ಕ್ರೀಡೆ

ಕಿಂಗ್ಸ್ ಗೆಲವು ಮುಂಬೈ ಮನೆಗೆ

Published On :

ಮುಂಬೈ: ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ ಹಾಗೂ ಡೇವಿಡ್ ಹಸ್ಸಿ ಅವರ ಅಮೋಘ ಜತೆಯಾಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಗೆಲವು ದಾಖಲಿಸಿದೆ.
ಬ್ರಬೌರ್ನ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ ತಂಡ 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ತಂಡ 18.4 ಓವರ್‌ಗಳಲ್ಲಿ 3 ವಿಕೆಟ್‌ಗೆ 176 ರನ್ ಕಲೆ ಹಾಕಿತು.
 ಮುಂಬೈ ಪರ ಆರಂಭಿಕರಾದ ಸಿಮನ್ಸ್ ಅರ್ಧಶತಕ (67ರನ್, 44 ಎಸೆತ, 5 ಬೌಂಡರಿ, 4 ಸಿಕ್ಸರ್) ಹಾಗೂ ಹಸ್ಸಿ 39 ರನ್‌ಗಳ (33 ಎಸೆತ, 4 ಬೌಂಡರಿ, 1 ಸಿಕ್ಸರ್) ಉಪಯುಕ್ತ ಕಾಣಿಕೆ ನೀಡುವ ಮೂಲಕ ಮುಂಬೈಗೆ ಉತ್ತಮ ಆಸರೆಯಾದರು. ಇನ್ನು ಚೆನ್ನೈ ಪರ ಸುರೇಶ್ ರೈನಾ (ಅಜೇಯ 54, 33 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಡೇವಿಡ್ ಹಸ್ಸಿ (ಅಜೇಯ 40, 29 ಎಸೆತ, 2 ಬೌಂಡರಿ, 3 ಸಿಕ್ಸರ್) ಉತ್ತಮ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲವಿನ ದಡ ಸೇರಿಸಿದರು. ಈ ಮೂಲಕ ಚೆನ್ನೈ ತಂಡ ಮೇ 30 ಶುಕ್ರವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಸೆಣೆಸಲಿದೆ.

ಸ್ಕೋರ್ ವಿವರ
ಮುಂಬೈ ಇಂಡಿಯನ್ಸ್ 20 ಓವರುಗಳಲ್ಲಿ 8 ವಿಕೆಟ್‌ಗೆ 173
ಸಿಮನ್ಸ್ ಸಿ ರೈನಾ ಬಿ ಜಡೇಜಾ 67, ಮೈಕ್ ಹಸ್ಸಿ ಬಿ ಜಡೇಜಾ 39, ಕೋರಿ ಆ್ಯಂಡರ್ಸನ್ ಸಿ ಈಶ್ವರ್ ಪಾಂಡೆ ಬಿ ಅಶ್ವಿನ್ 20, ರೋಹಿತ್ ಶರ್ಮಾ ಸಿ ಮೆಕಲಂ ಬಿ ಶರ್ಮಾ 20, ಕೀರನ್ ಪೊಲಾರ್ಡ್ ಸಿ ಶರ್ಮಾ ಬಿ ನೆಹ್ರಾ 14, ಅಂಬಟಿ ರಾಯುಡು ಸಿ ಹಸ್ಸಿ ಬಿ ಶರ್ಮಾ 2, ತಾರೆ ಸಿ ಪ್ಲೆಸಿಸ್ ಬಿ ನೆಹ್ರಾ 0, ಹರ್‌ಭಜನ್ ಅಜೇಯ 7, ಪ್ರವೀಣ್‌ಕುಮಾರ್ ಬಿ ಶರ್ಮಾ 1, ಪ್ರಗ್ಯಾನ್ ಓಜಾ ಅಜೇಯ 1. ಇತರೆ: (ಲೆಗ್‌ಬೈ-2) 2.
ವಿಕೆಟ್ ಪತನ: 1-76, 2-99, 3-143, 4-150, 5-163, 6-164, 7-164, 8-166.
ಬೌಲಿಂಗ್ ವಿವರ: ನೆಹ್ರಾ 4-0-34-2, ಈಶ್ವರ್ ಪಾಂಡೆ 3-0-25-0, ಮೋಹಿತ್ ಶರ್ಮಾ 4-0-42-3, ಆರ್. ಅಶ್ವಿನ್ 4-0-26-1, ರವೀಂದ್ರ ಜಡೇಜಾ 4-0-31-2, ಸುರೇಶ್ ರೈನಾ 1-0-13-0.
ಚೆನ್ನೈ ಸೂಪರ್ ಕಿಂಗ್ಸ್ 18.4 ಓವರ್‌ಗಳಲ್ಲಿ 3 ವಿಕೆಟ್‌ಗೆ 176
ಸ್ಮಿತ್ ಸಿ ಪೊಲಾರ್ಡ್ ಬಿ ಹರ್ಭಜನ್ 24, ಡುಪ್ಲೆಸಿಸ್ ಸಿ ಡಂಕ್ ಬಿ ಹರ್ಭಜನ್ 35, ರೈನಾ ಅಜೇಯ 54, ಮೆಕಲಂ ಸ್ಟಂಪ್ ತಾರೆ ಬಿ ಓಜಾ 14, ಡೇವಿಡ್ ಹಸ್ಸಿ ಅಜೇಯ 40,
ಇತರೆ (ಲೆಗ್ ಬೈ 3, ವೈಡ್ 3) ಒಟ್ಟು 6
ವಿಕೆಟ್ ಪತನ: 1-60, 2-64, 3-87
ಬೌಲಿಂಗ್ ವಿವರ: ಪ್ರವೀಣ್ 4-0-27-0, ಆ್ಯಂಡರ್‌ಸನ್ 3-0-35-0, ಬುಮ್ರಾ 3.4-0-40-0, ಹರ್ಭಜನ್ 4-0-27-2, ಪ್ರಗ್ಯಾನ್ ಓಜಾ 3-0-34-1, ಪೊಲಾರ್ಡ್ 1-0-10-0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.