ಕ್ರೀಡೆ

ಮ್ಯಾರಥಾನ್‌ಗೆ ಬೆಂಗ್ಳೂರು ಸಜ್ಜು

ಮ್ಯಾರಥಾನ್‌ಗೆ ಬೆಂಗ್ಳೂರು ಸಜ್ಜು
Published On :

ಬೆಂಗಳೂರು:  ಇದೇ ಮೊದಲ ಬಾರಿಗೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ನಡೆಯಲಿರುವ ಪೂರ್ಣ ಮ್ಯಾರಥಾನ್‌ಗೆ ವೇದಿಕೆ ಸಜ್ಜಾಗಿದ್ದು, ಅಕ್ಟೋಬರ್ 19ರ ಭಾನುವಾರದಂದು ನಡೆಯಲಿದೆ.

ಗುರುವಾರ ಮ್ಯಾರಥಾನ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಓಟದ ರಾಯಭಾರಿ ರೀತ್ ಅಬ್ರಹಾಂ, ಭಾನುವಾರ ಬೆಳಗ್ಗೆ 5 ರಿಂದ 11.30ರವರೆಗೆ ಈ ಓಟ ನಡೆಯಲಿದೆ. ಪೂರ್ಣ ಮ್ಯಾರಥಾನ್, ಅರೆ ಮ್ಯಾರಥಾನ್ ಹಾಗೂ 5ಕೆ ಚಾರಿಟಿ ಫನ್ ರನ್ ಎಂಬ ಮೂರು ವಿಭಾಗಗಳಲ್ಲಿ ಮ್ಯಾರಥಾನ್ ನಡೆಯಲಿದೆ. ಪೂರ್ಣ ಮ್ಯಾರಥಾನ್ 42.2 ಕಿ.ಮೀ ಮತ್ತು ಅರೆ ಮ್ಯಾರಥಾನ್ 21.1 ಕಿ.ಮಿ ಓಟವಾಗಿದೆ ಎಂದು ತಿಳಿಸಿದರು.

ಬೆಳಗ್ಗೆ 5 ಗಂಟೆಗೆ ಪೂರ್ಣ ಮ್ಯಾರಥಾನ್, ನಂತರ 6.05ಕ್ಕೆ ಅರೆ ಮ್ಯಾರಥಾನ್ ಆರಂಭವಾಗಲಿದೆ. ಇನ್ನು 5 ಕೆ ಚಾರಿಟಿ ಫನ್ ಮ್ಯಾರಥಾನ್ ಬೆಳಗ್ಗೆ 8.30ಕ್ಕೆ ಆರಂಭವಾಗಲಿದೆ. ಓಟದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುತ್ತಿದ್ದು, ಇದರಲ್ಲಿ 1500 ಮಂದಿ ಪೂರ್ಣ ಮ್ಯಾರಥಾನ್, 4,500 ಜನರು ಅರೆ ಮ್ಯಾರಥಾನ್ ಮತ್ತು 3000ಕ್ಕೂ  ಹೆಚ್ಚು ಓಟಗಾರರು ಫನ್ ರನ್‌ನಲ್ಲಿ ಓಡಲಿದ್ದಾರೆ.

ಅರೆ ಮ್ಯಾರಥಾನ್ ಕಂಠೀರವ ಕ್ರೀಡಾಂಗಣದಿಂದ ಆರಂಭವಾಗಲಿದ್ದು, ಕಬ್ಬನ್ ಪಾರ್ಕ್, ಜಿಪಿಒ, ಕ್ವೀನ್ಸ್ ರೋಡ್ ಮಾರ್ಗವಾಗಿ ಎಂ.ಜಿ ರೋಡ್, ಕುಂಬ್ಳೆಸರ್ಕಲ್, ಡಿಕೆನ್‌ಸನ್ ರಸ್ತೆ ಅಲಸೂರು ಕೆರೆ, ಹಳೇ ವಿಮಾನ ನಿಲ್ದಾಣರಸ್ತೆ, ಇಂದಿರಾ ನಗರ, ಆಡುಗೋಡಿ, ಫೋರಂ ಮಾರ್ಗವಾಗಿ ಹೊಸೂರು ರಸ್ತೆವರೆಗೂ ಸಾಗಲಿದ್ದು, ಮತ್ತೆ ಇದೇ ಮಾರ್ಗವಾಗಿ ಓಟಗಾರರು  ವಾಪಸ್ಸಾಗಲಿದ್ದಾರೆ. ಎಲ್ಲ ವಿಭಾಗದ ಓಟ ಸೇರಿ ಒಟ್ಟು ರು.45  ಲಕ್ಷ ಬಹುಮಾನ ಮೊತ್ತವಿದ್ದು, ರೇಸ್ ಪೂರ್ಣಗೊಳಿಸುವ ಮೊದಲ 10 ಓಟಗಾರರಿಗೆ ಪ್ರಶಸ್ತಿ  ನೀಡಲಾಗುವುದು ಎಂದರು.

ಈ ವೇಳೆ ಮಾತನಾಡಿದ ಪೂರ್ವ ವಲಯದ ಜಿಲಾ ಪೊಲೀಸ್ ಆಯುಕ್ತ ಎಂ.ಎನ್.ವಿ. ಆರ್ ಪ್ರಸಾದ್, ಭದ್ರತೆಗಾಗಿ 4 ಸಹಾಯಕ ಆಯುಕ್ತರು, 19 ಇನ್ಸ್‌ಪೆಕ್ಟರ್‌ಗಳು 500ಕ್ಕೂ ಹೆಚ್ಚು ಕಾನ್ಸ್‌ಟೇಬಲ್ ಹಾಗೂ ಹೆಡ್ ಕಾನ್ಸ್‌ಟೇಬಲ್‌ಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.