ಪಂಜಾಬ್ಗೆ ಡೆವಿಲ್ಸ್ ಸುಲಭ ತುತ್ತು

ಮೊಹಾಲಿ: ಶಿಸ್ತುಬದ್ಧ ದಾಳಿಯ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಏಳನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಯಲ್ಲಿ ಮತ್ತೊಂದು ಅದ್ಧೂರಿ ಗೆಲವು ದಾಖಲಿಸಿದೆ. ಆ ಮೂಲಕ ಪಂಜಾಬ್
ಆಟಗಾರರು ಅಗ್ರಸ್ಥಾನದ ಗೌರವದೊಂದಿಗೆ ಲೀಗ್ ಹಂತ ಪೂರೈಸಿದರು. ಪಿಸಿಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ 7 ವಿಕೆಟ್ಗಳಿಂದ ಡೆಲ್ಲಿ ಡೇರ್ಡೆವಿಲ್ಸ್ ತಂಡವನ್ನು ಪರಾಭವಗೊಳಿಸಿತು.
ಗೆಲ್ಲಲು 116 ರನ್ಗಳ ಸಾಧಾರಣ ಗುರಿ ಪಡೆದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಕೇವಲ 13.5 ಓವರುಗಳಲ್ಲಿ 3 ವಿಕೆಟ್ ಒಪ್ಪಿಸಿ 119 ರನ್ಗಳಿಸಿ ನಿರಾಯಾಸ ಗೆಲವು ಪಡೆಯಿತು.
ಪಂಜಾಬ್ ಪರ ಆರಂಭಿಕ ಮನನ್ ವೊಹ್ರಾ (47ರನ್, 38 ಎಸೆತ, 4 ಬೌಂಡರಿ, 2 ಸಿಕ್ಸರ್) ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಡೇವಿಡ್ ಮಿಲ್ಲರ್ (ಅಜೇಯ 47, 34 ಎಸೆತ, 4 ಬೌಂಡರಿ, 2 ಸಿಕ್ಸರ್) ಉತ್ತಮ ಆಟ ಪ್ರದರ್ಶಿಸಿ ತಂಡಕ್ಕೆ ಬಹುಬೇಗನೆ ಗೆಲವು ಖಾತ್ರಿಪಡಿಸಿದರು.
ಈ ಮಧ್ಯೆ ಆರಂಭಿಕ ಬ್ಯಾಟ್ಸ್ಮನ್ ವೀರೇಂದ್ರ ಸೆಹವಾಗ್ (9) ಹಾಗೂ ಅಪಾಯಕಾರಿ ಸ್ಫೋಟಕ ದಾಂಡಿಗ ಮತ್ತು ಕೇಂದ್ರಬಿಂದುವಾಗಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಮೂರು ಎಸೆತಗಳಲ್ಲಿ ಎದುರಿಸುವಷ್ಟರಲ್ಲಿ ಶೂನ್ಯ ಮೊತ್ತಕ್ಕೆ ನಿರ್ಗಮಿಸಿ ನಿರಾಶೆ ಮೂಡಿಸಿದರು.
ಡೆಲ್ಲಿ ಡೇರ್ಡೆವಿಲ್ಸ್ ತಂಡದ ಬೌಲಿಂಗ್ನಲ್ಲೂ ಯಾವುದೇ ಸ್ವಾರಸ್ಯವಿರಲಿಲ್ಲ. ಈ ಸೋಲಿನ ಕಹಿಯೊಂದಿಗೆ ಡೆಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ 2 ಗೆಲವು ಮತ್ತು 12 ಸೋಲುಗಳೊಂದಿಗೆ 4 ಅಂಕಗಳನ್ನಷ್ಟೇ ಸಂಪಾದಿಸಿ ಪ್ರಸಕ್ತ ಸಾಲಿನ ಐಪಿಎಲ್ನಿಂದ ತೀರ ಕೆಟ್ಟದಾಗಿ ನಿರ್ಗಮನ ಕಂಡಿತು.
ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಡೇರ್ಡೆವಿಲ್ಸ್ 18.1 ಓವರುಗಳಲ್ಲಿ 115 ರನ್ಗಳಿಸಲಷ್ಟೇ ಶಕ್ತವಾಯಿತು.
