ಸನ್ಶೈನ್ನಿಂದ ರಾಯಲ್ಸ್ ಬರ್ನ್

ಅಹ್ಮದಾಬಾದ್: ಉತ್ತಮ ಬೌಲಿಂಗ್ನಿಂದ ಅಲ್ಪ ಗುರಿಯನ್ನು ಪಡೆದರೂ, ಸನ್ರೈಸರ್ಸ್ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ ಏಳನೇ ಆವೃತ್ತಿಯ ಗುರುವಾರದ ಪಂದ್ಯದಲ್ಲಿ 32 ರನ್ಗಳ ಅಂತರದಿಂದ ಹೀನಾಯ ಸೋಲನುಭವಿಸಿದೆ.
ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಶೇನ್ ವ್ಯಾಟ್ಸನ್, ಸನ್ರೈಸರ್ಸ್ಗೆ ಮೊದಲು ಬ್ಯಾಟಿಂಗ್ ಮಾಡಲು ಆಮಂತ್ರಣ ನೀಡಿದರು. ನಂತರ ಬ್ಯಾಟಿಂಗ್ಗೆ ಇಳಿದ ಸನ್ರೈಸರ್ಸ್ ತಂಡ 20 ಓವರ್ಗಳಲ್ಲಿ 9 ವಿಕೆಟ್ಗೆ 134 ರನ್ ಕಲೆ ಹಾಕುವಲ್ಲಿ ಯಶಸ್ವಿಯಾಯಿತು. ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡ 19.5 ಓವರ್ಗಳಲ್ಲಿ 102 ರನ್ಗಳಿಗೆ ಸರ್ವ ಪತನವಾಯಿತು.
ಪಂದ್ಯಾವಳಿಯಲ್ಲಿ ಸೋಲಿಗಿಂತ ಹೆಚ್ಚು ಗೆಲವಿನ ಸಿಹಿ ಸವಿದಿದ್ದ ರಾಯಲ್ಸ್ ಪಡೆ, ಈ ಪಂದ್ಯದಲ್ಲಿ ಹೀನಾಯ ಸೋಲಿಗೆ ಶರಣಾಯಿತು. ಈ ಪಂದ್ಯಕ್ಕೂ ಮೊದಲು ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದು ಹೀನಾಯ ಸ್ಥಿತಿಯಲ್ಲಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ, ಈ ಪಂದ್ಯ ಮಹತ್ವದ್ದಾಗಿ ಪರಿಣಮಿಸಿತ್ತು. ಈ ಗೆಲವಿನಿಂದ ಸನ್ರೈಸರ್ಸ್ ತಂಡ ಪ್ಲೇ ಆಫ್ ಹಂತಕ್ಕೆ ತಲುಪುವ ಹಾದಿಯಲ್ಲಿ ತಮ್ಮ ಹೋರಾಟ ಮುಂದುವರಿಸಿದೆ. ಈಗ ಒಟ್ಟು 6 ಅಂಕಗಳನ್ನು ಸಂಪಾದಿಸಿರುವ ಸನ್ರೈಸರ್ಸ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.
ನಿರಂತರ ಕುಸಿತ: ಹೈದರಾಬಾದ್ ತಂಡಕ್ಕೆ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಶಿಖರ್ ಧವನ್, ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡದಲ್ಲಿ ಮಂದಹಾಸ ಮೂಡುವಂತೆ ಮಾಡಿದರು. ಆದರೆ ಕೇವಲ 33 ರನ್ಗಳಿಗೆ ಇನಿಂಗ್ಸ್ ಅಂತ್ಯಗೊಳಿಸುವ ಮೂಲಕ ನಿರಾಸೆ ಮೂಡಿಸಿದರು.
