ಕ್ರೀಡೆ

ಅನ್ಯರ ಅಚ್ಚರಿಯ ಆಟ

ಅನ್ಯರ ಅಚ್ಚರಿಯ ಆಟ
Published On :

ಬೆಂಗಳೂರು: ವಿಶ್ವದ ಎರಡನೇ ಅತಿ ದೊಡ್ಡ ಕ್ರೀಡಾಕೂಟ ಏಷ್ಯನ್ ಗೇಮ್ಸ್‌ನಲ್ಲಿ ಸತತ ಎರಡನೇ ಬಾರಿಗೆ ಚಿನ್ನ ಗೆದ್ದಿರುವುದು ಖುಷಿ ತಂದಿದೆ. ಆದರೆ, ಏಷ್ಯಾದ ಇತರ ರಾಷ್ಟ್ರಗಳಲ್ಲಿ ಕಬಡ್ಡಿ ಕೌಶಲ್ಯ ವೇಗವಾಗಿ ಬೆಳೆಯುತ್ತಿರುವುದನ್ನು ನೋಡಿದರೆ, ಇಷ್ಟರಲ್ಲೇ ಅವರು ನಮ್ಮನ್ನು ಹಿಂದಿಕ್ಕಲಿದ್ದಾರೆ ಎಂಬ ಭೀತಿ ಸಹ ಕಾಡುತ್ತಿದೆ. ಕಳೆದ ಬಾರಿ ಏಷ್ಯನ್ ಕ್ರೀಡಾಕೂಟದಲ್ಲಿ ನಮಗೆ ಕಠಿಣ ಸವಾಲು ನೀಡಿದ್ದು ಇರಾನ್ ತಂಡ ಮಾತ್ರ. ಆದರೆ, ಈ ಬಾರಿ ಸೆಮಿಫೈನಲ್‌ನಲ್ಲಿ ಸಮಬಲದ ಹೋರಾಟ ನೀಡಿದ ಥಾಯ್ಲೆಂಡ್ ನಮ್ಮ ಮೈ ಚಳಿ ಬಿಡಿಸಿತ್ತು. ಅಲ್ಲದೆ, ದಕ್ಷಿಣ ಕೊರಿಯಾ  ಸಹ ಸಮರ್ಥ ಹೋರಾಟ ನಡೆಸಿತು. ದೇಶಕ್ಕಾಗಿ ಇನ್ನಷ್ಟು ಚಿನ್ನದ ಪದಕ ಗೆಲ್ಲಬೇಕು ಎಂಬ ಗುರಿ ಇದೆ. ಸಾಧ್ಯವಾದಷ್ಟು ಕಾಲ ದೇಶ ಪ್ರತಿನಿ ಧಿಸಲು ಪ್ರಯತ್ನಿಸುತ್ತೇನೆ. ಕಿರಿಯರಿಗೂ ಅವಕಾಶ ನೀಡಬೇಕು ಎಂಬ ಇಂಗಿತ ಮನದ ಮೂಲೆಯೊಂದರಲ್ಲಿ ಕಾಡುತ್ತಿದೆ ಎಂದಿದ್ದಾರೆ ಇತ್ತೀಚಿಗಷ್ಟೇ ಏಷ್ಯಾಡ್ ನಲ್ಲಿ ಚಿನ್ನ ಗೆದ್ದು ತಂದ ಭಾರತ ವನಿತೆಯ ಕಬಡ್ಡಿ ತಂಡದಲ್ಲಿ ಪ್ರಮುಖ ಪಾತ್ರವಹಿಸಿದ ಕನ್ನಡತಿ ಮಮತಾ ಪೂಜಾರಿ.

