ಏಷ್ಯಾಡ್ ಗೆದ್ದವರಿಗೆ ಶೀಘ್ರ ಸಿಹಿ ಸುದ್ದಿ

ಬೆಂಗಳೂರು: ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆದ್ದವರಿಗೆ ಬಹುಮಾನ ಮೊತ್ತ ಹೆಚ್ಚಿಸುವಂತೆ ವಾರಕಾಲದಿಂದ ಬರುತ್ತಿರುವ ಬೇಡಿಕೆಗಳಿಗೆ ಮಣಿದಿರುವ ರಾಜ್ಯ ಕ್ರೀಡಾ ಸಚಿವಾಲಯ ಕೊನೆಗೂ ಕ್ರೀಡಾಪಟುಗಳಿಗೆ ಸಿಹಿ ಸುದ್ದಿ ನೀಡಲು ತೀರ್ಮಾನಿಸಿದೆ. ಚಿನ್ನ ಗೆದ್ದವರಿಗೆ ಈಗ ಕೊಡುತ್ತಿರುವ ರು.10 ಲಕ್ಷ ಮೊತ್ತವನ್ನು ರು.25 ಲಕ್ಷಕ್ಕೆ ಹೆಚ್ಚಿಸುವ ಕುರಿತು ಸಚಿವಾಲಯ ಶುಕ್ರವಾರ ತೀರ್ಮಾನಿಸಿದೆ ಎಂದು ಕನ್ನಡಪ್ರಭಕ್ಕೆ ಬಲ್ಲಮೂಲಗಳು ತಿಳಿಸಿವೆ.
ಬಹುಮಾನ ಮೊತ್ತ ಹೆಚ್ಚಿಸಲು ತೀರ್ಮಾನಿರುವ ಬಗ್ಗೆ ಸ್ವತಃ ಕ್ರೀಡಾ ಸಚಿವರಾದ ಕೆ. ಅಭಯ್ ಚಂದ್ರ ಜೈನ್ ಒಪ್ಪಿಕೊಂಡಿದ್ದಾರೆ. ಆದರೆ ಎಷ್ಟು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂಬುದನ್ನು ಖಚಿತ ಪಡಿಸಲು ಅವರು ನಿರಾಕರಿಸಿದರು. ಆದರೆ ಶೀಘ್ರ ಹೆಚ್ಚಳ ಮೊತ್ತ ಪ್ರಕಟಿಸುವುದಾಗಿ ತಿಳಿಸಿದರು.
ಬಹುಮಾನ ಮೊತ್ತ ಹೆಚ್ಚಳಕ್ಕ ಹಲವಾರು ಅಡೆತಡೆಗಳು ಇದ್ದವು. ಅವುಗಳನ್ನು ನಿಭಾಯಿಸಲು ಶುಕ್ರವಾರ ಕ್ರೀಡಾ ಇಲಾಖೆಯ ಕಾರ್ಯದರ್ಶಿ ಡಾ.ಎನ್. ನಾಗಾಂಬಿಕಾ ದೇವಿ, ನಿರ್ದೇಶಕರಾದ ಎಚ್.ಎಸ್. ವೆಂಕಟೇಶ್ ಹಾಗು ಹಣಕಾಸು ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಬಹುಮಾನ ಮೊತ್ತ ಹೆಚ್ಚಿಸಲು ತೀರ್ಮಾನಿಸಿದ್ದೇವೆ. ಇದನ್ನು ನಿಯಮಾನುಸಾರ ಜಾರಿ ಮಾಡಿದ ನಂತರ ಮಾಧ್ಯಮಕ್ಕೆ ತಿಳಿಸಲಿದ್ದೇವೆ ಎಂದರು.
ಸರ್ಕಾರ ಪ್ರತಿಯೊಂದಕ್ಕೂ ಖರ್ಚು ಮಾಡುವುದು ಸಾರ್ವಜನಿಕರ ದುಡ್ಡು, ಅದನ್ನು ಕೇಳಿದವರಿಗೆ ಕೇಳಿದ ತಕ್ಷಣ, ಕೇಳಿದಷ್ಟು ಕೊಡಲು ಸಾಧ್ಯವಿಲ್ಲ. ಸರ್ಕಾರದ ಹಣವನ್ನು ಬಳಸಲು ಅದರದೇ ಆದ ನೀತಿ ನಿಯಮಗಳಿರುತ್ತವೆ. ಅದನ್ನು ಮೀರಿ ನಡೆಯಲಿಕ್ಕಾಗದು. ಕ್ರೀಡಾ ಸಚಿವರು ಹಣ ನೀಡಲು ನಿರಾಕರಿಸುತ್ತಾರೆ ಎಂದು ಟೀಕಿಸುವವರು ಈ ಅಂಶ ಗಮನಿಸಬೇಕು' ಎಂದು ಜೈನ್ ತಿಳಿಸಿದರು.
ನಾನು ಕ್ರೀಡಾ ಸಚಿವ ಸ್ಥಾನ ಅಲಂಕರಿಸಿದ ನಂತರ ಬೀಜಾಪುರದಲ್ಲಿ ರು.7 ಕೋಟಿ ವೆಚ್ಚದ ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಿಸುತ್ತಿದ್ದೇವೆ. ಮೂಡಬಿದರಿಯಲ್ಲಿ ರು.6 ಕೋಟಿ ವೆಚ್ಚದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸುತ್ತಿದ್ದೇವೆ. ಬಳ್ಳಾರಿಯಲ್ಲಿ ಕ್ರೀಡಾಂಗಣ ಪೂರ್ಣಗೊಂಡಿದೆ . ಬೆಂಗಳೂರಿನ ವಿದ್ಯಾನಗರ ಕ್ರೀಡಾ ಶಾಲಾ ಸಿಂಥೆಟಿಕ್ ಟ್ರ್ಯಾಕ್ ಸಿದ್ಧವಾಗಿದೆ. ಮೈಸೂರಿನಲ್ಲಿ ಕ್ರೀಡಾಂಗಣ ಉದ್ಧಾಟನೆ ಮಾಡಿದ್ದೇವೆ. ಕಂಠೀರವ ಕ್ರೀಡಾಂಗಣದಲ್ಲಿ ರು.4 ಕೋಟಿ ವೆಚ್ಚದಲ್ಲಿ ಬ್ಯಾಡ್ಮಿಂಟನ್ ಕೋರ್ಟ್ ಸೇರಿದಂತೆ ಕ್ರೀಡಾಪಟುಗಳಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವೆ ಎಂದು ನೀವು ಕ್ರೀಡಾ ಸಚಿವರಾದ ನಂತರ ಅಭಿವೃದ್ಧಿ ಕಾರ್ಯಗಳೇ ಆಗಿಲ್ಲ ಎಂಬ ಟೀಕೆಗಳು ಕೇಳಿ ಬಂದಿವೆಯಲ್ಲ ಎಂಬ ಪ್ರಶ್ನೆ ಕೇಳಿದ್ದಕ್ಕೆ ಸಚಿವರು ಉತ್ತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