ಕೇವಲ 20 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ ಧವನ್ 33 ರನ್ ದಾಖಲಿಸಿದ್ದರು. ನಂತರ ಬಂದ ಯಾವೊಬ್ಬ ಬ್ಯಾಟ್ಸ್ಮನ್ ಕ್ರೀಸ್ನಲ್ಲಿ ನಿಂತು ರಾಯಲ್ಸ್ ಬೌಲರ್ಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ. ಎರಾನ್ ಫಿಂಚ್ (9) ಭಾಟಿಯಾ ಎಸೆತದಲ್ಲಿ ರಹಾನೆಗೆ ಕ್ಯಾಚ್ ನೀಡಿದರೆ, ಕೆ.ಎಲ್ ರಾಹುಲ್ (18) ಹಾಗೂ ನಮನ್ ಓಜಾ (17) ಉತ್ತಮ ಆರಂಭದ ಹೊರತಾಗಿಯೂ ಭಾಟಿಯಾ ಎಸೆತದಲ್ಲಿ ಬೌಲ್ಡ್ ಆದರು. ಇನ್ನು ತಂಡದ ಸ್ಫೋಟಕ ಬ್ಯಾಟ್ಸ್ಮನ್ ವಾರ್ನರ್ (6) ತಾಂಬೆ ಸ್ಪಿನ್ ಮೋಡಿಯಲ್ಲಿ ಹಳ್ಳಕ್ಕೆ ಬಿದ್ದರು.
ಈ ವೇಳೆ 6ನೇ ವಿಕೆಟ್ಗೆ ಜತೆಯಾದ ಮೊಯ್ಸಿಸ್ ಹೆನ್ರಿಕ್ಸ್ ಹಾಗೂ ಇರ್ಫಾನ್ ಪಠಾಣ್ ರಕ್ಷಣಾತ್ಮಕ ಆಟಕ್ಕೆ ಮುಂದಾದರಾದರೂ ಯಶಸ್ವಿಯಾಗಲಿಲ್ಲ. ಹೆನ್ರಿಕ್ಸ್ (9), ಕರಣ್ ಶರ್ಮಾ (0), ಡೇಲ್ ಸ್ಟೇಯ್ನ್ (9) ಪೆವಿಲಿಯನ್ ಹಾದಿ ಹಿಡಿದಿದ್ದು, ತಂಡಕ್ಕೆ ಗಾಯದ ಮೇಲೆ ಬರೆಎಳೆದಂತಾಯಿತು. ಹಾಗಾಗಿ ಈ ವೇಳೆ ತಂಡದ ರನ್ ವೇಗ ಕುಂಟುತ್ತಾ ಸಾಗಿತು.
ಅಂತಿಮವಾಗಿ ಅಜೇಯರಾಗುಳಿದ ಇರ್ಫಾನ್ ಪಠಾಣ್ (21) ತಂಡ 130ರ ಗಡಿ ದಾಟುವಂತೆ ನೋಡಿಕೊಂಡರು. ರಾಜಸ್ಥಾನ ರಾಯಲ್ಸ್ ತಂಡದ ಪರ ಶೇನ್ ವ್ಯಾಟ್ಸನ್ ಹಾಗೂ ರಜತ್ ಭಾಟಿಯಾ ತಲಾ 3 ವಿಕೆಟ್ ಪಡೆದು ಮಿಂಚಿದರು.
ಕುಸಿದ ರಾಯಲ್ಸ್: ಅಲ್ಪ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆರಂಭಿಕರಾದ ರಹಾನೆ (0), ಕರುಣ್ ನಾಯರ್ (12) ಬೇಗನೆ ವಿಕೆಟ್ ಒಪ್ಪಿಸಿದರು.
ಆದರೆ ನಂತರ ಬಂದ ಬ್ಯಾಟ್ಸ್ಮನ್ಗಳು ಸಹ ಉತ್ತಮ ಜತೆಯಾಟ ನೀಡುವಲ್ಲಿ ವಿಫಲರಾದರು. ಸ್ಯಾಮ್ಸನ್ (16), ವ್ಯಾಟ್ಸನ್ (11), ಬಿನ್ನಿ (12), ಸ್ಮಿತ್ (22), ಭಾಟಿಯಾ (4), ಫಾಕ್ನರ್ (4) ಹೀಗೆ ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಪರೇಡ್ ನಡೆಸುತ್ತಾ ತಂಡ ಸೋಲಿನತ್ತ ಹೆಜ್ಜೆ ಹಾಕುವಂತಾಯಿತು ರನ್ಗಳಿಗೆ ವಿಕೆಟ್ ಒಪ್ಪಿಸಿದ್ದು, ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು.