ಕಳೆದ ಬಾರಿಗೆ ಹೋಲಿಸಿದರೆ ನಾವು ಈ ಬಾರಿ ಏಷ್ಯಾಡ್‌ನಲ್ಲಿ ಕಠಿಣ ಸವಾಲನ್ನು ಎದುರಿಸಿದೆವು. ಆದರೆ ಚಿನ್ನದ ಪದಕ ಗೆಲ್ಲಬೇಕು ಎಂಬ ಕನಸಿಗೆ ಮಾತ್ರ ಧಕ್ಕೆಯಾಗಲಿಲ್ಲ. ಆದರೆ ಪಂದ್ಯಾವಳಿಯಲ್ಲಿ ಇತರ ರಾಷ್ಟ್ರಗಳ ತಂಡಗಳು ನೀಡಿದ ಹೋರಾಟ ನೋಡಿದರೆ. ಅವು ಕಬಡ್ಡಿಯಲ್ಲಿ ವೇಗವಾಗಿ ಬೆಳೆಯುತ್ತಿವೆ . ನಾವು ಮಾತ್ರ ಹೆಚ್ಚಿವ ಕೌಶಲ್ಯ ಬೆಳೆಸಿಕೊಳ್ಳುಲ ನಿಟ್ಟಿನಲ್ಲಿ ಯೋಚಿಸುತ್ತಿಲ್ಲ. ಕಾರಣ ಈ ಬಾರಿ ಸೆಮಿಫೈನಲ್ ಪಂದ್ಯದ ಮೊದಲಾರ್ಧ ಭಾಗ ಮುಕ್ತಾಯವಾದಾಗ ಅದು ಸಮಬಲ ಸಾಧಿಸಿತ್ತು. ಹೀಗಾಗಿ ನಾವು ಸೋಲಿನ ದವಡೆಯಲ್ಲಿ ಸಿಲುಕಿದ್ದೆವು. ಅದೃಷ್ಟ  ನಮ್ಮ ಪರವಾಗಿ ಇತ್ತು ಎನಿಸುತ್ತಿದೆ, ಅಂತಿಮವಾಗಿ ಜಯ ಸಾಧಿಸಿದೆವು. ಆತಿಥೇಯ ದಕ್ಷಿಣ ಕೊರಿಯಾ ಸಹ ಈ ಬಾರಿ ನಮಗೆ ಕಠಿಣ ಸವಾಲೊಡ್ಡಿದ ತಂಡಗಳಲ್ಲಿ ಒಂದು ಎಂದು ಪಂದ್ಯಾವಳಿಯ ಅನುಭವದ ಬಗ್ಗೆ ಮಮತಾ ಮೆಲುಕು ಹಾಕಿದ್ದಾರೆ.

ನಾವು ಈ ಬಾರಿ ಇರಾನ್ ತಂಡವನ್ನೇ ಗುರಿಯಾಗಿಸಿಕೊಂಡು ತಯಾರಿ ನಡೆಸಿದ್ದೆವು. ಅಂದುಕೊಂಡಂತೆ ಫೈನಲ್ ಪಂದ್ಯದಲ್ಲಿ ಇರಾನ್ ಕಳೆದ ಬಾರಿಗಿಂತ ಅತ್ಯುತ್ತಮ ಪ್ರದರ್ಶನವನ್ನೇ ನೀಡಿತು. ಆದರೆ ಇತರ ದೇಶಗಳ ತಂಡಗಳ ಪ್ರದರ್ಶನದಲ್ಲಿ ಗಮನಾರ್ಹ ಬದಲಾವಣೆಯಾಗಿರುವುದು ಮಾತ್ರ ಅಚ್ಚರಿಯಾಗಿತ್ತು ಎನ್ನುವುದನ್ನು ಮಮತಾ ಮರೆಯುವುದಿಲ್ಲ.

ಏಷ್ಯಾಡ್ ನಲ್ಲಿ ಇತರ ದೇಶಗಳ ತಂಡಗಳ ಆಟಗಾರ್ತಿಯರ ಚುರುಕಿನ ಪ್ರದರ್ಶನ ನೋಡಿದಾಗ, ನಮ್ಮ ದೇಶದ ಆಟಗಾರ್ತಿಯರಲ್ಲಿ ಇನ್ನಷ್ಟು ಸ್ಪೂರ್ತಿ ಮೂಡಬೇಕಾಗಿದೆ. ಅದರೊಂದಿಗೆ ಫಿಟ್ನೆಸ್ ಮಟ್ಟ ಅಭಿವೃದ್ಧಿ ಕಾಣಬೇಕಿದೆ ಎನಿಸುತ್ತಿದೆ ಎಂದಿದ್ದಾರೆ.
ನಮ್ಮ ತಂಡದಲ್ಲಿ ಒಟ್ಟು ನಾಲ್ವರು ಕನ್ನಡತಿಯರು ಇದ್ದದ್ದು ಈ ಬಾರಿಯ ವಿಶೇಷವಾಗಿತ್ತು. ಎಲ್ಲಿರೂ ಒಟ್ಟಿಗೆ ಇರುತ್ತಿದ್ದೆವು.

