ಬಿಗಿ ಭದ್ರತೆ ಮಧ್ಯೆ ಆರ್ಸಿಬಿ ತಾಲೀಮು

ಬೆಂಗಳೂರು: ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ತವರು ಅಂಕಣದಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಭರ್ಜರಿ ಸಿದ್ಧತೆಯಲ್ಲಿ ತೊಡಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಕಠಿಣ ತಾಲೀಮಿಗೆ ಅಣಿಯಾಗಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯಕ್ಕಾಗಿ ಉತ್ತಮ ರೀತಿಯಲ್ಲಿ ಸಿದ್ಧತೆಯಲ್ಲಿ ತೊಡಗಿರುವ ರಾಯಲ್ ಚಾಲೆಂಜರ್ಸ್ ಆಟಗಾರರು ಶುಕ್ರವಾರ ಮೈದಾನದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಬೆವರು ಸುರಿಸಿದರು.
ದೈಹಿಕ ತಾಲೀಮಿಗೆ ಹೆಚ್ಚು ಅಣಿಯಾಗುವುದರ ಜೊತೆಗೆ ಫುಟ್ಬಾಲ್ ಆಡುವುದು ಮತ್ತು ವಿವಿಧ ಬಗೆಯ ವ್ಯಾಯಾಮಗಳಿಗೆ ಒಳಗಾಗುವ ಮೂಲಕ ಆಟಗಾರರು ತಮ್ಮ ದೈಹಿಕ ಸಕ್ಷಮತೆಯನ್ನು ಪರೀಕ್ಷಿಸಿಕೊಂಡರು. ನಾಯಕ ಕೊಹ್ಲಿ, ಯುವರಾಜ್ ಸೇರಿದಂತೆ ತಂಡದ ಪ್ರತಿಯೊಬ್ಬ ಆಟಗಾರನೂ ಕಠಿಣ ಅಭ್ಯಾಸ ನಡೆಸಿದ.
ಯುಎಇನಲ್ಲಿ ನಡೆದ ಮೊದಲ ಹಂತದ ಪಂದ್ಯಾವಳಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಕೇವಲ 2 ಗೆಲವು ಮತ್ತು 3 ಸೋಲುಗಳನ್ನು ಕಂಡಿರುವ ರಾಯಲ್ ಚಾಲೆಂಜರ್ಸ್ ಸ್ಥಿತಿ ಉತ್ತಮವಾಗಿಲ್ಲ. ಮೊದಲೆರಡೂ ಪಂದ್ಯಗಳನ್ನು ರೋಚಕವಾಗಿ ಗೆದ್ದು ಕೊಳ್ಳುವ ಮೂಲಕ ಪ್ರಸಕ್ತ ಸಾಲಿನ ಏಳನೇ ಐಪಿಎಲ್ ಋತುವನ್ನು ಭರ್ಜರಿಯಾಗಿಯೇ ಆರಂಭಿಸಿದ್ದ ಆರ್ಸಿಬಿ, ನಂತರ ನಡೆದ ಮೂರೂ ಪಂದ್ಯಗಳಲ್ಲೂ ಸತತ ಸೋಲುಂಡು ಅವಮಾನಕ್ಕೊಳಗಾಗಿದೆ. ಈಗ ತವರಿನಲ್ಲಾದರೂ ಆರ್ಸಿಬಿ ಆಟಗಾರರು ಸೋಲಿನ ಬಲೆಯಿಂದ ಹೊರಬರುವ ನಿರೀಕ್ಷೆ ಹೊಂದಲಾಗಿದೆ.
ಪಂದ್ಯಕ್ಕೆ ಬಿಗಿ ಭದ್ರತೆ: ಭಾನುವಾರ ನಡೆಯಲಿರುವ ಪಂದ್ಯಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಚೆನ್ನೈನಲ್ಲಿ ರೈಲಿನಲ್ಲಿ ಸಂಭವಿಸಿದ ಸ್ಫೋಟದ ನಂತರವಂತೂ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಪೊಲೀಸ್ ಇಲಾಖೆ ಪಂದ್ಯದ ದಿನ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲು ಮುಂದಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತೀವ್ರ ನಿಗಾ ವಹಿಸಲಾಗಿದೆ.
ಈ ಮಧ್ಯೆ ಟಿಕೇಟ್ಗಾಗಿ ಭಾರಿ ಬೇಡಿಕೆ ಹೆಚ್ಚಿದೆ. ಅಭಿಮಾನಿಗಳು ಟಿಕೇಟ್ ಖರೀದಿಸಲು ಕ್ರೀಡಾಂಗಣದ ಸುತ್ತ ಜಮಾಯಿಸಿದ್ದಾರೆ. ಪಂದ್ಯ ನಡೆಯುವ ಭಾನುವಾರ ರಜೆ ದಿನವಾಗಿರುವುದರಿಂದ ಕ್ರೀಡಾಂಗಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಹರಿದುಬರುವ ನಿರೀಕ್ಷೆಯಿದೆ.
ಅಂಕಪಟ್ಟಿ
ತಂಡ ಪಂದ್ಯ ಜಯ ಸೋಲು ಅಂಕ ಸರಾಸರಿ
ಕಿಂಗ್ಸ್ ಇಲೆವೆನ್ ಪಂಜಾಬ್ 5 5 0 10 +1.334
ಚೆನ್ನೈ ಸೂಪರ್ ಕಿಂಗ್ಸ್ 5 4 1 8 +1.050
ರಾಜಸ್ಥಾನ ರಾಯಲ್ಸ್ 5 3 2 6 +0.400
ಕೋಲ್ಕತಾ ನೈಟ್ ರೈಡರ್ಸ್ 5 2 3 4 +0.154
ರಾಯಲ್ ಚಾಲೆಂಜರ್ಸ್ ಬೆಂಗಳೂರು 5 2 3 4 -0.207
ಸನ್ರೈಸರ್ಸ್ ಹೈದರಾಬಾದ್ 5 2 3 4 -0.642
ಡೆಲ್ಲಿ ಡೇರ್ಡೆವಿಲ್ಸ್ 5 2 3 4 -1.116
ಮುಂಬೈ ಇಂಡಿಯನ್ಸ್ 5 0 5 0 -0.942
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


