ಕ್ರೀಡೆ

ಡ್ರಾ ಪಂದ್ಯದಲ್ಲಿ ಬಿಎಫ್ಸಿ, ಆರ್ಡಬ್ಲ್ಯುಎಫ್

Published On :

ಬೆಂಗಳೂರು: ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡದ ಆಟಗಾರರು ರಾಜ್ಯ ಸೂಪರ್ ಡಿವಿಜನ್ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಡ್ರಾ ಫಲಿತಾಂಶಕ್ಕೆ ಸಮಾಧಾನಗೊಂಡಿದ್ದಾರೆ.
ಅಶೋಕನಗರದಲ್ಲಿರುವ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್ಸಿ ಮತ್ತು ರೇಲ್ ವೀಲ್ ಫ್ಯಾಕ್ಟರಿ ತಂಡಗಳು 1-1 ಗೋಲಿನಿಂದ ಡ್ರಾಗೆ ತೃಪ್ತಿ ಹೊಂದಿದವು.
ಬೆಂಗಳೂರು ಎಫ್ಸಿ ಪರ ಅಂಟೊರುಷಿ 15ನೇ ನಿಮಿಷ ಹಾಗೂ ರೇಲ್ ವೀಲ್ ಫ್ಯಾಕ್ಟರಿ ಪರ ರಾಜೇಶ್ 70ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಬೆಂಗಳೂರು ಎಫ್ಸಿ ಆರಂಭದಲ್ಲಿಯೇ ಗೋಲು ಗಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಆದರೆ ಉತ್ತರಾರ್ಧದಲ್ಲಿ ಎದುರಾಳಿಗೆ ಗೋಲು ಬಿಟ್ಟುಕೊಟ್ಟು ನಿಚ್ಚಳ ಗೆಲವಿನಿಂದ ವಂಚಿತವಾಯಿತು. ಇಂದೇ ನಡೆದ “G’ ಡಿವಿಜನ್ ಲೀಗ್ ಪಂದ್ಯದಲ್ಲಿ ಎಜಿಒಆರ್ಸಿ ಮತ್ತು ಬೆಂಗಳೂರು ಇಂಡಿಪೆಂಡೆಂಟ್ಸ್ ತಂಡಗಳು ಪರಸ್ಪರ ಗೋಲುರಹಿತ ಡ್ರಾ ಫಲಿತಾಂಶಕ್ಕೆ ನಿಟ್ಟುಸಿರು ಬಿಟ್ಟವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.