ಸನ್ರೈಸರ್ಸ್ಗೆ ಪಂಜಾಬ್ ಕಠಿಣ ಸವಾಲು

ಹೈದರಾಬಾದ್: ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಸೋಲನುಭವಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡದ ಮುಂದೆ ಈಗ ಮತ್ತೊಂದು ಕಠಿಣ ಲಕ್ಷ್ಯವಿದೆ. ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಬುಧವಾರ ನಡೆಯಲಿರುವ ಐಪಿಎಲ್ ಟಿ-20 ಪಂದ್ಯದಲ್ಲಿ ಗುಂಪಿನಲ್ಲಿ ಅಗ್ರಸ್ಥಾನ ಹೊಂದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸವಾಲು ಎದುರಾಗಲಿದೆ. ಸೋತರೆ ಸನ್ರೈಸರ್ಸ್ ತಂಡದ ಪಾಲಿಗೆ ಮುಂದಿನ ಹಾದಿ ಹೆಚ್ಚು ದುರ್ಬಲವಾಗಲಿದೆ.
ಮತ್ತೊಂದೆಡೆ ಕಿಂಗ್ಸ್ ಇಲೆವೆನ್ ಪಂಜಾಬ್ ಸಹ ತನ್ನ ಹಿಂದಿನ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ಸೋಲಿನ ಕಹಿ ಉಂಡಿತ್ತು. ನಾಳಿನ ಪಂದ್ಯದಲ್ಲಿ ಹೈದರಾಬಾದ್ ತಂಡದ ವಿರುದ್ಧ ಮತ್ತೆ ಗೆಲವಿನ ಹಾದಿಗೆ ಮರಳುವ ವಿಶ್ವಾಸ ಹೊಂದಿದೆ. ಸದ್ಯ ಸನ್ರೈಸರ್ಸ್ ತಂಡ ಸೋಲುವ ಸ್ಥಿತಿಯಲ್ಲಿಲ್ಲ. ಏಕೆಂದರೆ, ಸೋತರೆ ಮುಂದಿನ ಹಾದಿ ಪ್ರವೇಶಿಸುವುದು ಕಷ್ಟ ಎಂಬುದು ಅದಕ್ಕೆ ಚೆನ್ನಾಗಿ ಗೊತ್ತು. ಹಾಗಾಗಿ, ಮಾಡು ಇಲ್ಲವೇ ಮಂಡಿ ಎಂಬತ್ತಿರುವ ಈ ಪಂದ್ಯದಲ್ಲಿ ಹೇಗಾದರೂ ಮಾಡಿ ಗೆದ್ದೇ ತಿರುವ ಛಲದೊಂದಿಗೆ ಅಖಾಡಕ್ಕೆ ಧುಮುಕಲು ಸಿದ್ಧವಾಗಿದೆ. ಹಾಗಾಗಿ, ಪಂಜಾಬ್ ಮುಂದೆ ಕಠಿಣ ಸವಾಲುಗಳನ್ನು ನಿಲ್ಲಿಸಿದರೆ ಅಚ್ಚರಿಯಿಲ್ಲ. ಪಂಜಾಬ್ ತನ್ನ ಅಗಾಧ ಬ್ಯಾಟಿಂಗ್ ಶಕ್ತಿಯ ಮೂಲಕ ಎದುರಾಳಿಯನ್ನು ಬೆಂಡೆತ್ತುವ ಆತ್ಮವಿಶ್ವಾಸವನ್ನು ಅದು ಹೊಂದಿದೆ. ಪಂಜಾಬ್ಗೆ ಇಲ್ಲಿ ಸೋಲು