ಕನ್ನಡದಲ್ಲಿ ಮಾತನಾಡಿಕೊಂಡು ಹರಟುತ್ತಾ ಖುಷಿ ಪಡುತ್ತಿದ್ದೆವು.ಏಷ್ಯಾಡೆ ಗೆ ಹೊಸತಾ ಬಂದ ಸುಷ್ಮಿತಾ ಪವಾರ್ ಮತ್ತು ಜಯಂತಿ ಸಹ ಅತ್ಯುತ್ತಮ ಪ್ರದರ್ಶನ ತೋರಿದರು. ರಾಜ್ಯದಲ್ಲಿ ಇನ್ನಷ್ಟು ಆಟಗಾರ್ತಿಯರು ರಾಷ್ಟ್ರೀಯ ತಂಡ ಪ್ರತಿನಿಧಿಸುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.

ಸದ್ಯಕ್ಕಂತೂ ನನ್ನ ಹೆಚ್ಚಿನ ಸಮಯವನ್ನು ಕಬಡ್ಡಿಗಾಗಿಯೇ ವ್ಯಯಿಸುತ್ತಿದ್ದೇನೆ. ಆದರೆ ಭವಿಷ್ಯದಲ್ಲಿ ಏನಾಗಲಿದೆಯೋ ಗೊತ್ತಿಲ್ಲ. ಕಾರಣ, ವೃತ್ತಿ ಜತಗೆ ನನ್ನ ಕೌಟುಂಬಿಕ ಜವಾಬ್ದಾರಿಗಳೂ ನಮ್ಮನ್ನು ಕಾಡುತ್ತಿರುತ್ತವೆ . ದೇಶಕ್ಕಾಗಿ ಚಿನ್ನ ಗೆಲ್ಲುವುದರೊಂದಿಗೆ ಅವುಗಳನ್ನು ಪೂರೈಸಬೇಕಾದದ್ದೂ ಅಷ್ಟೇ ಮುಖ್ಯ. ಬರುವ ಏಷ್ಯನ್ ಗೇಮ್ಸ್‌ನಲ್ಲಿ ನಾನು ಆಡುತ್ತೇನೆ ಎಂಬ ವಿಶ್ವಾಸವಿಗೆ ಎಂದು ಇನ್ನೂ ಎಷ್ಟು ವರ್ಷ ಕಬಡ್ಡಿ ಆಡುತ್ತೀರಾ ಎಂಬ ಪ್ರಶ್ನೆಗೆ ಮಮತಾ ಉತ್ತರಿಸಿದ್ದಾರೆ. ಪ್ರತಿಷ್ಠಿತ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಕ್ರೀಡಾಪಟುಗಳಿಗೆ ಇತರ ರಾಜ್ಯಗಳಲ್ಲಿ ಸಿಗುವ ಬಹುಮಾನ ಮೊತ್ತವನ್ನು ನೋಡಿದಾಗ ನಮಗೂ ಅದೇ ರೀತಿಯ ಸಮ್ಮಾನ ದೊರಕಬೇಕು ಎಂಬ ಭಾವನೆ ಮೂಡುವುದು ಸಹಜ.  ಹೀಗಾಗಿಯೇ ನಾವು ಬಹುಮಾನ ಮೊತ್ತವನ್ನು ಹೆಚ್ಚಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ. ಇಷ್ಟೇ ಬಹುಮಾನ ನೀಡಬೇಕೆಂಬ ಆಸೆ ಇಲ್ಲ. ಆದರೆ ಅನ್ಯ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಬಹುಮಾನ ಮೊತ್ತ ಹೆಚ್ಚಿಸಿದರೆ ಸಾಕು ಎಂದು ಕರ್ನಾಟಕ ರಾಜ್ಯ ಕೇವಲ ರು.10 ಲಕ್ಷ ಬಹುಮಾನ ನೀಡುತ್ತಿರುವ ಬಗ್ಗೆ ಕೆಲವರು ಅತೃಪ್ತಿ ವ್ಯಕ್ತ ಪಡಿಸಿದನ್ನು ಕೇಳಿದ್ದಕ್ಕೆ ತಮ್ಮ ಮನದಿಂಗಿತ ಹೊರ ಹಾಕಿದರು.