ಅಂತಿಮವಾಗಿ ರಾಜಸ್ಥಾನ ರಾಯಲ್ಸ್ ತಂಡ ಕೇವಲ 102 ರನ್ಗಳಿಗೆ ತನ್ನ ಇನಿಂಗ್ಸ್ಗೆ ಅಂತ್ಯವಾಡಿತು.
ಹ್ಯಾಟ್ರಿಕ್ ಪಡೆದ ಶೇನ್ ವ್ಯಾಟ್ಸನ್
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಶೇನ್ ವ್ಯಾಟ್ಸನ್ ಈ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. 3.6ನೇ ಎಸೆತದಲ್ಲಿ ಧವನ್ ಅವರನ್ನು ಬೌಲ್ಡ್ ಮಾಡಿದ್ದ ವ್ಯಾಟ್ಸನ್, ನಂತರ 17ನೇ ಓವರ್ ಮಾಡಲು ಆಗಮಿಸಿದರು. 16.1ನೇ ಎಸೆತದಲ್ಲಿ ಹೆನ್ರಿಕ್ಸ್ ವಿಕೆಟ್ ಪಡೆದ ವ್ಯಾಟ್ಸನ್, ನಂತರ 16.2ನೇ ಎಸೆತದಲ್ಲಿ ಕರಣ್ ಶರ್ಮಾ ವಿಕೆಟ್ ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು. ಇದೇ ಆವೃತ್ತಿಯಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸ್ಪಿನ್ನರ್ ಪ್ರವಿಣ್ ತಾಂಬೆ ಹ್ಯಾಟ್ರಿಕ್ ಪಡೆದಿದ್ದರು. ಈಗ ವ್ಯಾಟ್ಸನ್ ಈ ಸಾಧನೆ ಮಾಡಿದ್ದು, ಪಂದ್ಯಾವಳಿಯಲ್ಲಿ ಎರಡನೇ ಹ್ಯಾಟ್ರಿಕ್ ಆಗಿದೆ.
ಸ್ಕೋರ್ ವಿವರ
ಸನ್ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 9 ವಿಕೆಟ್ಗೆ 134
ಶಿಖರ್ ಧವನ್ ಬಿ ವ್ಯಾಟ್ಸನ್ 33, ಎರಾನ್ ಫಿಂಚ್ ಸಿ ರಹಾನೆ ಬಿ ಭಾಟಿಯಾ 9, ಕೆ.ಎಲ್ ರಾಹುಲ್ ಬಿ ಭಾಟಿಯಾ 18, ನಮನ್ ಓಜಾ ಬಿ ಭಾಟಿಯಾ 17, ಡೇವಿಡ್ ವಾರ್ನರ್ ಸ್ಟಂಪ್ ಸ್ಯಾಮ್ಸನ್ ಬಿ ತಾಂಬೆ 6, ಮೊಯ್ಸಿಸ್ ಹೆನ್ರಿಕ್ಸ್ ಸಿ ರಹಾನೆ ಬಿ ವ್ಯಾಟ್ಸನ್ 9, ಇರ್ಫಾನ್ ಪಠಾಣ್ ಅಜೇಯ 21, ಕರಣ್ ಶರ್ಮಾ ಸಿ ಸ್ಯಾಮ್ಸನ್ ಬಿ ವ್ಯಾಟ್ಸನ್ 0, ಡೇಲ್ ಸ್ಟೇಯ್ನ್ ರನೌಟ್ (ಸ್ಯಾಮ್ಸನ್) 9, ಅಮಿತ್ ಮಿಶ್ರಾ ರನೌಟ್ (ಸ್ಯಾಮ್ಸನ್) 0, ಭುವನೇಶ್ವರ್ ಕುಮಾರ್ ಅಜೇಯ 0
