ಕ್ರೀಡೆ

ಫುಟ್ಬಾಲ್: ಜಯಿಸಿದ ಸೌತ್ ಯುನೈಟೆಡ್

Published On :

ಬೆಂಗಳೂರು: ಸೌತ್ ಯುನೈಟೆಡ್ ತಂಡದ ಆಟಗಾರರು ರಾಜ್ಯ ಸೂಪರ್ ಡಿವಿಜನ್ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ನಿರಾಯಾಸ ಗೆಲವು ದಾಖಲಿಸಿದ್ದಾರೆ.
ಅಶೋಕನಗರದಲ್ಲಿರುವ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸೌತ್ ಯುನೈಟೆಡ್ ತಂಡ 3-0 ಗೋಲುಗಳಿಂದ ಸಿಐಎಲ್ ತಂಡಕ್ಕೆ ಸೋಲುಣಿಸಿತು.
ವಿಜೇತ ಸೌತ್ ಯುನೈಟೆಡ್ ಪರ ಸುಬಾಷ್ 72ನೇ, 75ನೇ ನಿಮಿಷ ಮತ್ತು ಸೇಂಥಿಲ್ 53ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಈ ಮಧ್ಯೆ 'ಎ' ಡಿವಿಜನ್ ಲೀಗ್ ಪಂದ್ಯದಲ್ಲಿ ಪೋಸ್ಟಲ್ ತಂಡ 3-0 ಗೋಲುಗಳಿಂದ ಬೆಂಗಳೂರು ಕಿಕ್ಕರ್ಸ್ ತಂಡದ ವಿರುದ್ಧ ಜಯಭೇರಿ ಬಾರಿಸಿತು.
ಶಲೆನ್‌ಮಾಂಗ್ 8ನೇ, 68ನೇ ನಮಿಷ ಮತ್ತು ವೆಂಕಟೇಶ್ 56ನೇ ನಿಮಿಷಗಳಲ್ಲಿ ಗೋಲು ಬಾರಿಸಿ ಪೋಸ್ಟಲ್ ತಂಡದ ಗೆಲವಿನಲ್ಲಿ ಮಿಂಚಿದರು.
ಭಾನುವಾರ ನಡೆಯಲಿರುವ 'ಎ' ಡಿವಿಜನ್ ಲೀಗ್ ಪಂದ್ಯಗಳಲ್ಲಿ ತಿಲಕ್ ಮೆಮೋರಿಯಲ್ ಮತ್ತು ಬಿಯುಎಫ್‌ಸಿ, ಸ್ಟುಡೆಂಟ್ ಯೂನಿಯನ್ ಮತ್ತು ಎಜಿಒಆರ್‌ಸಿ ಹಾಗೂ ಸೂಪರ್ ಡಿವಿಜನ್ ಲೀಗ್ ಪಂದ್ಯದಲ್ಲಿ ಎಚ್‌ಎಎಲ್ ಮತ್ತು ಎಂಇಜಿ ತಂಡಗಳು ಮುಖಾಮುಖಿಯಾಗಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.