ಕ್ರೀಡೆ

ಕಿಂಗ್ಸ್ ಪಂಜಾಬ್ಗೆ ಮ್ಯಾಕ್ಸಿಮಮ್ ಗೆಲವು

ಕಿಂಗ್ಸ್ ಪಂಜಾಬ್ಗೆ ಮ್ಯಾಕ್ಸಿಮಮ್ ಗೆಲವು
Published On :

ಹೈದರಾಬಾದ್: ಬೃಹತ್ ಮೊತ್ತಕ್ಕೆ ಎದೆಗುಂದದೇ ಅಬ್ಬರದ ಬ್ಯಾಟಿಂಗ್ ನಡೆಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್ಮನ್ಗಳು ಮತ್ತೊಮ್ಮೆ 200ಕ್ಕೂ ಹೆಚ್ಚು ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಬುಧವಾರ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಏಳನೇ ಆವೃತ್ತಿ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಗೆಲವು ದಾಖಲಿಸಿದೆ. ಈ ಗೆಲವಿನೊಂದಿಗೆ ಪಂಜಾಬ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ಸನ್ರೈಸರ್ಸ್ ಹೈದರಾಬಾದ್ ತಂಡ ನಮನ್ ಓಜಾ (ಅಜೇಯ 79ರನ್, 36 ಎಸೆತ, 4 ಬೌಂಡರಿ, 7 ಸಿಕ್ಸರ್) ಹಾಗೂ ಡೇವಿಡ್ ವಾರ್ನರ್ (44 ರನ್, 23 ಎಸೆತ, 3 ಬೌಂಡರಿ, 3 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ಗೆ 205 ರನ್ ದಾಖಲಿಸಿತು.
ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸಂಘಟಿತ ಬ್ಯಾಟಿಂಗ್ ನೆರವಿನಿಂದ ಕೇವಲ 18.4 ಓವರ್ಗಳಲ್ಲಿ 4 ವಿಕೆಟ್ಗೆ 211 ರನ್ ದಾಖಲಿಸಿ ಗೆಲವಿನ ನಗೆ ಬೀರಿತು.
ಅಬ್ಬರಿಸಿದ ಪಂಜಾಬ್: ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ತಂಡ ಆರಂಭದಲ್ಲೇ ವೀರೇಂದ್ರ ಸೆಹ್ವಾಗ್ (4) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ ಜತೆಯಾದ ಮನನ್ ವೊಹ್ರಾ (47 ರನ್, 20 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ವೃದ್ಧಿಮಾನ್ ಸಾಹ (54 ರನ್, 26 ಎಸೆತ, 8 ಬೌಂಡರಿ, 2 ಸಿಕ್ಸರ್) ಎರಡನೇ ವಿಕೆಟ್ಗೆ ವೇಗದ 91 ರನ್ ಜತೆಯಾಟ ನೀಡುವ ಮೂಲಕ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು. ನಂತರ ಬಂದ ಗ್ಲೆನ್ ಮ್ಯಾಕ್ಸ್ವೆಲ್ (43 ರನ್, 22 ಎಸೆತ, 2 ಬೌಂಡರಿ, 5 ಸಿಕ್ಸರ್) ಹಾಗೂ ಜಾರ್ಜ್ ಬೇಯ್ಲಿ (ಅಜೇಯ 35 ರನ್, 19 ಎಸೆತ, 2 ಬೌಂಡರಿ, 3 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ತಂಡ ನಿರಾತಂಕವಾಗಿ ಗೆಲವಿನ ದಡ ಸೇರುವಂತೆ ಮಾಡಿದರು.
ಈ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈ ಆವೃತ್ತಿಯಲ್ಲಿ ಎರಡನೇ ಬಾರಿಗೆ 200ಕ್ಕೂ ಹೆಚ್ಚು ರನ್ಗುರಿಯನ್ನು ಬೆನ್ನಟ್ಟಿದ ಸಾಧನೆ ಮಾಡಿದೆ. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ರೈಸರ್ಸ್ ಸಹ ಉತ್ತಮ ಬ್ಯಾಟಿಂಗ್ ನಡೆಸಿತ್ತಾದರೂ, ಬ್ಯಾಟ್ಸ್ಮನ್ಗಳಿಗೆ ನೆರವಾಗುವ ಪಿಚ್ನಲ್ಲಿ ಬೌಲರ್ಗಳ ಪರದಾಟದಿಂದ ಸೋಲನುಭವಿಸುವಂತಾಯಿತು. ಪಂಜಾಬ್ ಪರ ವೃದ್ಧಿಮಾನ್ ಸಾಹ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.


