ಸನ್ರೈಸರ್ಸ್ಗೆ ಫಿಂಚ್ ಆಸರೆ

ಹೈದರಾಬಾದ್: ಆರಂಭಿಕ ಬ್ಯಾಟ್ಸ್ಮನ್ ಎರಾನ್ ಫಿಂಚ್ (68) ಅವರ ಸಮಯೋಚಿತ ಹಾಗೂ ಡೇವಿಡ್ ವಾರ್ನರ್ (ಅಜೇಯ 55) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 7ನೇ ಆವೃತ್ತಿಯ ಸೋಮವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ಗೆ 158 ರನ್ಗಳ ಗುರಿ ನೀಡಿದೆ.
ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 3 ವಿಕೆಟ್ಗೆ 157 ರನ್ ಕಲೆ ಹಾಕಿತು.
ಪ್ಲೇ ಆಫ್ಗೆ ಅರ್ಹತೆ ಪಡೆಯುವ ಹಾದಿಯಲ್ಲಿ ಸಾಗುತ್ತಿರುವ ಸನ್ರೈಸರ್ಸ್ ತಂಡಕ್ಕೆ ಈ ಪಂದ್ಯದಲ್ಲಿನ ಗೆಲವು ಮಹತ್ವದ ಪಾತ್ರ ವಹಿಸಲಿದೆ. ಇನ್ನು ಸೋಲಿನ ಸುಳಿಯಿಂದ ಹೊರ ಬರಲು ಪ್ರಯತ್ನಿಸುತ್ತಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ಗೂ ಈ ಪಂದ್ಯ ಅಷ್ಟೇ ಮಹತ್ವ ಪಡೆದುಕೊಂಡಿದೆ.
ಮಂದಗತಿಯ ಬ್ಯಾಟಿಂಗ್: ಮೊದಲು ಬ್ಯಾಟಿಂಗ್ ನಡೆಸುವ ನಿರ್ಧಾರಕ್ಕೆ ಬಂದ ಸನ್ರೈಸರ್ಸ್ ತಂಡ ನಿರೀಕ್ಷಿತ ವೇಗದಲ್ಲಿ ರನ್ ಗಳಿಸಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಹಾಗೂ ಎರಾನ್ ಫಿಂಚ್ ತಂಡಕ್ಕೆ 31 ರನ್ಗಳ ಆರಂಭ ನೀಡಿದರು.
ಮತ್ತೊಮ್ಮೆ ಸಾಮರ್ಥ್ಯಕ್ಕೆ ತಕ್ಕ ರೀತಿಯಲ್ಲಿ ರನ್ ಗಳಿಸಲು ವಿಫಲರಾದ ಧವನ್ (11) ಬೇಗನೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಕೆ.ಎಲ್ ರಾಹುಲ್ (10) ರನೌಟ್ ಆಗಿದ್ದು, ತಂಡದಲ್ಲಿ ಆತಂಕ ಮೂಡುವಂತೆ ಮಾಡಿತು.
ಈ ವೇಳೆ ಜತೆಯಾದ ಫಿಂಚ್ (68 ರನ್, 62 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಡೇವಿಡ್ ವಾರ್ನರ್ (ಅಜೇಯ 55 ರನ್, 31 ಎಸೆತ, 6 ಬೌಂಡರಿ, 2 ಸಿಕ್ಸರ್), ಜವಾಬ್ದಾರಿಯುತ ಬ್ಯಾಟಿಂಗ್ನಿಂದ ತಂಡಕ್ಕೆ63 ರನ್ಗಳ ಜತೆಯಾಟ ನೀಡಿದರು. ನಂತರ ಅಂತಿಮ 5 ಓವರ್ಗಳಲ್ಲಿ ದೊಡ್ಡ ಹೊಡೆತಗಳಿಗೆ ಮುಂದಾಗುವ ಮೂಲಕ ತಂಡ 150 ರನ್ ಗಡಿ ದಾಟಲು ಸಾಧ್ಯವಾಯಿತು.
ಮುಂಬೈ ಪರ ಮಾಲಿಂಗ 2 ವಿಕೆಟ್ ಪಡೆದರು.
ಸ್ಕೋರ್ ವಿವರ
ಸನ್ರೈಸರ್ಸ್ 20 ಓವರ್ಗಳಲಿ 3 ವಿಕೆಟ್ಗೆ 157
ಎರಾನ್ ಫಿಂಚ್ ಸಿ ಪೊಲಾರ್ಡ್ ಬಿ ಮಾಲಿಂಗ 68, ಶಿಖರ್ ಧವನ್ ಬಿ ಮಾಲಿಂಗ 11, ಕೆ.ಎಲ್ ರಾಹುಲ್ ರನೌಟ್ (ರೋಹಿತ್/ಗೌತಮ್) 10, ಡೇವಿಡ್ ವಾರ್ನರ್ ಅಜೇಯ 55, ನಮನ್ ಓಜಾ ಅಜೇಯ 7
ಇತರೆ: (ಲೆಗ್ ಬೈ 1, ವೈಡ್ 5) ಒಟ್ಟು 6
ವಿಕೆಟ್ ಪತನ: 1-31, 2-70, 3-133
ಬೌಲಿಂಗ್ ವಿವರ
ಕೊರೆ ಆ್ಯಂಡರ್ಸನ್ 2-0-17-0, ಜಸ್ಪ್ರೀತ್ ಬುಮ್ರಾ 4-0-24-0, ಹರ್ಭಜನ್ ಸಿಂಗ್ 4-0-27-0, ಲಸಿತ್ ಮಾಲಿಂಗ 4-0-35-2, ಪ್ರಗ್ಯಾನ್ ಓಜಾ 4-0-32-0, ಕೀರನ್ ಪೊಲಾರ್ಡ್ 2-0-21-0
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


