ಮರ್ಲಾನ್ ಶತಕ; ಮರುಗಿದ ಭಾರತ

ಕೊಚ್ಚಿ: ಪ್ರಾರಂಭದಲ್ಲಿ ಶಿಕ್ಷಿಸಿದ ಮರ್ಲಾನ್ ಸ್ಯಾಮುಯೆಲ್ಸ್ ಹಾಗೂ ನಂತರದಲ್ಲಿ ಪ್ರವಾಸಿಗರ ಕರಾರುವಾಕ್ ದಾಳಿಯ ಮಧ್ಯೆ ಸಿಕ್ಕು ನರಳಿದ ಭಾರತಕ್ಕೆ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ದಯನೀಯ ಸೋಲು ಎದುರಾಗಿದೆ. ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 124 ರನ್ಗಳಿಂದ ಭಾರತದ ವಿರುದ್ಧ ಜಯಭೇರಿ ಬಾರಿಸಿತು. ಆ ಮೂಲಕ ಪ್ರವಾಸಿಗರು ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆಯೊಂದಿಗೆ ಶುಭಾರಂಭ ಮಾಡಿದರು. ಗೆಲ್ಲಲು 322 ರನ್ಗಳ ಕಠಿಣ ಗುರು ಪಡೆದಿದ್ದ ಭಾರತ 41 ಓವರುಗಳಲ್ಲಿ 197 ರನ್ಗಳಿಸುವಷ್ಟರಲ್ಲಿ ಪತನಗೊಂಡಿತು. ಆರಂಭಿಕ ಶಿಖರ್ ಧವನ್ 92 ಎಸೆತಗಳಲ್ಲಿ 9 ಬೌಂಡರಿಗಳನ್ನು 68 ರನ್ಗಳಿಸಿದ್ದು ಬಿಟ್ಟರೆ, ಇತರೆ ದಾಂಡಿಗರು ಅರ್ಧಶತಕದ ಸಮೀಪ ಕೂಡ ಸುಳಿಯಲಿಲ್ಲ. ವಿಂಡೀಸ್ ದಾಳಿಯ ಮುಂದೆ ಕೆಟ್ಟ ಹೊಡೆತಗಳನ್ನು ಆಯ್ಕೆ ಮಾಡಿಕೊಂಡಿದ್ದೇ ಭಾರತೀಯರಿಗೆ ಮುಳುವಾಯಿತು.
ಭಾರತದ ದೌರ್ಬನ್ಯ ಗುರುತಿಸಿ ಆ ದಿಕ್ಕಿನತ್ತ ತಮ್ಮ ಪರಿಣಾಮಕಾರಿ ಹೋರಾಟ ಸಂಘಟಿಸುವಲ್ಲಿ ಸಫಲರಾದ ಕೆರಿಬಿಯನ್ ಆಟಗಾರರು ಅಂತಿಮವಾಗಿ ಗೆಲುವುನ ಕೇಕೆ ಹಾಕಿದರು. ಇದರೊಂದಿಗೆ ಕಳೆದ ವರ್ಷ ಇದೇ ಅಂಗಣದಲ್ಲಿ ಭಾರತದ ವಿರುದ್ಧ ಅನುಭವಿಸಿದ ಸೋಲಿಗೆ ವಿಂಡೀಸ್ ಪಡೆತಕ್ಕ ಸೇಡು ತೀರಿಸಿಕೊಂಡಿತು. ಮಧ್ಯಮ ಕ್ರಮಾಂತದಲ್ಲಿ ಕೊಹ್ಲಿ, ರಾಯುಡು, ರೈನಾ ಮತ್ತು ಧೋನಿ, ಎದುರಾಳಿ ಬೌಲರ್ಗಳ ಮುಂದೆ ಯಾವುದೇ ರೀತಿಯ ಪ್ರತಿರೋಧ ತೋರದೇ ಪೆವಿಲಿಯನ್ಗೆ ಪರೇಡ್ ಮಾಡಿದರು. ರಹಾನೆ, ಜಡೇಜಾ ಕೂಡ ಗಮನ ಸೆಳೆಯಲಿಲ್ಲ.