ಸ್ಕೋರ್ ವಿವರ


ಸನ್ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 5 ವಿಕೆಟ್ಗೆ 205
ಕ್ರಿಸ್ ಗೇಯ್ಲ್ ಬಿ ಶುಕ್ಲಾ 22, ಪಾರ್ಥಿವ್ ಸಿ ಕಾರ್ತಿಕ್ ಬಿ ಶಮಿ 29, ಕೊಹ್ಲಿ ರನೌಟ್ (ಶುಕ್ಲಾ/ಕಾಕ್) 10, ಡಿವಿಲಿಯರ್ಸ್ ಬಿ ಕೌಲ್ 33, ಯುವರಾಜ್ ಸಿಂಗ್ ಅಜೇಯ 68, ರಾಣಾ ಅಜೇಯ 15
ಇತರೆ: (ಲೆಗ್ ಬೈ 1, ವೈಡ್ 11, ನೊಬಾಲ್ 3) ಒಟ್ಟು 15
ವಿಕೆಟ್ ಪತನ: 1-65, 2-88, 3-169, 4-183, 5-196
ಬೌಲಿಂಗ್ ವಿವರ: ಸಂದೀಪ್ ಶರ್ಮಾ 4-0-65-1, ಮಿಚೆಲ್ ಜಾನ್ಸನ್ 4-0-26-0, ಶಿವಂ ಶರ್ಮಾ 4-0-31-1, ಅಕ್ಷರ್ ಪಟೇಲ್ 4-0-40-0, ರಿಶಿ ಧವನ್ 4-0-42-2
ಕಿಂಗ್ಸ್ ಇಲೆವೆನ್ ಪಂಜಾಬ್ 18.4 ಓವರ್ಗಳಲ್ಲಿ 4 ವಿಕೆಟ್ಗೆ 211
ವೀರೇಂದ್ರ ಸೆಹ್ವಾಗ್ ಸಿ ಮತ್ತು ಬಿ ಭುವನೇಶ್ವರ್ 4, ಮನನ್ ವೊಹ್ರಾ ರನೌಟ್ (ಭುವನೇಶ್ವರ್) 47, ವೃದ್ಧಿಮಾನ್ ಸ್ಟಂಪ್ ಓಜಾ ಬಿ ಕರಣ್ 54, ಮ್ಯಾಕ್ಸ್ವೆಲ್ ಸಿ ಸ್ಟೇಯ್ನ್ ಬಿ ಅಮಿತ್ 43, ಮಿಲ್ಲರ್ ಅಜೇಯ 24, ಜಾರ್ಜ್ ಜೇಯ್ಲಿ ಅಜೇಯ 35
ಇತರೆ: (ಲೆಗ್ ಬೈ 3, ನೊಬಾಲ್ 1) ಒಟ್ಟು 4
ವಿಕೆಟ್ ಪತನ: 1-4, 2-95, 3-125, 4-159ೆ
ಬೌಲಿಂಗ್ ವಿವರ: ಭುವನೇಶ್ವರ್ 3.4-0-38-1, ಸ್ಟೇಯ್ನ್ 4-0-51-0, ಹೆನ್ರಿಕ್ಸ್ 2-0-36-0, ಕರಣ್ ಶರ್ಮಾ 4-0-46-1, ಅಮಿತ್ 4-0-32-1, ಇರ್ಫಾನ್ ಪಠಾಣ್ 1-0-5-0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.