ಇತರೆ: (ಬೈ 5, ಲೆಗ್ ಬೈ 5, ವೈಡ್ 2)
ವಿಕೆಟ್ ಪತನ: 1-37, 2-55, 3-67, 4-85, 5-89, 6-106, 7-106
ಬೌಲಿಂಗ್ ವಿವರ: ಕೇನ್ ರಿಚರ್ಡ್ಸನ್ 4-0-28-0, ಧವಳ್ ಕುಲಕರ್ಣಿ 2-0-19-0, ಶೇನ್ ವ್ಯಾಟ್ಸನ್ 2-0-13-3, ಜೇಮ್ಸ್ ಫಾಕ್ನರ್ 4-0-20-0, ರಜತ್ ಭಾಟಿಯಾ 4-0-23-3, ಪ್ರವಿಣ್ ತಾಂಬೆ 4-0-21-1
ರಾಜಸ್ಥಾನ ರಾಯಲ್ಸ್ 19.5 ಓವರ್ಗಳಲ್ಲಿ 102
ಅಜಿಂಕ್ಯ ರಹಾನೆ ಸಿ ವಾರ್ನರ್ ಬಿ ಕುಮಾರ್ 0, ನಾಯರ್ ಸಿ ನಮನ್ ಬಿ ಸ್ಟೇಯ್ನ್ 12, ಸ್ಯಾಮ್ಸನ್ ಬಿ ಕರಣ್ ಶರ್ಮಾ 16, ವ್ಯಾಟ್ಸನ್ ಸಿ ನಮನ್ ಬಿ ಹೆನ್ರಿಕ್ಸ್ 11, ಬಿನ್ನಿ ರನೌಟ್ (ವಾರ್ನರ್) 12, ಸ್ಟೀವ್ ಸ್ಮಿತ್ ಸಿ ಪಠಾಣ್ ಬಿ ಸ್ಟೇಯ್ನ್ 22, ರಜತ್ ಭಾಟಿಯಾ ಸಿ ವಾರ್ನರ್ ಬಿ ಭುವನೇಶ್ವರ್ 4, ಜೇಮ್ಸ್ ಫಾಕ್ನರ್ ಸಿ ಫಿಂಚ್ ಬಿ ಭುವನೇಶ್ವರ್ 4, ಕೇನ್ ರಿಚರ್ಡ್ಸನ್ ಸಿ ಮತ್ತು ಬಿ ಭುವನೇಶ್ವರ್ 1, ಧವಳ್ ಕುಲಕರ್ಣಿ ಅಜೇಯ 7, ಪ್ರವಿಣ್ ತಾಂಬೆ ಸಿ ಸ್ಟೇಯ್ನ್ ಬಿ ಪಠಾಣ್ 3
ಇತರೆ: (ಬೈ 4, ಲೆಗ್ ಬೈ 1, ವೈಡ್ 5) ಒಟ್ಟು 10
ವಿಕೆಟ್ ಪತನ: 1-0, 2-27, 3-37, 4-41, 5-78, 6-82, 7-89, 8-89, 9-91, 10-102
ಬೌಲಿಂಗ್ ವಿವರ: ಭುವನೇಶ್ವರ್ ಕುಮಾರ್ 4-0-14-4, ಡೇಲ್ ಸ್ಟೇಯ್ನ್ 4-0-31-2, ಕರಣ್ ಶರ್ಮಾ 4-0-20-1, ಮೊಯ್ಸಿಸ್ ಹೆನ್ರಿಕ್ಸ್ 2-0-11-1, ಅಮಿತ್ ಮಿಶ್ರಾ 4-0-13-0, ಇರ್ಫಾನ್ ಪಠಾಣ್ 1.5-0-8-1
ಪಂದ್ಯಶ್ರೇಷ್ಠ: ಭುವನೇಶ್ವರ್ ಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


