ಕ್ರೀಡೆ

ರ್ಯಾಂಕಿಂಗ್: ನಂ.1ಗೆ ಭಾರತ ಮತ್ತೆ ಲಗ್ಗೆ

ರ್ಯಾಂಕಿಂಗ್: ನಂ.1ಗೆ ಭಾರತ ಮತ್ತೆ ಲಗ್ಗೆ
Published On :

ದುಬೈ: ಒಂದೆಡೆ ಇಂಗ್ಲೆಂಡ್ ವಿರುದ್ಧದ ಸತತ ಎರಡು ಗೆಲುವುಗಳು ಹಾಗೂ ಮತ್ತೊಂದೆಡೆ ಪ್ರಬಲ ಆಸ್ಟ್ರೇಲಿಯಾವನ್ನು ಜಿಂಬಾಬ್ವೆ ಪಡೆ ಬಗ್ಗುಬಡಿದ ಪರಿಣಾಮ ಭಾರತ ತಂಡ ಐಸಿಸಿ ನೂತನ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಮತ್ತೆ ನಂಬರ್ ಒನ್ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಎಲ್ಟನ್ ಚಿಗುಂಬುರಾ ನಾಯಕತ್ವದ ಜಿಂಬಾಬ್ವೆ ತಂಡ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಭಾನುವಾರ ನಡೆದ ಏಕದಿನ ತ್ರಿಕೋನ ಕ್ರಿಕೆಟ್ ಸರಣಿಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 3 ವಿಕೆಟ್‌ಗಳಿಂದ ಸದೆಬಡಿದಿತ್ತು. ಇದರೊಂದಿಗೆ 31 ವರ್ಷಗಳಲ್ಲಿ ಜಿಂಬಾಬ್ವೆ ತಂಡ ಆಸ್ಟ್ರೇಲಿಯಾ ವಿರುದ್ಧ ಮೊದಲ ವಿಜಯೋತ್ಸವ ಆಚರಿಸಿದ ಸಾಧನೆ ಮಾಡಿತ್ತು.

ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ 10ನೇ ಕ್ರಮಾಂಕದಲ್ಲಿರುವ ಜಿಂಬಾಬ್ವೆ ವಿರುದ್ಧ ಅನುಭವಿಸಿದ ಸೋಲು ಆಸ್ಟ್ರೇಲಿಯಾಕ್ಕೆ ದೊಡ್ಡ ಆಘಾತ ಉಂಟು ಮಾಡಿದ್ದು, ರ್ಯಾಂಕಿಂಗ್‌ನಲ್ಲಿ 4ನೇ ಸ್ಥಾನಕ್ಕೆ ಕುಸಿಯುವಂತೆ ಮಾಡಿದೆ. ಭಾರತ ಇಂಗ್ಲೆಂಡ್ ವಿರುದ್ಧ ಎರಡು ಮತ್ತು ಮೂರನೇ ಪಂದ್ಯಗಳನ್ನು ಗೆದ್ದುಕೊಂಡು 2-0 ಮುನ್ನಡೆಯೊಂದಿಗೆ ತನ್ನ ಪ್ರಭುತ್ವ ಸ್ಥಾಪಿಸಿದೆ. ಕೊನೆಯ ಎರಡೂ ಪಂದ್ಯಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರೆ, ಭಾರತ ಅಗ್ರ ಕ್ರಮಾಂಕದಲ್ಲಿ ಮುದುವರಿಯಲಿದೆ.

ರ್ಯಾಂಕಿಂಗ್ ಪಟ್ಟಿಯ ಪ್ರಕಾರ ಸದ್ಯ ಭಾರತ 57 ಪಂದ್ಯಗಳಿಂದ 114 ರೇಟಿಂಗ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ 40 ಪಂದ್ಯಗಳಿಂದ 113 ಅಂಕ ಕಲೆಹಾಕಿದೆ. ಶ್ರೀಲಂಕಾ 65 ಪಂದ್ಯಗಳಿಂದ 11 ರೇಟಿಂಗ್ ಹಾಗೂ ಆಸ್ಟ್ರೇಲಿಯಾ 38 ಪಂದ್ಯಗಳಿಂದ 11 ರೇಟಿಂಗ್‌ನೊಂದಿಗೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದ ಗೌರವ ಪಡೆದಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.