ಆಸ್ಕರ್ಗೆ ಮಾನಸಿಕ ಪರೀಕ್ಷೆ
ಪ್ರೆಟೋರಿಯಾ: ಗೆಳತಿಯನ್ನು ಕೊಲೆ ಮಾಡಿರುವ ಆರೋಪ ಹೊತ್ತಿರುವ ದಕ್ಷಿಣ ಆಫ್ರಿಕಾದ ಬ್ಲೇಡ್ ರನ್ನರ್ ಆಸ್ಕರ್ ಪಿಸ್ಟೋರಿಯಸ್ ಅವರನ್ನು 30 ದಿನಗಳ ಕಾಲ ಮಾನಸಿಕ ಪರೀಕ್ಷೆಗೆ ಒಳಪಡಿಸುವಂತೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಪಿಸ್ಟೋರಿಯಸ್ ಅವರು ಇಲ್ಲಿನ ವೆಸ್ಕೊಪಿಸ್ ಸೈಕಿಯಾಟ್ರಿಕ್ ಆಸ್ಪತ್ರೆಯಲ್ಲಿ ಮಾನಸಿಕ ಪರೀಕ್ಷೆಗೆ ಒಳಗಾಗಬೇಕು. ಅಲ್ಲದೆ ಬೆಳಗಿನಿಂದಲೇ ಅವರ ಪ್ರತಿ ನಡವಳಿಕೆ ಬಗ್ಗೆ ಪರೀಕ್ಷೆ ನಡೆಸಬೇಕೆಂದು ನ್ಯಾಯಮೂರ್ತಿ ಥೊಕೊಜಿಲ ಮಸಿಪ ತಿಳಿಸಿದ್ದಾರೆ.
ಪಿಸ್ಟೋರಿಯಸ್ ತಮ್ಮ ನಡುವಳಿಕೆಯಲ್ಲಿ ತಪ್ಪನ್ನು ಗುರುತಿಸುವರೆ, ಅಥವಾ ತಪ್ಪು ಮಾಡಿದ ನಂತರ ಅದನ್ನೇ ಮುಂದುವರಿಸುವರೆ ಎಂಬುದರ ಬಗ್ಗೆ ಪರೀಕ್ಷಿಸಲಾಗುವುದು ಎಂದು ತಿಳಿಸಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಪರೀಕ್ಷೆ ಮುಕ್ತಾಯವಾದ ನಂತರ ಅಂದರೆ ಜೂನ್ 30ಕ್ಕೆ ಮುಂದೂಡಲಾಗಿದೆ.
ಇನ್ನು ಪಿಸ್ಟೋರಿಯಸ್ ಪರ ವಕೀಲರು ಕಳೆದ ಎರಡು ತಿಂಗಳಿನಿಂದ ಆತನನ್ನು ಮಾನಸಿಕ ಅಸ್ವಸ್ಥ ಎಂದು ಬಿಂಬಿಸುತ್ತಿದ್ದಾರೆ. ಪಿಸ್ಟೋರಿಯಸ್ ತನ್ನ ಬಾಲ್ಯದ ಕಠಿಣ ದಿನಗಳಲ್ಲಿ ಅನುಭವಿಸಿದ ನೋವಿನಿಂದ ಹಾಗೂ ದಕ್ಷಿಣ ಆಫ್ರಿಕಾದಲ್ಲಿನ ಅಪರಾಧ ಪ್ರಕರಣಗಳಿಂದ ಆತ ಮಾನಸಿಕವಾಗಿ ಅಪರಾಧ ಮನೋಭಾವ ಹೊಂದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಪಿಸ್ಟೋರಿಯಸ್ ಈ ನಡುವಳಿಕೆಯನ್ನು ಅರಿಯಲು ಸಂಪೂರ್ಣ ಪ್ರಮಾಣದಲ್ಲಿ ತನಿಖೆಯಾಗಬೇಕು. ಒಂದು ವೇಳೆ ಅವರು ಮಾನಸಿಕವಾಗಿ ಬಳಲಿರುವುದಾದರೆ, ತನಿಖೆಯನ್ನು ಸ್ಥಗಿತಗೊಳಿಸಬಹುದು. ಅಥವಾ ಆತ ತಪ್ಪಿತಸ್ಥನೆಂದು ಸಾಬೀತಾದರೆ, ಸೂಕ್ತ ಪ್ರಮಾಣದ ಶಿಕ್ಷೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

