ಲಿ ಕೈಚೆಲ್ಲಿದ್ದೆವು.
ನಮ್ಮ ತಂಡದಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದಾರೆ. ಸರಿಯಾದ ಕ್ರಮಾಂಕ, ಉತ್ತಮ ಆಟಗಾರರು, ಅತ್ಯುತ್ತಮ ಸಹಾಯಕ ಸಿಬ್ಬಂದಿಯನ್ನು ಹೊಂದಿದ್ದೂ, ಸ್ಪರ್ಧಾತ್ಮಕ ತಂಡವಾಗಿದೆ. ಸತತ ಎರಡು ಗೆಲವಿನಿಂದ ನಾವು ಈ ಬಾರಿಯ ಪಂದ್ಯಾವಳಿಯನ್ನು ಆರಂಭಿಸಿದ್ದೆವು. ನಂತರ ಅದನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಎಡವಿದೆವು. ಈ ಮಾದರಿಯ ಕ್ರಿಕೆಟ್ನಲ್ಲಿ ಎಲ್ಲವೂ ಅಲ್ಪವಧಿಯದ್ದಾಗಿರುತ್ತದೆ. ಸದ್ಯಕ್ಕೆ ಹಿನ್ನಡೆ ಅನುಭವಿಸಿದ್ದರೂ, ಮತ್ತೆ ಲಯ ಕಂಡುಕೊಳ್ಳಲು ಅವಕಾಶವಿರುತ್ತದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