ವೆಸ್ಟ್ ಇಂಡೀಸ್ಗೆ ಸ್ಯಾಮುಯೆಲ್ಸ್ ಶತಕದಾಸರೆ
2ನೇ ಏಕದಿನ: ದೆಹಲಿ, ಅಕ್ಟೋಬರ್ 11
ಟಾಸ್ಗೆದ್ದ ಭಾರತ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ, ಪ್ರವಾಸಿ ಪಡೆಯನ್ನು ಮೊದಲ ಬ್ಯಾಟಿಂಗ್ಗೆ ಆಮಂತ್ರಿಸಿದರು. ಎರಡನೇ ಇನಿಂಗ್ಸ್ ವೇಳೆಗೆ ಇಬ್ಬನಿ ಬೀಳುವುದನ್ನು ಮನಗಂಡು ಧೋನಿ ಕ್ಷೇತ್ರ ರಕ್ಷಣೆ ಆಯ್ದುಕೊಂಡಿದ್ದು ಉತ್ತಮ ನಿರ್ಧಾರವೇ ಆಗಿತ್ತು. ಆದರೆ, ವೆಸ್ಟ್ ಇಂಡೀಸ್ ಪಾಲಿಗೆ ಮರ್ಲಾನ್ ಸ್ಯಾಮುಯೆಲ್ಸ್ ಆಪದ್ಭಾಂದವರಾದರು. ಅವರ ಆಕರ್ಷಕ ಶತಕದ ಪರಿಣಾಮ ವೆಸ್ಟ್ ಇಂಡೀಸ್ ಪಡೆ 50 ಓವರುಗಳಲ್ಲಿ 6 ವಿಕೆಟ್ಗೆ 321 ರನ್ಗಳ ಬೃಹತ್ ಮೊತ್ತ ಸಂಪಾದಿಸಿತು.
ತಮ್ಮ 53ನೇ ಪಂದ್ಯದಲ್ಲಿ ಸ್ಯಾಮುಯೆಲ್ಸ್ 6ನೇ ಶತಕ ಬಾರಿಸಿದರು. ಅವರು 116 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್ಗಳು ಒಳಗೊಂಡಂತೆ 126 ರನ್ಗಳು ಕೊನೆಗೂ ಅಜೇತರಾಗಿಯೇ ಉಳಿದರು. ಇದರೊಂದಿಗೆ ಅವರು ಜೀವನಶ್ರೇಷ್ಠ ಸಾಧನೆಯನ್ನು ಸರಿಗಟ್ಟಿದಂತಾಯಿತು. ಆರಂಭದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟ ಸ್ಯಾಮುಯೆಲ್ಸ್ ಮೊದಲ 50 ರನ್ಗಳನ್ನು 61 ಎಸೆತಗಳಲ್ಲಿ ಪೂರೈಸಿದ್ದರು. ಒಮ್ಮೆ ಲಯ ಕಂಡು ಕೊಳ್ಳುತ್ತಲೇ ವೇಗದ ಹೊಡೆತಗಳಿಗೆ ಮುಂದಾದ ಅವರು ಮುಂದಿನ 50 ರನ್ಗಳನ್ನು ಕೇವಲ 38 ಎಸೆತಗಳಲ್ಲಿಯೇ ಸಂಪಾದಿಸಿ ಶತಕ ಪೂರೈಸಿದರು.
ಸ್ಯಾಮುಯೆಲ್ಸ್ಗೆ ಉತ್ತಮ ಬೆಂಬಲ ನೀಡಿದ ಕೀಪರ್ ದಿನೇಶ್ ರಾಮ್ದಿನ್ ಅರ್ಧಶತಕ ಕಾಣಿಕೆ ನೀಡಿದರು. ರಾಮ್ದಿನ್ 59 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 61 ರನ್ ಗಳಿಸಿದರು. ಸ್ಯಾಮುಯೆಲ್ಸ್ ಮತ್ತು ರಾಮ್ದಿನ್ ನಾಲ್ಕನೇ ವಿಕೆಟ್ಗೆ 165 ರಸ್ ಪೇರಿಸಿದರು.
ಉಳಿದಂತೆ, ವಿಂಡೀಸ್ನ ಅಗ್ರಕ್ರಮಾಂಕದ ದಾಂಡಿಗರಾದ ಡ್ವೈನ್ ಸ್ಮಿತ್ 46 (45 ಎಸೆತ, 4 ಬೌಂಡರಿ, 2 ಸಿಕ್ಸರ್), ನಾಯಕ ಡ್ವೈನ್ ಬ್ರಾವೊ 17 ಮತ್ತು ಡಾರೆನ್ ಬ್ರಾವೊ 28 ರನ್ಗಳಿಸಿ ಪೆವಿಲಿಯನ್ ಸೇರಿದ್ದರು. ಅತಿಥೇಯ ಪರ ಮಧ್ಯಮ ವೇಗಿ ಮೊಹಮ್ಮದ್ ಶಮಿ 66 ರನ್ ನೀಡಿ 4 ವಿಕೆಟ್ ಉರುಳಿಸಿದರು.
