ಕ್ರೀಡೆ

ಎಚ್‌ಎಎಲ್‌ಗೆ ಆಘಾತ ನೀಡಿದ ಎಡಿಇ

Published On :

ಬೆಂಗಳೂರು: ಎಡಿಇ ತಂಡದ ಆಟಗಾರರು ರಾಜ್ಯ ಸೂಪರ್ ಡಿವಿಜನ್ ಲೀಗ್ ಫುಟ್ಬಾಲ್ ಪಂದ್ಯದಲ್ಲಿ ಹಿಂದೂಸ್ತಾನ್ ಏರೊನಾಟಿಕ್ಸ್ ಲಿ. (ಎಚ್‌ಎಎಲ್) ತಂಡಕ್ಕೆ ಆಘಾತ ನೀಡಿದ್ದಾರೆ.
ಅಶೋಕನಗರದಲ್ಲಿರುವ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎಡಿಇ ತಂಡ 1-0 ಗೋಲಿನಿಂದ ಎಚ್‌ಎಎಲ್ ತಂಡದ ವಿರುದ್ಧ ಗೆಲವು ದಾಖಲಿಸಿತು.
ಪಂದ್ಯದ 83ನೇ ನಿಮಿಷದಲ್ಲಿ ಕವಿ ಅರಸನ್ ಗೋಲು ಬಾರಿಸಿ ಎಡಿಇ ತಂಡದ ಗೆಲವಿನ ರೂವಾರಿಯಾದರು. ಮೊದಲ ಅವಧಿಯಲ್ಲಿ ಎರಡೂ ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ.
ಇಂದೇ ನಡೆದ “G’ ಡಿವಿಜನ್ ಲೀಗ್ ಪಂದ್ಯದಲ್ಲಿ ಬಿಯುಎಫ್‌ಸಿ ತಂಡದ ಆಟಗಾರರು 4-1 ಗೋಲುಗಳಿಂದ ಎಲ್‌ಆರ್‌ಡಿಇ ತಂಡವನ್ನು ಪರಾಭವಗೊಳಿಸಿದರು. ವಿಜೇತ ಬಿಯುಎಫ್‌ಸಿ ಪರ ನರೇಶ್ 28ನೇ, 38ನೇ ನಿಮಿಷ ಮತ್ತು ಮಧು 73ನೇ, 80ನೇ ನಿಮಿಷ ಗೋಲು ಗಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.