ಕ್ರೀಡೆ

ಪ್ರಶಸ್ತಿ ಸುತ್ತಿಗೆ ಗುಲ್ಬರ್ಗಾ, ಹುಬ್ಬಳ್ಳಿ ಕ್ಲಬ್

Published On :

ಬೆಳಗಾವಿ: ಗುಲ್ಬರ್ಗಾ ಮತ್ತು ಹುಬ್ಬಳ್ಳಿ ಯಂಗ್ ಸ್ಟಾರ್ ಸ್ಫೋರ್ಟ್ಸ್ ಕ್ಲಬ್ ತಂಡಗಳು ಫೈನಲ್ ಪ್ರವೇಶಿಸಿವೆ.
ನಗರದ ಕ್ಯಾಂಪ್‌ನ ಮೇಜರ್ ಬಿ.ಎ. ಸಯ್ಯದ ಮೆಮೋರಿಯಲ್ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಶುಕ್ರವಾರದ ಪಂದ್ಯಗಳಲ್ಲಿ ಈ ಎರಡೂ ತಂಡಗಳು ಭರ್ಜರಿ ವಿಜಯ ದಾಖಲಿಸಿವೆ. ಶನಿವಾರ ಈ ಎರಡೂ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.
ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಹುಬ್ಬಳ್ಳಿಯ ವಾಸು ಸ್ಫೋರ್ಟ್ಸ್ ಕ್ಲಬ್ ಮತ್ತು ಬೆಳಗಾವಿ ಬಿ. ತಂಡಗಳು ಸೆಣಸಾಡಲಿವೆ.
ಗುಲ್ಬರ್ಗಾಕ್ಕೆ ಗೆಲವು: ಶುಕ್ರವಾರ ಬೆಳಗ್ಗೆ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಗುಲ್ಬರ್ಗಾ ತಂಡವು ಹುಬ್ಬಳ್ಳಿಯ ವಾಸು ಸ್ಫೋರ್ಟ್ಸ್ ಕ್ಲಬ್ ತಂಡವನ್ನು 4-1 ಗೋಲುಗಳಿಂದ ಸೋಲಿಸಿತು.
ಯಂಗ್ ಸ್ಟಾರ್‌ಗೆ ಜಯ: ಅನಂತರ ನಡೆದ ಎರಡನೇ ಸೆಮಿಫೈಲನ್‌ನಲ್ಲಿ ಹುಬ್ಬಳ್ಳಿಯ ಯಂಗ್ ಸ್ಟಾರ್ ಕ್ಲಬ್ ತಂಡವು ಬೆಳಗಾವಿ (ಬಿ) ತಂಡವನ್ನು 10-1 ಗೋಲುಗಳ ಭಾರೀ ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಈ ಪಂದ್ಯ ಏಕಪಕ್ಷೀಯವಾಗಿತ್ತು.
ಶನಿವಾರ ಮಧ್ಯಾಹ್ನ 3.30ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಇದಕ್ಕೂ ಮೊದಲು ಮಧ್ಯಾಹ್ನ 2 ಗಂಟೆಗೆ ತೃತೀಯ ಮತ್ತು ನಾಲ್ಕನೇ ಸ್ಥಾನಕ್ಕೆ ಪಂದ್ಯ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.