ಪಂದ್ಯಶ್ರೇಷ್ಠ: ಮರ್ಲಾನ್ ಸ್ಯಾಮುಯೆಲ್ಸ್
ರನ್, 126 (ಬೌಂಡರಿ 11, ಸಿಕ್ಸರ್ 04) ಎಸೆತ,116
ಸ್ಕೋರ್ ವಿವರ
ವೆಸ್ಟ್ ಇಂಡೀಸ್ 50 ಓವರುಗಳಲ್ಲಿ 6 ವಿಕೆಟ್ಗೆ 321
ಡ್ವೈನ್ ಸ್ಮಿತ್ ಸಿ ಜಡೇಜಾ 46, ಡ್ವೈನ್ ಬ್ರಾವೊ ಸಿ ಧವನ್ ಬಿ ಶಮಿ 17, ಡಾರೆನ್ ಬ್ರಾವೊ ಸಿ ಧವನ್ ಬಿ ಮಿಶ್ರಾ 28, ಮರ್ಲಾನ್ ಸ್ಯಾಮುಯೆಲ್ಸ್ ಅಜೇಯ 126, ದಿನೇಶ್ ರಾಮ್ದಿನ್ ಸಿ ಜಡೇಜಾ ಬಿ ಶಮಿ 61, ಕೀರನ್ ಪೊಲಾರ್ಡ್ ಬಿ ಶಮಿ 2, ಅ್ಯಂಡ್ರೆ ರಸೆಲ್ ಸಿ ಕೊಹ್ಲಿ ಬಿ ಶಮಿ 1, ಡಾರೆನ್ ಸಾಮಿ ಅಜೇಯ 10, ಇತರೆ (ಬೈ-7, ಲೆಗ್ಬೈ-5, ವೈ-17, ನೋಬಾಲ್-1) 30.
ವಿಕೆಟ್ ಪತನ: 1-,34, 2-98, 3-120, 4-285, 5-296, 6-298.
ಬೌಲಿಂಗ್ ವಿವರ: ಭುವನೇಶ್ವರ್ ಕುಮಾರ್ 10-1-38-0, ಮೋಹಿತ್ ಶರ್ಮಾ9-0-60-0, ಮೊಹಮ್ಮದ್ ಶಮಿ 9-1-66-4, ರವೀಂದ್ರ ಜಡೇಜಾ 10-0-58-1,ಅಮಿತ್ ಮಿಶ್ರಾ 10-0-72-1, ಸುರೇಶ್ ರೈನಾ 2-0-14-0.
ಭಾರತ 41 ಓವರುಗಳಲ್ಲಿ 197
ರಹಾನೆ ರನೌಟ್ 24, ಧವನ್ ಬಿ ಸ್ಯಾಮುಯೆಲ್ಸ್ 68, ಕೊಹ್ಲಿ ಸಿ ಸಾಮಿ ಬಿ ಟೇಲರ್ 2, ರಾಯುಡು ಸಿ ಬೆನ್ ಬಿ ರಸೆಲ್ 13, ರೈನಾ ಬಿ ಡ್ವೈನ್ ಬ್ರಾವೋ 0, ಧೋನಿ ಬಿ ಸಾಮಿ 8, ಜಡೇಜಾ ಅಜೇಯ 33, ಭುವನೇಶ್ವರ್ ಸಿ ಸಾಮಿ ಬಿ ಸ್ಯಾಮುಯೆಲ್ಸ್ 2, ಮಿಶ್ರಾ ಎಲ್ಬಿಬಿ ಡ್ವೈನ್ ಬ್ರಾವೊ 5, ಮೋಹಿತ್ ಸಿ ಟೇಲರ್ ಬಿ ರಾಮ್ಪಾಲ್ 8, ಶಮಿ ಬಿ ರಾಮ್ಪಾಲ್ 19, ಇತರೆ. ( ಲೆಗ್ಬೈ-1, ವೈ-14)15.
ವಿಕೆಟ್ ಪತನ : 1-49, 2-55, 3-82, 4-83, 5-114,
6-134, 7-138, 8-146, 9-155, 10-197.
ಬೌಲಿಂಗ್ ವಿವರ; ರಾಮ್ಪಾಲ್ 8-0-48-2.
ಟೇಲರ್ 10-1-50-1, ಡ್ವೈನ್ ಬ್ರಾವೋ 6-0-28-2, ರಸೆಲ್ 4-0-21-1, ಬ್ರೆನ್ 5-0-16-0, ಸಾಮಿ 5-0-23-1, ಸ್ಯಾಮುಯೆಲ್ಸ್ 3-0-10-2.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


