ಕ್ರೀಡೆ

ಬಿಸಿಸಿಐನಿಂದ ವಿಂಡೀಸ್ ವಿರುದ್ಧದ ಎಲ್ಲಾ ಸರಣಿ ರದ್ದು

ಬಿಸಿಸಿಐನಿಂದ ವಿಂಡೀಸ್ ವಿರುದ್ಧದ ಎಲ್ಲಾ ಸರಣಿ ರದ್ದು
Published On :

ಹೈದ್ರಾಬಾದ್: ಭಾರತ ಪ್ರವಾಸವನ್ನು ಮೊಟಕುಗೊಳಿಸಿದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ  ಕಾನೂನು ಕ್ರಮಕೈಗೊಳ್ಳಲು ಬಿಸಿಸಿಐ ನಿರ್ಧರಿಸಿದ್ದು, ಉಭಯ ರಾಷ್ಟ್ರಗಳ ನಡುವಿನ  ಎಲ್ಲ ಪ್ರವಾಸಗಳನ್ನು ರದ್ದುಗೊಳಿಸಲಾಗಿದೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ಮತ್ತು ವಿಂಡೀಸ್ ಕ್ರಿಕೆಟಿಗರ ನಡುವಿನ ವೇತನ ವಿವಾದದಿಂದಾಗಿ ಪ್ರಸ್ತುತ ತಂಡ ಭಾರತ ಪ್ರವಾಸವನ್ನು ರದ್ದುಗೊಳಿಸಿತ್ತು. ವೆಸ್ಟ್ ಇಂಡೀಸ್ ಕ್ರಿಕೆಟಿಗರ ಈ ದಿಢೀರ್ ನಿರ್ಧಾರದಿಂದಾಗಿ ಎಲ್ಲ ಪಂದ್ಯಗಳನ್ನು ಮೊಟಕುಗೊಳಿಸುವಂತೆ ಬಿಸಿಸಿಐ ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಒತ್ತಾಯಿಸಿತ್ತು.

ವೆಸ್ಟ್ ಇಂಡೀಸ್ ಜತೆಗಿನ ಪಂದ್ಯಾಟಗಳು ರದ್ದಾಗಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಶ್ರೀಲಂಕಾ ಜತೆಗಿನ ಏಕದಿನ ಪಂದ್ಯದ ಬಗ್ಗೆ ಚರ್ಚೆ ನಡೆಸಿ ಸ್ಥಳ ನಿಗದಿ ಮಾಡಿದೆ.

ನವಂಬರ್ 1 ರಿಂದ 14ರ ವರೆಗೆ ಶ್ರೀಲಂಕಾ ಮತ್ತು ಭಾರತ ನಡುವೆ ಪಂದ್ಯ ನಡೆಯಲಿದ್ದು, ಮಂಗಳವಾರ ನಡೆದ ಸಭೆಯಲ್ಲಿ ಪಂದ್ಯ ನಡೆಯಲಿರುವ ಸ್ಥಳಗಳನ್ನು ನಿಗದಿ ಮಾಡಲಾಯಿತು.

ನವಂಬರ್ ನಲ್ಲಿ ಶ್ರೀಲಂಕಾ- ಭಾರತ ಏಕದಿನ ಪಂದ್ಯಗಳು ಕಟಕ್, ಹೈದ್ರಾಬಾದ್, ರಾಂಚಿ, ಕೊಲ್ಕತ್ತಾ ಮತ್ತು ಅಹ್ಮದಾಬಾದ್‌ನಲ್ಲಿ ನಡೆಯಲಿವೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.