ಕ್ರೀಡೆ

ಬೇಗೂರು ಕೊಲ್ಲಿಯಲ್ಲಿ ರೋಮಾಂಚಕ ರ್ಯಾಲಿ

Published On :

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಬೇಗೂರು ಕೊಲ್ಲಿಯಲ್ಲಿ ಭಾನುವಾರ ದ್ವಿಚಕ್ರ, ಚತುಷ್ಚಕ್ರ ವಾಹನಗಳ ಅಬ್ಬರ. ಸಾಹಸಿ ಬೈಕ್ ಸವಾರರ ದಂಡು ಧೂಳೆಬ್ಬಿಸುತ್ತ ಸಾಗುತ್ತಿದ್ದರೆ ಕ್ರೀಡಾಪ್ರಿಯರು ರೋಮಾಂಚನಗೊಳ್ಳುತ್ತಿದ್ದರು.
ಬೇಗೂರುಕೊಲ್ಲಿಯಲ್ಲಿ ಜೆಸಿಐ ಪೊನ್ನಂಪೇಟೆ ಗೋಲ್ಡನ್ ಸಂಸ್ಥೆ 8ನೇ ವರ್ಷದ ರಾಷ್ಟ್ರಮಟ್ಟದ ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳ ಆಟೊ ಕ್ರಾಸ್ ರ್ಯಾಲಿ ಹಮ್ಮಿಕೊಂಡಿತ್ತು. ಸುಮಾರು 12 ವಿಭಾಗಗಳಲ್ಲಿ ನಡೆದ ಸ್ಪರ್ಧೆಯನ್ನು ಬೇಗೂರುಕೊಲ್ಲಿಯ ತೀತಿರ, ಚೆಕ್ಕೆರ, ಐಪುಮಾಡ, ಇಟ್ಟೀರ ಮತ್ತು ಚೇಂದಿರ ಕುಟುಂಬಸ್ಥರ ಗದ್ದೆಯಲ್ಲಿ ಏರ್ಪಡಿಸಲಾಗಿತ್ತು.
ನೂರಾರು ವಾಹನಗಳು: ನೂರಾರು ವಾಹನಗಳು ಪಾಲ್ಗೊಂಡು ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದವು. ದ್ವಿಚಕ್ರ ವಿಭಾಗದಲ್ಲಿ ಕೂರ್ಗ್ ಲೋಕಲ್ ಓಪನ್, 2 ಸ್ಟ್ರೋಕ್ ಓಪನ್, 4 ಸ್ಟ್ರೋಕ್ ಓಪನ್, ಇಂಡಿಯನ್ ಓಪನ್, ಎಕ್ಸ್‌ಪರ್ಟ್ ಕ್ಲಾಸ್, ನಾಲ್ಕು ಚಕ್ರ ವಿಭಾಗದಲ್ಲಿ ಕೂರ್ಗ್ ಲೋಕಲ್ ಓಪನ್, 800 ಸಿಸಿ, 1001-1400, 1401-1600 ಸಿಸಿ ಹಾಗೂ ಲೇಡಿಸ್ ಕ್ಲಾಸ್ ಮತ್ತು ಮಾರ್ಪಾಡು ಮಾಡಿದ ಜೀಪ್‌ಗಳಿಗೆ ಸ್ಪರ್ಧೆಗಳು ನಡೆದವು. 100ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ನೋಡುಗರನ್ನು ರೋಮಾಂಚನಗೊಳಿಸಿದವು.ಕುಟ್ಟ ವೃತ್ತ ನಿರೀಕ್ಷಕ ದಿವಾಕರ್ ಆಟೊ ಕ್ರಾಸ್‌ಗೆ ಚಾಲನೆ ನೀಡಿದರು.
ಆಶಾಕಿರಣ ತಂಡಕ್ಕೆ ಟ್ರೋಫಿ
ಚಿಕ್ಕಮಗಳೂರು: ನಗರದ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ದೃಷ್ಟಿ ವಿಕಲಚೇತನರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅತಿಥೇಯ ಆಶಾಕಿರಣ ತಂಡ 6 ವಿಕೇಟ್‌ಗಳಿಂದ ಜಯ ಸಾಧಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚ್ಚಿನ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
 ಭಾನುವಾರ ಸಂಜೆ ನಡೆದ ಪಂದ್ಯಾವಳಿಯ ಫೈನಲ್ ಹಣಾಹಣಿಯಲ್ಲಿ ಟಾಸ್ ಗೆದ್ದ ಆಶಾಕಿರಣ ತಂಡ ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡಿತು. ಮೊದಲು ಬ್ಯಾಟಿಂ್ಯ್ಗೆ ಇಳಿದ ಬೆಂಗಳೂರಿನ ಸಮರ್ಥನಂ ತಂಡ ನಿಗದಿತ 12 ಓವರ್ ಗಳಲ್ಲಿ 5 ವಿಕೇಟ್ ನಷ್ಟಕ್ಕೆ 122 ರನ್‌ಗಳಿಸಿತು.
