ಕ್ರೀಡೆ

ದರ್ಪ ತೋರಿದ ಯುವರಾಜ್

ದರ್ಪ ತೋರಿದ ಯುವರಾಜ್
Published On :

ಬೆಂಗಳೂರು: ಆರಂಭಿಕ ಕುಸಿತದ ನಡುವೆಯು ಯುವರಾಜ್ ಸಿಂಗ್ (83) ಮತ್ತು ಡಿವಿಲಿಯರ್ಸ್ (52) ಅಬ್ಬರದ ಬ್ಯಾಟಿಂಗ್ ನೆರವಿನಿಂದ, ಆತಿಥೇಯ ಆರ್ಸಿಬಿ ತಂಡ ಐಪಿಎಲ್ 7ನೇ ಆವೃತ್ತಿಯ ಭಾನುವಾರದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ಗೆ 191 ರನ್ಗಳ ಕಠಿಣ ಸವಾಲೊಡ್ಡಿದೆ.
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು. ನಂತರ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡ ತಂಡ 190 ರನ್ ಕಲೆ ಹಾಕಿತು. ಕೇವಲ 4 ರನ್ಗೆ ಕೊಹ್ಲಿ ರಿಚರ್ಡ್ಸನ್ಗೆ ವಿಕೆಟ್ ಒಪ್ಪಿಸುವ ಮೂಲಕ ಟೂರ್ನಿಯಲ್ಲಿ ವೈಫಲ್ಯ ಮುಂದುವರಿಸಿದರು. ಇನ್ನು ಅಭಿಮಾನಿಗಳು ನಿರೀಕ್ಷೆ ಹೊಂದಿದ್ದ ಗೇಯ್ಲ್ 25 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 19 ರನ್ ಗಳಿಸಿ ತಾಂಬೆಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿಜಯ್ ಜೋಲ್ ಆರಂಭದಲ್ಲಿ ಆಕರ್ಷಕ ಹೊಡೆತ ಬಾರಿಸಿದರಾದರೂ, ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಜೋಲ್ ಟೆವಾಟಿಯಾಗೆ ವಿಕೆಟ್ ಒಪ್ಪಿಸಿದಾಗ ಆರ್ಸಿಬಿಗೆ ಗಾಯದ ಮೇಲೆ ಬರೆ ಎಳೆದಂತಾಯಿತು.
ಜೀವ ತುಂಬಿದ ಯುವಿ: ಆರಂಭಿಕ ಆಘಾತ ಎದುರಿಸಿದ್ದ ತಂಡದ ಇನಿಂಗ್ಸ್ಗೆ ಜೀವ ತುಂಬಿದ್ದು ಯುವರಾಜ್ ಸಿಂಗ್ (83 ರನ್, 38 ಎಸೆತ, 7 ಬೌಂಡರಿ, 7 ಸಿಕ್ಸರ್).
ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತ ಎಬಿ ಡಿವಿಲಿಯರ್ ಹಾಗೂ ಯುವರಾಡ್ 4ನೇ ವಿಕೆಟ್ಗೆ ಅಬ್ಬರದ 132 ರನ್ಗಳ ಜತೆಯಾಟ ನೀಡಿದರು. ಇನ್ನು ಯುವಿಗೆ ಬೆಂಬಲವಾಗಿ ನಿಂತ ಎಬಿ ಡಿವಿಲಿಯರ್ಸ್ (58 ರನ್, 32 ಎಸೆತ, 1 ಬೌಂಡರಿ, 5 ಸಿಕ್ಸರ್ ಸ್ಫೋಟಿಸುವ ಮೂಲಕ ತಂಡ ಸುಸ್ಥಿತಿಗೆ ತಲುಪಲು ನೆರವಾದರು. ಸತತ ವೈಫಲ್ಯದಿಂದ ಟೀಕೆಗೆ ಗುರಿಯಾಗಿದ್ದ ಯುವರಾಜ್ ಈ ಪಂದ್ಯದಲ್ಲಿ ಉತ್ತರ ನೀಡಿದರು.
ತಂಡದಲ್ಲಿ ಬದಲಾವಣೆ: ಪಂದ್ಯ ಆರ್ಸಿಬಿ ಪಾಲಿಗೆ ಮಹತ್ವದ್ದಾಗಿದ್ದರಿಂದ, ಆಡಳಿತ ಮಂಡಳಿ ತಂಡದಲ್ಲಿ ಕೆಲ ಬದಲಾವಣೆ ಮಾಡಿತ್ತು. ಸಚಿನ್ ರಾಣಾ ಬದಲಿಗೆ ಯುವ ಬ್ಯಾಟ್ಸ್ಮನ್ ವಿಜಯ್ ಜೋಲ್ಗೆ ಸ್ಥಾನ ನೀಡಿದರೆ, ಹರ್ಷದ್ ಪಟೇಲ್ ಬದಲಿಗೆ ಅಶೋಕ್ ದಿಂಡಾ ತಂಡದಲ್ಲಿ ಸ್ಥಾನ ಪಡೆದರು. ಇನ್ನು ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಧವಳ್ ಕುಲಕರ್ಣಿ ಬದಲಿಗೆ ರಾಹುಲ್ ಟೆವಾಟಿಯಾ ಅವರಿಗೆ ಅವಕಾಶ ನೀಡಲಾಗಿತ್ತು.
ಮತ್ತೆ ವರುಣನ ಕರುಣೆ: ಪಂದ್ಯ ಆರಂಭವಾಗಲು ಕೆಲವೇ ಗಂಟೆಗಳು ಬಾಕಿ ಇರುವಾಗ ಕಪ್ಪನೆ ಮೋಡ ಮುಗಿಲಿನಲ್ಲಿ ಕಾಣಿಸುತ್ತಿತ್ತು. ಇದು ಪಂದ್ಯಕ್ಕೆ ಅಡ್ಡಿಯಾಗುವ ಆತಂಕ ಅಭಿಮಾನಿಗಳಲ್ಲಿ ಮೂಡಿತ್ತು. ಆದರೆ ವರುಣ ತನ್ನ ಕರಣೆಯನ್ನು ಮತ್ತೊಮ್ಮೆ ತೋರುವ ಮೂಲಕ ಪಂದ್ಯ ನಿಗದಿತ ಸಮಯಕ್ಕೆ ಆರಂಭವಾಯಿತು.




ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ಗಳಲ್ಲಿ 5 ವಿಕೆಟ್ಗೆ 190
ವಿರಾಟ್ ಕೊಹ್ಲಿ ಸಿ ಭಾಟಿಯಾ ಬಿ ರಿಚರ್ಡ್ಸನ್ 4 (9), ಕ್ರಿಸ್ ಗೇಯ್ಲ್ ಸಿ ಸ್ಯಾಮ್ಸನ್ ಬಿ ತಾಂಬೆ 19 (25), ವಿಜಯ್ ಜೋಲ್ ಸಿ ವ್ಯಾಟ್ಸನ್ ಬಿ ಟೆವಾಟಿಯಾ 16 (14), ಡಿವಿಲಿಯರ್ಸ್ ಸಿ ರಹಾನೆ ಬಿ ಫಾಕ್ನರ್ 58 (32), ಯುವರಾಜ್ ಸಿಂಗ್ ಎಲ್ಬಿ ರಿಚರ್ಡ್ಸನ್ 83 (38), ಅಲ್ಬೀ ಮಾರ್ಕೆಲ್ ಅಜೇಯ 1 (2).ಪಾರ್ಥೀವ್ ಪಟೇಲ್ 2 (1)
ಇತರೆ: (ಲೆಗ್ ಬೈಸ್-1, ವೈಡ್-5) 7
ವಿಕೆಟ್ ಪತನ: 1-6, 2-38, 3-40, 4-172, 5-186.
ಬೌಲಿಂಗ್ ವಿವರ: ಕೇನ್ ರಿಚರ್ಡ್ಸ್ನ್ 4-0-43-2, ಶೇನ್ ವ್ಯಾಟ್ಸನ್ 4-0-35-0, ಜೇಮ್ಸ್ ಫಾಕ್ನರ್ 4-0-42-1, ಪ್ರವೀಣ್ ತಾಂಬೆ 4-0-38-1, ರಾಹುಲ್ ಟೆವಾಟಿಯಾ 3-0-17-1, ರಜತ್ ಭಾಟಿಯಾ 1-0-13-0

ಸೋಮಶೇಖರ್ ಭದ್ರಾವತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.