ಸರಿತಾ ದೇವಿಗೆ ನಿಷೇಧ

ನವದೆಹಲಿ: ಏಷ್ಯನ್ ಕ್ರೀಡಾಕೂಟದಲ್ಲಿ ತಮ್ಮ ವಿರುದ್ಧ ತೀರ್ಪು ನೀಡಿದ್ದ ರೆಫರಿ ವಿರುದ್ಧ ಪ್ರತಿಭಟನೆ ನಡೆಸಿದ್ದ ಭಾರತದ ಮಹಿಳಾ ಬಾಕ್ಸರ್ ಸರಿತಾದೇವಿ ಮತ್ತು ಅವರ ಕೋಚ್ ಮೇಲೆ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ(ಎಐಬಿಎ) ನಿಷೇಧ ಹೇರಿದೆ. ರೆಫರಿ ಸಂಪೂರ್ಣವಾಗಿ ಏಕಪಕ್ಷೀಯ ತೀರ್ಪು ನೀಡಿದ್ದಾರೆ ಎಂದು ದೂರಿದ್ದ ಸರಿತಾ ಪದಕ ಸ್ವೀಕರಿಸಲು ನಿರಾಕರಿಸಿದ್ದರು.
ಸರಿತಾ ಅವರೊಂದಿಗೆ ಕೋಚ್ ಗುರುಬಕ್ಸ್ ಸಿಂಗ್ ಸಂದು ಮೇಲೆ ಸಹ ನಿಷೇಧ ಹೇರಿದ್ದು, ಮುಂದಿನ ಸೂಚನೆವರೆಗೆ ಯಾವುದೇ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸದಿರುವಂತೆ ಎಐಬಿಎ ತಿಳಿಸಿದೆ. ಹೀಗಾಗಿ, ಸರಿತಾ ಅವರೊಂದಿಗೆ ಕೋಚ್ ಹರಿಂದರ್ ಸಂದು ಅವರನ್ನು ಸಹ ಅಮಾನತುಗೊಳಿಸಿರುವ ಕ್ರಮವನ್ನು ಖಂಡಿಸಿ ಎಐಬಿಎಗೆ ಪತ್ರ ಬರೆಯಲು ಭಾರತೀಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
60ಕೆಜಿ ಲೈಟ್ವೇಟ್ ವಿಭಾಗದಲ್ಲಿ ಅತಿಥೇಯ ದಕ್ಷಿಣ ಕೊರಿಯಾದ ಬಾಕ್ಸರ್ ಪಾರ್ಕ್ಜಿನಾ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಸರಿತಾ ಮೇಲುಗೈ ಸಾಧಿಸಿದ್ದರು. ಆದರೆ, ಸ್ಪರ್ಧೆಯ ನಿಗಾ ವಹಿಸಿದ್ದ ರೆಫರಿ ಫಲಿತಾಂಶ ಅತಿಥೇಯ ಬಾಕ್ಸರ್ ಪರವಾಗಿ ನೀಡಿದ್ದರು. ಇದರಿಂದ ತೀವ್ರ ಬೇಸರಗೊಂಡಿದ್ದ ಸರಿತಾ ಕಂಚಿನ ಪದಕ ಸ್ವೀಕರಿಸಲು ನಿರಾಕರಿಸುವುದರೊಂದಿಗೆ, ರೆಫರಿ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಆದರೆ, ಅನಂತರ ಘಟನೆಯ ಬಗ್ಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದ ಸರಿತಾ, ಪದಕ ಸ್ವೀಕರಿಸುವುದರೊಂದಿಗೆ ತವರಿಗೆ ಮರಳಿದ್ದರು. ಆದರೆ, ಈಗ ಎಐಬಿಎ ಘಟನೆಯನ್ನು ಪರಿಗಣಿಸಿ ಸರಿತಾ ಮೇಲೆ ನಿಷೇಧ ಹೇರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