 ನಂತರ ಗೆಲುವಿನ ಮೊತ್ತವನ್ನು ಬೆನ್ನು ಹತ್ತಿದ ಅತಿಥೇಯ ಆಶಾಕಿರಣ ತಂಡ 11 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿ ಜಯ ದಾಖಲಿಸಿತು.
ದುಬೈ, ಭಾರತದಲ್ಲ್ಲಿ ಪೀಟರ್ಸನ್ ಕ್ರಿಕೆಟ್ ಅಕಾಡೆಮಿ
ನವದೆಹಲಿ: ಇಂಗ್ಲೆಂಡ್ ರಾಷ್ಟ್ರೀಯ ತಂಡದಿಂದ ಹೊರಗುಳಿದಿರುವ ಸ್ಟಾರ್ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಅವರು ದುಬೈನಲ್ಲಿ ಬರುವ ಅಕ್ಟೋಬರ್‌ನಲ್ಲಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲು ಮುಂದಾಗಿದ್ದಾರೆ. ಭವಿಷ್ಯದಲ್ಲಿ ಉತ್ತಮ ಪ್ರತಿಭೆಗಳನ್ನು ಬೆಳೆಸಲು ಪೀಟರ್ಸನ್ ಈ ಪ್ರಯತ್ನ ಮಾಡುತ್ತಿದ್ದಾರಂತೆ. ದುಬೈ ನಂತರ ಭಾರತದಲ್ಲಿ ಅಕಾಡೆಮಿ ಸ್ಥಾಪಿಸುವುದು ಅವರ ಮುಖ್ಯ D¥æ§ÞËÚÈÚM}æ.”¶ÁÚßÈÚ ಅಕ್ಟೋಬರ್‌ನಲ್ಲಿ ದುಬೈನಲ್ಲಿ ಅಕಾಡೆಮಿಯನ್ನು ಸ್ಥಾಪಿಸುತ್ತೇವೆ. ಆದರೆ, ಯಾವ ಸ್ಥಳದಲ್ಲಿ ಎಂಬುದು ಇನ್ನೂ ಖಚಿತಪಟ್ಟಿಲ್ಲ. ನನ್ನ ಅಕಾಡೆಮಿಯಲ್ಲಿ 7 ವರ್ಷದಿಂದ 18 ವರ್ಷದ ಮಕ್ಕಳು ತರಬೇತಿ ®Úsæ¾Ú߯¥Û§Áæ’ ಎಂದು ಪೀಟರ್ಸನ್ ~ØÒ¥Û§Áæ.”@OÛsæÉß¾Úᒀ ವಿವಿಧ ರೀತಿಯ ತರಬೇತಿ ನೀಡಲಾಗುತ್ತದೆ. ಎರಡು ವಾರಗಳ ಕೋರ್ಸ್‌ಗಳಲ್ಲಿ ಪಾಲ್ಗೊಳ್ಳುವ ವಿಶ್ವದ ಎಲ್ಲ ಮಕ್ಕಳನ್ನು ನಾವು ÔÚßÂ¥ÚßM¸ÑÚÆ¥æ§ÞÈæ’ ಎಂದು ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ~ØÒ¥Û§Áæ.”«Û«Úß ಅಕಾಡೆಮಿ ಸ್ಥಾಪಿಸಬೇಕೆಂದಿರುವ ಸ್ಥಳಗಳಲ್ಲಿ ಭಾರತವೂ ಒಂದು. ಹೀಗಾಗಿ ನನ್ನ ಮುಂದಿನ ಗುರಿ ಭಾರತವೇ AW¥æ’ ಎಂದಿದ್ದಾರೆ.
