ಕ್ರೀಡೆ

ಬಾಕ್ಸಿಂಗ್ ದಂತಕತೆ ಮೊಹ್ಮದ್ ಅಲಿ ಸ್ಥಿತಿ ಚಿಂತಾಜನಕ

ಬಾಕ್ಸಿಂಗ್ ದಂತಕತೆ ಮೊಹ್ಮದ್ ಅಲಿ ಸ್ಥಿತಿ ಚಿಂತಾಜನಕ
Published On :

ಕಳೆದ 25 ವರ್ಷಗಳಿಂದ ಅದುರುವಾಯು ರೋಗದಿಂದ ಬಳಲುತ್ತಿರುವ ಅಮೆರಿಕದ ಬಾಕ್ಸಿಂಗ್ ದಂತಕತೆ ಮೊಹ್ಮದ್ ಅಲಿ ಸ್ಥಿತಿ ಚಿಂತಾಜನಕವಾಗಿದೆ.

71 ವರ್ಷದ ಮೊಹ್ಮದ್ ಅಲಿ ಜೀವನದ ಕೊನೆಯ ಕ್ಷಣಗಳನ್ನು ಕಳೆಯುತ್ತಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಆರೋಗ್ಯ ಚಿಂತಾಜನಕ ಸ್ಥಿತಿಗೆ ತಲುಪಿರುವ ಅಲಿ, ತಮ್ಮ ಬಗ್ಗೆ ಹಾಲಿವುಡ್ ನಿರ್ಮಿಸಿರುವ 'ಐ ಆ್ಯಮ್ ಅಲಿ' ಚಲನಚಿತ್ರ ಕಳೆದ ವಾರ ಬಿಡುಗಡೆಯಾದ ಸಮಾರಂಭಕ್ಕೂ ತೆರಳಿಲ್ಲ. ಕಾಕತಾಳೀಯವೆಂಬಂತೆ, ಅಲಿ ಬಲಿಷ್ಠ ಎದುರಾಳಿಗಳಾಗಿದ್ದ ಇಂಗ್ಲೆಂಡ್‌ನ ಜಾಯ್ ಬಗ್ನರ್ (64) ಮತ್ತು ಲಿಯೋನ್ ಸ್ಟಿಂಕ್ಸ್ (61) ಕ್ರಮವಾಗಿ ಗಂಭೀರವಾದ ಹೃದಯ ರೋಗ ಮತ್ತು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ.

ಸ್ಟಿಂಕ್ಸ್ ಇತ್ತೀಚೆಗಷ್ಟೇ ಹಲವಾರು ಶಸ್ತ್ರ ಚಿಕಿತ್ಸೆಗೊಳಗಾಗಿದ್ದಾರೆ. ಹೆಚ್ಚು ಕಡಿಮೆ ಅಲಿ ಎದುರಾಳಿಗಳು ತುಂಬಾ ಘೋರವಾದ ಸಾವನ್ನು ಕಂಡಿದ್ದಾರೆ. ಅಲಿ ಎದುರಾಳಿಗಳಲೊಬ್ಬರಾದ ಸಿನ್ನಿ ಲಿಸಾನ್ ಮಿತಿ ಮೀರಿದ ಡ್ರಗ್ಸ್ ಸೇವಿಸಿ ಮೃತಪಟ್ಟಿದ್ದರು. ಅಜೆಂಟೀನಾದ ಬೊನಾವೆನಾ ಅವರನ್ನು ಶೂಟ್ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.