ಕಬಡ್ಡಿ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಿರುವ ಪ್ರೊ. ಕಬಡ್ಡಿ ಲೀಗ್‌ನಲ್ಲಿ ಆಡಬೇಕು ಎಂಬ ಇಂಗಿತವಿದೆ . ಇಷ್ಟರಲ್ಲೇ  ಮಹಿಶಾ  ಪ್ರೊ ಕಬಡ್ಡಿ ಲೀಗ್ ಸಹ ಆರಂಭ ಮಾಡುವುದಾಗಿ ಸಂಘಟಕರು ಭರವಸೆ ನೀಡಿದ್ದಾರೆ. ಅದಕ್ಕಾಗಿ ನಾವೆಲ್ಲ ಕಾತರದಿಂದ ಕಾಯುತ್ತಿದ್ದೇವೆ. ಅಲ್ಲದೆ, ಕಬಡ್ಡಿ ಬಗ್ಗೆ ಜನರಲ್ಲಿ ಇಷ್ಟೊಂದುಸ ಆಸಕ್ತಿ ಇದೆ ಎಂಬುದನ್ನು ಬಹಿರಂಗಪಡಿಸಿದ್ದೇ ಪ್ರೊ ಕಬಡ್ಡಿಲೀಗ್. ಹೀಗಾಗಿ ನಾವೂ ಪಂದ್ಯಾವಳಿಯಲ್ಲಿ ಆಡಬೇಕು ಎಂಬ ಬಯಕೆ ನಮ್ಮನ್ನೂ ಕಾಡುತ್ತಿದೆ ಎಂದರು .

ಕಬಡ್ಡಿ ತಾರಾಮಣಿಗಳಿಗೆ ಅದ್ದೂರಿ ಸ್ವಾಗತ
ಇಂಚಾನ್ ನಲ್ಲಿ ಚಿನ್ನದ ಪದಕ ಗೆದ್ದ ಆಟಗಾರ್ತಿಯರ ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಟಗಾರ್ತಿಯರಾದ ಮಮತಾ ಪೂಜಾರಿ ಮತ್ತು ತೇಜಸ್ವಿನಿ ಬಾಯಿ ಅವರು ಗುರುವಾರ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಹೆಚ್ಚಿನ ಆಟಗಾರರು ಮತ್ತು ಅಭಿಮಾನಿಗಳೊಂದಿಗೆ ಕರ್ನಾಟಕ ಕಬಡ್ಡಿ ಸಂಸ್ಥೆಯ ಅಧ್ಯಕ್ಷ ಹನುಮಂತೇಗೌಡ, ಉಪಾಧ್ಯಕ್ಷರಾದ ಕೃಷ್ಣಮೂರ್ತಿ , ಪ್ರಧಾನ ಕಾರ್ಯದರ್ಶಿ ಪಿಳ್ಳಪ್ಪ ಆಟಗಾರ್ತಿಯರನ್ನು ಸ್ವಾಗತಿಸಿದರು.

ರು. 25 ಲಕ್ಷ ಬಹುಮಾನಕ್ಕೆ ಒತ್ತಾಯ: ಏಷ್ಯಾಡ್‌ನಲ್ಲಿ ಚಿನ್ನ ಗೆದ್ದು ಬಂದ ಆಟಗಾರ್ತಿಯರಿಗೆ ಕನಿಷ್ಟ ರು.25 ಲಕ್ಷ ಬಹುಮಾನ ನೀಡಬೇಕು ಎಂದು ಕರ್ನಾಟಕ ಕಬಡ್ಡಿ ಸಂಸ್ಥೆ ರಾಜ್ಯ ಕ್ರೀಡಾ ಸಚಿವಾಲಯವನ್ನು ಒತ್ತಾಯಿಸಿದೆ . ಇತರ ರಾಜ್ಯಗಳು ನೀಡುತ್ತಿರುವ ಬಹುಮಾನಕ್ಕೆ ಹೋಲಿಸಿದರೆ, ನಮ್ಮ ರಾಜ್ಯ ನೀಡುತ್ತಿರುವ ರು.10 ಲಕ್ಷ ಬಹುಮಾನ ತುಂಬಾ ಕಡಿಮೆ ಮೊತ್ತವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಜತೆ ಮಾತನಾಡಿ  ಬಹುಮಾನ ಮೊತ್ತ ಹೆಚ್ಚಿಸುವ ಭರವಸೆಯನ್ನು ಕ್ರೀಡಾ ಸಚಿವ ಅಭಯ್ ಚಂದ್ರ ಜೈನ್ ನೀಡಿದ್ದಾರೆ ಎಂದು ಕಬಡ್ಡಿ ಸಂಸ್ಥೆ ತಿಳಿಸಿದೆ.

ಮಲ್ಲಿಕಾರ್ಜುನ ಕರಿಯಪ್ಪನವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.