ಕ್ರೀಡೆ

ಆಂಗ್ಲರಿಗೆ ವಿರೋಚಿತ ಸೋಲು

Published On :

ಲಂಡನ್: ಕೆಳ ಕ್ರಮಾಂಕದಲ್ಲಿ ಬಂದ ಜೋಸ್ ಬಟ್ಲರ್ (121) ಅಬ್ಬರದ ಶತಕದ ಹೊರತಾಗಿಯೂ ಆತಿಥೇಯ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ವಿರೋಚಿತ ಸೋಲನುಭವಿಸಿದೆ.
ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಶ್ರೀಲಂಕಾ ತಂಡ 7 ರನ್‌ಗಳ ಅಂತರದಲ್ಲಿ ಆಂಗ್ಲರ ಪಡೆಯನ್ನು ಮಣಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯನ್ನು 2-2 ಅಂತರದ ಸಮಬಲ ಸಾಧಿಸಿದೆ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ ಇಂಗ್ಲೆಂಡ್ ತಂಡಕ್ಕೆ ಲಂಕಾ ಆಟಗಾರ ಕುಮಾರ್ ಸಂಗಕ್ಕಾರ ಕಾಡಿದರು. ಈ ಮೂಲಕ ಶ್ರೀಲಂಕಾ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 300 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಡ್ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 293 ರನ್ ದಾಖಲಿಸಿತು. ಶ್ರೀಲಂಕಾ ಪರ 104 ಎಸೆತಗಳನ್ನು ಎದುರಿಸಿದ ಕುಮಾರ್ ಸಂಗಕ್ಕಾರ 14 ಬೌಂಡರಿ ನೆರವಿನಿಂದ 112 ರನ್ ದಾಖಲಿಸಿದರು. ಉಳಿದಂತೆ ಆರಂಭಿಕ ದಿಲ್ಷಾನ್ 71 ರನ್ ದಾಖಲಿಸಿ ತಂಡಕ್ಕೆ ಆಸರೆಯಾದರು. ಇಂಗ್ಲೆಂಡ್ ತಂಡ 11 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಆಸರೆಯಾದ ಜೋಸ್ ಬಟ್ಲರ್, 74 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 121 ರನ್ ದಾಖಲಿಸಿದರು. ಕಡೇಯ ಓವರ್‌ನಲ್ಲಿ ಬಟ್ಲರ್ ರನೌಟ್ ಆಗಿದ್ದು, ತಂಡಕ್ಕೆ ಹಿನ್ನಡೆಯಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.