ನನ್ನ ಕುರಿತು ಸಿನಿಮಾ ಬೇಡ: ಸಾನಿಯಾ

ಬಾಲಿವುಡ್‌ನಲ್ಲಿ ಈಗ ಕ್ರೀಡಾಪಟುಗಳ ಮೇಲಿನ ಕುರಿತ ಚಿತ್ರಗಳ ಟ್ರೆಂಡ್ ಸಾಕಷ್ಟು...
ನನ್ನ ಕುರಿತು ಸಿನಿಮಾ ಬೇಡ: ಸಾನಿಯಾ

ನವದೆಹಲಿ: ಬಾಲಿವುಡ್‌ನಲ್ಲಿ ಈಗ ಕ್ರೀಡಾಪಟುಗಳ ಮೇಲಿನ ಕುರಿತ ಚಿತ್ರಗಳ ಟ್ರೆಂಡ್ ಸಾಕಷ್ಟು ಯಶಸ್ಸು ಕಂಡಿದೆ. ಈ ನಡುವೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಾತ್ರ ತಮ್ಮ ಮೇಲೆ ಯಾವುದೇ ಸಿನಿಮಾ ಬರುವುದು ಬೇಡ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಸಾನಿಯಾ, ತನ್ನ ಜೀವನವನ್ನು ಬೆಳ್ಳಿ ತೆರೆಯ ಮೇಲೆ ನೋಡಲು ಇಚ್ಛಿಸುವುದಿಲ್ಲ. ಒಂದು ವೇಳೆ ಜೀವನದ ಕುರಿತು ಚಿತ್ರ ಬರುವುದೇ ಆದರೆ, ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರನ್ನು ನನ್ನ ಪಾತ್ರದಲ್ಲಿ ನೋಡಲು ಇಚ್ಛಿಸುತ್ತೇನೆ ಎಂದು ಮಿರ್ಜಾ ಹೇಳಿದ್ದಾರೆ.

ಸಾನಿಯಾ ಮಿರ್ಜಾ 'ಅಗೇನ್‌ಸ್ಟ್ ಆಲ್ ಆಡ್ಸ್‌' ಎಂಬ ಹೆಸರಿನಲ್ಲಿ ಆತ್ಮಚರಿತ್ರೆ ಬರೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com