ಕೊಹ್ಲಿ, ಪೂಜಾರ ಪ್ರಮುಖರು: ಮುಂಬರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ಭಾರತದ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ್ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಡೋಪಿಂಗ್ ಜಾಗೃತಿಗೆ
ತಜ್ಞರ ಸಮಿತಿ ರಚನೆ
ನವದೆಹಲಿ: ಅಥ್ಲೀಟ್‌ಗಳಲ್ಲಿ ತನ್ನ ಶೈಕ್ಷಣಿಕ ಕಾರ್ಯಕ್ರಮದ ಜಾಗೃತಿ ಮೂಡಿಸಲು, ರಾಷ್ಟ್ರೀಯ ಡೋಪಿಂಗ್ ನಿಗ್ರಹ ಸಂಸ್ಥೆ, ತಜ್ಞರ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿ ಅಥ್ಲೀಟ್‌ಗಳನ್ನು ಗುರುತಿಸಿ ಅವರಿಗೆ ಡೋಪಿಂಗ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ತನ್ನ ಕಾರ್ಯಕ್ರಮವನ್ನು ನಿಖರವಾಗಿ ಜಾರಿಗೆ ತರಲು ಯೋಜನೆಯನ್ನು ಹೆಣೆಯುತ್ತಿದೆ.ಡೋಪಿಂಗ್ ಬಗ್ಗೆ ಜಾಗೃತಿ ಮೂಡಿಸುವ ಕುರಿತು ಆಂದೋಲನದ ಮಹತ್ವಾಕಾಂಕ್ಷೆಯೊಂದಿಗೆ ಈ ಸಮಿತಿ ಡೋಪಿಂಗ್ ಶೈಕ್ಷಣಿಕ ಯೋಜನೆಗಳನ್ನು ರೂಪಿಸಲಿದೆ. ಪ್ರೋ. ಸಿ.ಡಿ ತ್ರಿಪಾಠಿ ಅವರು ಆಯೋಗದ ನಾಯಕತ್ವ ವಹಿಸಿಕೊಂಡಿದ್ದು, ಡಾ. ಪಿಎಸ್‌ಎಂ ಚಂದ್ರನ್, ಚೆಸ್ ಆಟಗಾರ ಭರತ್ ಸಿಂಗ್ ಚೌಹಣ್ ಅವರು ಸಮಿತಿಯ ಸದಸ್ಯರಾಗಿದ್ದಾರೆ.
ಸಬ್ ಜೂನಿಯರ್ ರಾಷ್ಟ್ರೀಯ ಹಾಕಿ
ವಡೋದರಾ: ಹಿದಿನಾರು ವರ್ಷದ ಬಾಲಕರ 4ನೇ ಸಬ್ ಜೂನಿಯರ್ ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್ ಮೇ 10ರಿಂದ ವಡೋದರಲ್ಲಿ ನಡೆಯಲಿದೆ.
ಪಂದ್ಯಾವಳಿಯಲ್ಲಿ ಒಟ್ಟು 21 ರಾಜ್ಯಗಳು ಭಾಗವಹಿಸುತ್ತಿವೆ.ಬಿ ಡಿವಿಷನ್ ಪಂದ್ಯಾವಳಿಯನ್ನು ಲೀಗ್ ಮತ್ತು ನಾಕೌಟ್ ಆಧಾರದ ಮೇಲೆ ನಡೆಸಲಾಗುತ್ತಿದೆ. ಅಲ್ಲದೆ ಎಲ್ಲ ತಂಡಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ.
ಆಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಭಾರತೀಯ ಕ್ರೀಡಾ ಪ್ರಾಧಿಕಾರ, ವಿದರ್ಭ, ಹಿಮಾಚಲ ಪ್ರದೇಶ, ಡೆಲ್ಲಿ, ರಾಜಸ್ಥಾನ, ಪಾಂಡಿಚೇರಿ, ಸಿಟಿಜೆನ್ಸ್ ಹಾಕಿ, ಬಂಗಾಳ, ಉತ್ತರಖಂಡ್, ಗೋವಾ, ಒಡಿಶಾ, ಮುಂಬೈ, ಗುಜರಾತ್, ತ್ರಿಪುರ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ.
ಇದೇ ಮೊದಲ ಬಾರಿಗೆ ಗುಜರಾತ್ ರಾಷ್ಟ್ರೀಯ ಸಬ್ ಜೂನಿಯರ್ ಹಾಕಿ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ಪಂದ್ಯಾವಳಿಯಲ್ಲಿ 378 ಆಟಗಾರರು, 42 ಕೋಚ್ ಮತ್ತು ಮ್ಯಾನೇಜರ್‌ಗಳು ಹಾಗೂ 20 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅಂಪೈರ್‌ಗಳು ಮಹತ್ವದ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ.
ಆರ್‌ಬಿಐಗೆ ಜಯ
ಬೆಂಗಳೂರು: ಆರ್‌ಬಿಐ, ಧರ್ಮರಾಜ್ ಯೂನಿಯನ್ ಮತ್ತು ಬೆಂಗಳೂರು ಮಾರ್ಸ್ ತಂಡಗಳು ರಾಜ್ಯ “¸’ ಡಿವಿಜನ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಗೆಲವು ದಾಖಲಿಸಿವೆ. ಅಕ್ಕಿತಿಮ್ಮನಹಳ್ಳಿಯಲ್ಲಿರುವ ಕರ್ನಾಟಕ ಹಾಕಿ ಸಂಸ್ಥೆ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯಗಳಲ್ಲಿ ಆರ್‌ಬಿಐ ತಂಡ 5-0 ಗೋಲುಗಳಿಂದ ಇಸ್ರೊ ತಂಡವನ್ನು ಸೋಲಿಸಿತು. ಮಿನರ್ವ ತಂಡ ಏಕೈಕ ಗೋಲಿನಿಂದ ಶ್ರೀ ಗಜಾನನ ವಿರುದ್ಧ ಜಯ ದಾಖಲಿಸಿತು.