ಆರಂಭಿಕ ಆಟಗಾರ ನಾಯಕ ಕೆವಿನ್ ಪೀಟರ್ಸನ್ (58ರನ್, 41 ಎಸೆತ, 9 ಬೌಂಡರಿ) ಅರ್ಧಶತಕ ಬಿಟ್ಟರೆ, ಉಳಿದವರು ಪೆವಿಲಿಯನ್ಗೆ ಪೆರೇಡ್ ಮಾಡಿದ್ದ ಡೆಲ್ಲಿ ತಂಡ ಸಾಧಾರಣ ಮೊತ್ತಕ್ಕೆ ಕುಸಿಯುವಂತಾಯಿತು. ಅದರಲ್ಲೂ ಡೆಲ್ಲಿ ಪಡೆ ಕೇವಲ 24 ರನ್ಗಳ ಅಂತರದಲ್ಲಿ ಕೊನೆಯ 6 ವಿಕೆಟ್ ಕಳೆದುಕೊಂಡಿದ್ದು ಅಚ್ಚರಿ ಮೂಡಿಸಿತು. ಕಿಂಗ್ಸ್ ಪಂಜಾಬ್ ಪರ ಪರ್ವಿಂದರ್ ಅವಾನ, ಅಕ್ಷರ್ ಪಟೇಲ್, ಮಿಚೆಲ್ ಜಾನ್ಸನ್ ಮತ್ತು ಕರಣವೀರ್ ಸಿಂಗ್ ತಲಾ 2 ವಿಕೆಟ್ ಕಬಳಿಸಿದರು.
ಸ್ಕೋರ್ ವಿವರ
ಡೆಲ್ಲಿ ಡೇರ್ಡೆವಿಲ್ಸ್
18.1 ಓವರುಗಳಲ್ಲಿ 115
ಪೀಟರ್ಸನ್ ಎಲ್ಬಿ ಬಿ ರಿಶಿ ಧವನ್ 58, ಅಗರ್ವಾಲ್ ಸಿ ಸೆಹವಾಗ್ಬಿ ಜಾನ್ಸನ್ 2, ಕಾರ್ತಿಕ್ ಸಿ ಪಟೇಲ್ ಬಿ ಅವಾನ 13, ಜಾಧವ್ ಸಿ ವೊಹ್ರಾ ಬಿ ಅವಾನ 0, ತಿವಾರಿ ರನೌಟ್ 8, ಡುಮಿನಿ ಸಿ ಪಟೇಲ್ ಬಿ ಕರಣವೀರ್ ಸಿಂಗ್ 8, ನೀಶಂ ಸಿ ಬೇಯ್ಲಿ ಬಿ ಕರಣವೀರ್ ಸಿಂಗ್ 12, ನದೀಂ ಅಜೇಯ 3, ತಾಹಿರ್ ಸಿ ರಿಶಿ ಧವನ್ ಬಿ ಪಟೇಲ್ 4, ಉನದ್ಕತ್ ಸಿ ಮ್ಯಾಕ್ಸ್ವೆಲ್ ಬಿ ಜಾನ್ಸನ್ 0. ಇತರೆ: (ಲೆಗ್ಬೈ-1, ವೈ-6) 7.
ವಿಕೆಟ್ ಪತನ: 1-13, 2-44, 3-44, 4-67, 5-91, 6-93, 7-110, 8-111, 9-115, 10-115.
ಬೌಲಿಂಗ್ ವಿವರ: ಅವಾನ 3-1-15-2, ಪಟೇಲ್ 4-0-28-2, ಜಾನ್ಸನ್ 3.1-0-27-2, ಕರಣವೀರ್ ಸಿಂಗ್ 4-0-22-2, ರಿಶಿ ಧವನ್ 4-0-22-1.
ಕಿಂಗ್ಸ್ ಇಲೆವೆನ್ ಪಂಜಾಬ್ 13.5 ಓವರುಗಳಲ್ಲಿ 3 ವಿಕೆಟ್ಗೆ 119
ಸೆಹ್ವಾಗ್ ಸಿ ಕಾರ್ತಿಕ್ ಬಿ ಶಮಿ 9, ಮನನ್ ವೊಹ್ರಾ ಬಿ ತಾಹಿರ್ 47, ಮ್ಯಾಕ್ಸ್ವೆಲ್ ಸಿ ಪೀಟರ್ಸನ್ ಬಿ ಉನದ್ಕತ್ 0, ಮಿಲ್ಲರ್ ಅಜೇಯ 47, ಬೇಯ್ಲಿ ಅಜೇಯ 1. ಇತರೆ: (ಲೆಗ್ಬೈ-3, ವೈ-10) 13.
ವಿಕೆಟ್ ಪತನ: 1-13, 2-16, 3-112.
ಬೌಲಿಂಗ್ ವಿವರ: ಶಮಿ 3-0-26-1, ಉನದ್ಕತ್ 2-0-3-1, ನೀಶಂ 1-0-14-0, ಡುಮಿನಿ 2-0-15-0, ತಾಹಿರ್ 3.5-0-32-1, ನದೀಂ 2-0-24-0.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