ಎದುರಾದರೂ ಮುಂದೆ ಅನೇಕ ಅವಕಾಶಗಳಿವೆ. ಮಧ್ಯಮ ಕ್ರಮಾಂಕದ ದಾಂಡಿಗರಾದ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಡೇವಿಡ್ ಮಿಲ್ಲರ್ ಪಂಜಾಬ್ ತಂಡದಲ್ಲಿನ ಅತ್ಯಂತ ಅಪಾಯಕಾರಿ ಆಟಗಾರರಾಗಿದ್ದಾರೆ. ಆರಂಭಿಕ ವೀರೇಂದ್ರ ಸೆಹವಾಗ್ ಮತ್ತು ನಾಯಕ ಜಾರ್ಜ್ ಬೇಯ್ಲಿ ಅವರನ್ನೂ ಹಗುರವಾಗಿ ಕಾಣುವ ಹಾಗಿಲ್ಲ. ಒಂದು ವೇಳೆ ಮ್ಯಾಕ್ಸ್ವೆಲ್ ಮತ್ತು ಮಿಲ್ಲರ್ ಬ್ಯಾಟಿಂಗ್ನಲ್ಲಿ ಮಿಂಚಿದಲ್ಲಿ ಪಂಜಾಬ್ ತಂಡ ಅರ್ಧಪಂದ್ಯ ಗೆದ್ದುಕೊಂಡಂತೆಯೇ. ಹಾಗಾಗಿ, ಈ ಇಬ್ಬರನ್ನು ಬೇಗನೆ ಕಟ್ಟಿಹಾಕದೇ ಸನ್ರೈಸರ್ಸ್ ತಂಡಕ್ಕೆ ಉಳಿಗಾಲವಿಲ್ಲ. ಪಂಜಾಬ್ನ ಬೌಲಿಂಗ್ ಕೂಡ ಗುಣಮಟ್ಟದಿಂದ ಕೂಡಿದೆ. ಸಂದೀಪ್ ಶರ್ಮಾ, ಮಿಚೆಲ್ ಜಾನ್ಸನ್, ತಿಸಾರ ಪೆರೇರಾ, ಲಕ್ಷ್ಮೀಪತಿ ಬಾಲಾಜಿ ಉತ್ತಮ ದಾಳಿಕಾರರಾಗಿದ್ದಾರೆ.
ಇನ್ನು ಸನ್ರೈಸರ್ಸ್ ತಂಡ ಸಹ ಪಂದ್ಯಾವಳಿ ಸಾಗಿದಂತೆ ಪ್ರದರ್ಶನದ ಗುಣಮಟ್ಟ ಹೆಚ್ಚಿಸಿಕೊಳ್ಳುವ ಸಾಗಿದೆ. ನಾಯಕ ಶಿಖರ್ ಧವನ್, ಡೇವಿಡ್ ವಾರ್ನರ್, ಆರೋನ್ ಫಿಂಚ್, ಆಲ್ರೌಂಡರ್ ಡಾರೆನ್ ಸಾಮಿ ಹಾಗೂ ಬೌಲಿಂಗ್ನಲ್ಲಿ ಡೇಲ್ ಸ್ಟೇಯ್ನ್, ಇರ್ಫಾನ್ ಪಠಾಣ್, ಭುವನೇಶ್ವರ್ ಕುಮಾರ್, ಮೊಯಿಸೆಸ್ ಹೆನ್ರಿಕ್ಸ್, ಕರಣ್ ಶರ್ಮಾ, ಇಶಾಂತ್ ಶರ್ಮಾ ಮತ್ತು ಅಮಿತ್ ಮಿಶ್ರಾ ಪ್ರಮುಖರಾಗಿದ್ದಾರೆ.
ಇಂದಿನ ಪಂದ್ಯಗಳು
ಸನ್ರೈಸರ್ಸ್- ಕಿಂಗ್ಸ್ ಇಲೆವೆನ್ ಪಂಜಾಬ್
(ಸ್ಥಳ-ಹೈದರಾಬಾದ್, ಸಮಯ-ಸಂಜೆ 4 ಗಂಟೆ)
ಕೋಲ್ಕತಾ ನೈಟ್ ರೈಡರ್ಸ್-ಮುಂಬೈ ಇಂಡಿಯನ್ಸ್
(ಸ್ಥಳ-ಕಟಕ್, ಸಮಯ-ರಾತ್ರಿ 8 ಗಂಟೆ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