ದಿನದ ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಮಾರ್ಸ್ ಮತ್ತು ಈಗಲ್ಸ್ ತಂಡಗಳು ಗೋಲುರಹಿತ ಡ್ರಾ ಫಲಿತಾಂಶಕ್ಕೆ ತೃಪ್ತಿ ಹೊಂದಿದವು.
ಇಂದಿನಿಂದ ಸೂಪರ್ ಡಿವಿಜನ್: ಸೋಮವಾರದಿಂದ ಸೂಪರ್ ಡಿವಿಜನ್ ಪಂದ್ಯಾವಳಿ ಆರಂಭವಾಗಲಿದ್ದು ಬೆಂಗಳೂರು ಫುಟ್ಬಾಲ್ ಕ್ಲಬ್ ಮತ್ತು ಸೌತ್ ಯುನೈಟೆಡ್ ತಂಡಗಳು ಸೆಣಸಲಿವೆ.
3 ಆಟಗಾರರನ್ನು ಕೈಬಿಟ್ಟ ಡೆಲ್ಲಿ
ನವದೆಹಲಿ: ಡೆಲ್ಲಿ ಡೇರ್‌ಡೆವಿಲ್ಸ್ ತಂಡ ತಾತ್ಕಾಲಿಕವಾಗಿ ತನ್ನ ಮೂವರು ದೇಶೀಯ ಆಟಗಾರರನ್ನು ಮನೆಗೆ ಕಳುಹಿಸಿದೆ. ಸದ್ಯಕ್ಕೆ ಈ ಆಟಗಾರರ ಸೇವೆ ತಂಡಕ್ಕೆ ಲಭ್ಯವಿಲ್ಲದ ಕಾರಣ ಡೆಲ್ಲಿ ಡೇರ್‌ಡೆವಿಲ್ಸ್ ಫ್ರಾಂಚೈಸಿ ಈ ನಿರ್ಧಾರ ತೆಗೆದುಕೊಂಡಿದೆ.
ಸ್ಥಳೀಯ ಆಟಗಾರ ಮಿಲಿಂದ್‌ಕುಮಾರ್, ಹರ್ಯಾಣದ ಆಫ್ ಸ್ಪಿನ್ನರ್ ಜಯಂತ್ ಯಾದವ್ ಮತ್ತು ಕರ್ನಾಟಕದ ಯುವ ಮಧ್ಯಮ ವೇಗಿ ಎಚ್.ಎಸ್. ಶರತ್ ಅವರನ್ನು ಕೈಬಿಡಲಾಗಿದೆ. ಇದರೊಂದಿಗೆ ಡೆಲ್ಲಿ ತಂಡದಲ್ಲಿನ ಆಟಗಾರರ ಸಂಖ್ಯೆ 23ರಿಂದ 20ಕ್ಕಿಳಿದಿದೆ. ತಾತ್ಕಾಲಿಕವಾಗಿ ಈ ಮೂವರೂ ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ. ಅಗತ್ಯ ಬಿದ್ದಾಗ ಅವರನ್ನು ಪುನಃ ತಂಡಕ್ಕೆ ಆಹ್ವಾನಿಸುವುದಾಗಿ ಫ್ರಾಂಚೈಸಿ ತಿಳಿಸಿರುವುದಾಗಿ ಐಪಿಎಲ್ ಮೂಲಗಳು ಹೇಳಿವೆ. ಈ ಮಧ್ಯೆ ದಕ್ಷಿಣ ಆಫ್ರಿಕಾದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ವೀಸಾ ಪ್ರಕ್ರಿಯೆ ವಿಳಂಬವಾಗುವ ಹಿನ್ನೆಲೆಯಲ್ಲಿ ಮೇ 7ರಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ಅವರ ಸೇವೆ ಲಭ್ಯವಾಗುವುದು ಖಚಿತವಿಲ್ಲ. ತಾಹಿರ್ ಅವರು ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿರುವ ನಾಥನ್ ಕೌಲ್ಟರ್-ನೀಲ್ ಸ್ಥಾನವನ್ನು ತುಂಬಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.