ಕ್ರೀಡೆ

ನಡಾಲ್, ಶರಪೋವಾಗೆ ಪ್ರಶಸ್ತಿ

ನಡಾಲ್, ಶರಪೋವಾಗೆ ಪ್ರಶಸ್ತಿ
Published On :

ಮ್ಯಾಡ್ರಿಡ್: ರಾಫೆಲ್ ನಡಾಲ್ ಮತ್ತು ಶರಪೋವಾ ಅವರು ಮ್ಯಾಡ್ರಿಡ್ ಓಪನ್ನಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.       ಅಗ್ರ ಶ್ರೇಯಾಂಕ ಪಡೆದಿದ್ದ ಸ್ಪೇನ್ನ ನಡಾಲ್ ಅವರಿಗೆ ಇದು ನಾಲ್ಕನೇ ಮ್ಯಾಡ್ರಿಡ್ ಪ್ರಶಸ್ತಿಯಾಗಿದೆ. ಫೈನಲ್ ಪಂದ್ಯ 2-6, 6-4, 3-0 ಸೆಟ್ಗಳಿಂದ ನಡೆಯುತ್ತಿದ್ದ ಸಂದರ್ಭದಲ್ಲಿ ಎದುರಾಳಿ ಕೀ ನಿಶಿಕೋರಿ ಅವರು ಚೆಪ್ಪೆ ಗಾಯದ ಕಾರಣ ಪಂದ್ಯದಲ್ಲಿ ಅರ್ಧಕ್ಕೆ ಹಿಂದೆ ಸರಿದರು. ಹೀಗಾಗಿ, ನಡಾಲ್ ಅವರು ಸುಲಭವಾಗಿ ಪ್ರಶಸ್ತಿ ಮುಡಿಗೇರಿಸಿಕೊಂಡರು.      'ಪಂದ್ಯದಲ್ಲಿ ಕೆಲ ಸಮಯ ಏನು ನಡೆಯುತ್ತಿದೆ ಎಂದು ನನಗೆ ಗೊತ್ತಾಗಲೇ ಇಲ್ಲ. ಅಲ್ಲದೆ, ಪ್ರತಿಷ್ಠಿತ ಫ್ರೆಂಚ್ ಓಪನ್ ಪಂದ್ಯಾವಳಿಗೆ ಕೇವಲ ಎರಡು ವಾರ ಬಾಕಿ ಇರುವಾಗ, ಮಾನಸಿಕವಾಗಿ ನಾನು ಇನ್ನೂ ಬಲಗೊಳ್ಳಬೇಕಿದೆ. ನಾನು ಪಂದ್ಯದಲ್ಲಿ ಆಡಬಾರದು ಅಥವಾ ನಾನು ತೀವ್ರತೆಯನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ಅಲ್ಲ. ನಾನು ಮಾನಸಿಕ ಖಿನ್ನತೆಗೊಳಗಾದಂತೆ ಭಾಸವಾಯಿತು' ಎಂದು ಮೊದಲ ಸೆಟ್ನಲ್ಲಿ ಹಿನ್ನಡೆ  ಅನುಭವಿಸಿದ್ದ ನಡಾಲ್ ತಿಳಿಸಿದರು.
ಸಿಮೋನಾ ಗೆದ್ದ ಶರಪೋವಾ: ಇದಕ್ಕೂ ಮುನ್ನ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಮಾರಿಯಾ ಶರಪೋವಾ ಅವರು ಸಿಮೋನಾ ಹಾಲೆಪ್ ಅವರನ್ನು 1-6, 6-2, 6-3 ಸೆಟ್ಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
  ಮ್ಯಾಡ್ರಿಡ್ ಓಪನ್ನಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಗೆದ್ದ ದಾಖಲೆಯನ್ನು ಇದೇ ಮೊದಲ ಬಾರಿಗೆ ನಡಾಲ್ ಬರೆದಿದ್ದಾರೆ. ಇದರೊಂದಿಗೆ ಕ್ಲೇ ಕೋರ್ಟ್ನಲ್ಲಿ ಅವರು ವರ್ಷದ 2ನೇ ಪ್ರಶಸ್ತಿ ಗೆದ್ದುಕೊಂಡರು. ಅಲ್ಲದೆ, 2014ರಲ್ಲಿ ಒಟ್ಟು ಮೂರನೇ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದ ಮೊದಲ ಸೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಜಪಾನ್ನ ನಿಶಿಕೋರಿ ಅವರು ನಡಾಲ್ ವಿರುದ್ಧ ಸುಲಭವಾಗಿ ಮೇಲುಗೈ ಸಾಧಿಸಿದರು.     ಎರಡನೇ ಸೆಟ್ನ ಆರಂಭದಲ್ಲಿ ಮುನ್ನಡೆ ಕಂಡುಕೊಂಡಿದ್ದ ನಿಶಿಕೋರಿ 4-2ರ ಮುನ್ನಡೆ ಕಂಡುಕೊಂಡಿದ್ದರು. ಆದರೆ, ನಂತರ ಗಾಯಕ್ಕೆ ತುತ್ತಾದ ನಿಶಿಕೋರಿ ಎರಡನೇ ಸೆಟ್ನಲ್ಲಿ ಅನಿವಾರ್ಯವಾಗಿ ಕೈಚೆಲ್ಲಿದರು. ಆದರೆ, ಮೂರನೇ ಸೆಟ್ನಲ್ಲಿ ಗಾಯ ತೀವ್ರಗೊಂಡಾಗ ನಡಾಲ್ ಪಂದ್ಯದಿಂದ ಹಿಂದೆ ಸರಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.