ಕ್ರಿಕೆಟ್ಗಿನ್ನು ಮಂತ್ರಿ ಇಲ್ಲ
ಮುಂಬೈ: ಭಾರತದ ಅತಿ ಹಳೆಯ ಮಾಜಿ ಟೆಸ್ಟ್ ಕ್ರಿಕೆಟ್ ಆಟಗಾರ ಮಾಧವ್ ಮಂತ್ರಿ ಶುಕ್ರವಾರ ಮುಂಬೈನ ಆಸ್ಪತ್ರೆಯೊಂದರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಯೋವಾನದ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 92 ವರ್ಷ ವಯಸ್ಸಾಗಿತ್ತು. ಬ್ರಹ್ಮಚಾರಿಯಾಗಿಯೇ ಜೀವನ ಕಳೆಯುತ್ತಿದ್ದ ಮಾಧವ್ ಮಂತ್ರಿ, ಭಾರತ ತಂಡದ ಪ್ರತಿಭಾನ್ವಿತ ವಿಕೆಟ್ ಕೀಪರ್ ಆಗಿದ್ದರು. ಭಾರತದ ಪರ ಕೇವಲ 4 ಟೆಸ್ಟ್ ಪಂದ್ಯಗಳನ್ನಾಡಿದ್ದ ಅವರು 1951ರಲ್ಲಿ ಭಾರತದಲ್ಲಿ ಒಂದು ಟೆಸ್ಟ್ ಹಾಗೂ 1952ರಲ್ಲಿ ಇಂಗ್ಲೆಂಡ್ನಲ್ಲಿ ಎರಡು ಮತ್ತು ಢಾಕಾದಲ್ಲಿ (ಆಗಿನ ಪೂರ್ವ ಪಾಕಿಸ್ತಾನ) 1954-55ರ ಅವಧಿಯಲ್ಲಿ ಒಂದು ಪಂದ್ಯ ಆಡಿದ್ದರು. ಒಟ್ಟು 67 ರನ್ಗಳಿಸಿದ್ದ ಅವರು 8 ಕ್ಯಾಚ್ಗಳನ್ನು ತೆಗೆದುಕೊಂಡಿದ್ದಲ್ಲದೆ, ಒಂದು ಸ್ಟಂಪಿಂಗ್ ಕೂಡ ಮಾಡಿದ್ದರು.
1952ರ ಇಂಗ್ಲೆಂಡ್ ಪ್ರವಾಸದಲ್ಲಿ ಅವರು ಆತಿಥೇಯರ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಪಂಕಜ್ ರಾವ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್ಗೆ 75 ರನ್ಗಳ ಜೊತೆಯಾಟ ನೀಡಿದ್ದು ಮಂತ್ರಿ ಅವರ ಉತ್ತಮ ಆಟದ ಪ್ರದರ್ಶನವಾಗಿತ್ತು. ಈ ಪಂದ್ಯದಲ್ಲಿ ಅವರು 39 ರನ್ಗಳಿಸಿದ್ದರು. ಆದರೆ, ತೀರ ನಿರಾಶಾದಾಯಕವಾಗಿದ್ದ ಈ ಪ್ರವಾಸದಲ್ಲಿ ಭಾರತ ತಂಡ ಆಡಿ ಎಲ್ಲ ನಾಲ್ಕೂ ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಸುನೀಲ್ ಗವಾಸ್ಕರ್ ಅವರ ಸಂಬಂಧಿಯಾಗಿರುವ ಮಾಧವ್ ಮಂತ್ರಿ, ಪ್ರಥಮದರ್ಜೆ ಕ್ರಿಕೆಟ್ನಲ್ಲಿ ಮಾತ್ರ ಹೆಚ್ಚು ಗಮನ ಸೆಳೆದಿದ್ದರು. ಮಹಾರಾಷ್ಟ್ರ ತಂಡದ ಪರ ಅವರು 95 ಪ್ರಥಮದರ್ಜೆ ಪಂದ್ಯಗಳಿಂದ 33.86ರ ಸರಾಸರಿಯಲ್ಲಿ 4403 ರನ್ ಸಂಪಾದಿಸಿದ್ದಾರೆ. ವೈಯಕ್ತಿಕ ಗರಿಷ್ಠ ಮೊತ್ತ 200 ರನ್ ಸೇರಿದಂತೆ ಒಟ್ಟು 7 ಶತಕ ಹಾಗೂ 26 ಅರ್ಧಶತಕಗಳನ್ನು ಅವರು ಗಳಿಸಿದ್ದಾರೆ.
ಮಾಧವ್ ಮಂತ್ರಿ ಅವರ ನಿಧನಕ್ಕೆ ಭಾರತ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್, ಸುನೀಲ್ ಗಾವಸ್ಕರ್, ಮುಂಬೈ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಶರದ್ ಪವಾರ್ ಹಾಗೂ ಅನೇಕ ಮಾಜಿ ಆಟಗಾರರು ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

