ಕ್ರೀಡೆ

ಸಕಾರಾತ್ಮಕವಾಗಿ ಆಡಬೇಕು: ಯುವಿ

ಸಕಾರಾತ್ಮಕವಾಗಿ ಆಡಬೇಕು: ಯುವಿ
Published On :

ಬೆಂಗಳೂರು: ಪ್ಲೇ ಆಫ್ ಸುತ್ತಿಗೆ ಪ್ರವೇಶಿಸಲು ಎದುರು ನೋಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರುತಂಡದ ಬ್ಯಾಟ್ಸ್ಮನ್ ಯುವರಾಜ್ ಸಿಂಗ್, ಸಕಾರಾತ್ಮಕವಾಗಿ ಆಡುವುದು ಬಿಟ್ಟರೆ ಬೇರೆ ದಾರಿ ಇಲ್ಲ ಎಂದು ತಂಡದ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.
ಮುಂದಿನ ನಾಲ್ಕೈದು ಪಂದ್ಯಗಳು ನಮ್ಮ ಪಾಲಿಗೆ ಕಠಿಣವಾಗಿದೆ. ಹಾಗಾಗಿ ಸಕಾರಾತ್ಮಕವಾಗಿ ಆಡುವುದು ಬಿಟ್ಟರೆ ನಮ್ಮ ಮುಂದೆ ಬೇರೆ ಯಾವುದೇ ದಾರಿ ಇಲ್ಲ. ಪಂದ್ಯದಲ್ಲಿ ಒಳ್ಳೆಯ ಮನೋಭಾವದಿಂದ ಕಣಕ್ಕಿಳಿದು, ಉತ್ತಮ ಕ್ರಿಕೆಟ್ ಆಡಬೇಕಿದೆ ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಗೆಲವು ಸಾಧಿಸುವ ಸಾಮರ್ಥ್ಯ ನಮ್ಮಲಿದೆ ಎಂಬುದು ನಮ್ಮ ನಂಬಿಕೆ. ನಾವು ಈಗಲೇ ಮುಂದಿನ ಐದು ಪಂದ್ಯಗಳ ಬಗ್ಗೆ ಯೋಚನೆ ಮಾಡುತ್ತಿಲ್ಲ. ಒಂದೊಂದೇ ಪಂದ್ಯವನ್ನು ಸ್ವೀಕರಿಸುವ ಮೂಲಕ ಪಂದ್ಯಾವಳಿಯಲ್ಲಿ ಸಾಗಲಿದ್ದೇವೆ ಎಂದು ಯುವರಾಜ್ ತಿಳಿಸಿದರು. ಐಪಿಎಲ್ ಪಂದ್ಯಗಳ ಬಗ್ಗೆ ನಾವು ಚೆನ್ನಾಗಿ ಅರಿತಿದ್ದೇವೆ. ಇಲ್ಲಿ ಚೇತರಿಸಿಕೊಳ್ಳಲು ಹೆಚ್ಚಿನ ಕಾಲಾವಕಾಶ ಇರುವುದಿಲ್ಲ. ಆದರೆ ಮುಂದಿನ ಪಂದ್ಯದಲ್ಲೂ ನಾವು ತವರಿನಲ್ಲೇ ಆಡುತ್ತಿರುವುದು ಪ್ಲಸ್ ಪಾಯಿಂಟ್. ಹಾಗಾಗಿ ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಪಂದ್ಯದಲ್ಲಿ ಅಂತಿಮ 24 ಎಸೆತಗಳಲ್ಲಿ 65 ರನ್ ನೀಡಿದೆವು. ಅಲ್ಲದೆ ಅಂತಿಮ ಓವರ್ಗಳಲ್ಲಿ ಮೊನಚಾದ ಬೌಲಿಂಗ್ ಮಾಡಲಿಲ್ಲ. ಫಾಕ್ನರ್ ಮತ್ತು ಸ್ಟೀವನ್ ಸ್ಮಿತ್ ಅಪಾಯಕಾರಿ ಆಟಗಾರರಾಗಿದ್ದು, ಅವರಿಗೆ ಸರಿಯಾಗಿ ಯಾರ್ಕರ್ ಎಸೆತ ಮಾಡುವಲ್ಲಿ ವಿಫಲರಾದೆವು. ಅವರು ಉತ್ತಮ ಹೊಡೆತಗಳಿಗೆ ಬೇಕಾದ ಲೆಂತ್ನಲ್ಲಿ ಚೆಂಡನ್ನು ಪಡೆದಿದ್ದು, ನಮ್ಮ ದುರಾದೃಷ್ಟ ಎಂದು ಯುವಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.