ಕ್ರೀಡೆ

ಯುವಿ ವಿರುದ್ಧ ಗೆದ್ದ ಉಸೇನ್ ಬೋಲ್ಟ್

ಯುವಿ ವಿರುದ್ಧ ಗೆದ್ದ ಉಸೇನ್ ಬೋಲ್ಟ್
Published On :

ಬೆಂಗಳೂರು: ಪುಮಾ ವತಿಯಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ಕ್ರಿಕೆಟ್ ತಾರೆ ಯುವರಾಜ್ ಸಿಂಗ್ ಹಾಗೂ ಉಸೇನ್ ಬೋಲ್ಟ್ ನೇತೃತ್ವದ ತಂಡಗಳ ನಡುವೆ 4 ಓವರ್‌ಗಳ ಸೌಹಾರ್ದ್ ಕ್ರಿಕೆಟ್ ಪಂದ್ಯವನ್ನು ನಡೆಸಲಾಯಿತು.

ಈ ಪಂದ್ಯದಲ್ಲಿ ಬೋಲ್ಟ್ ತಂಡ ಯುವರಾಜ್ ತಂಡದ ವಿರುದ್ಧ ಗೆಲುವು ದಾಖಲಿಸಿತು. ಪ್ರತಿ ತಂಡದಲ್ಲಿ ಕೇವಲ 7 ಆಟಗಾರರಿದ್ದರು. ಯುವರಾಜ್ ತಂದಲ್ಲಿ ಮುಂಬೈನ ಆದಿತ್ಯ ಹಾಗೂ ದೆಹಲಿ ಆಟಗಾರ ಸನಿಲ್ ಮತ್ತು ನಾಲ್ವರು ಅಭಿಮಾನಿಗಳಿದ್ದರು. ಇನ್ನು ಬೋಲ್ಟ್ ತಂಡದಲ್ಲಿ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಜಮೈಕಾದ ಮತ್ತೋರ್ವ ಸ್ಟ್ರಿಂಟರ್ ಯುಗೇನ್ ಮತ್ತು ಅಭಿಮಾನಿಗಳು ಇದ್ದರು.

ಮೊದಲು ಬ್ಯಾಟಿಂಗ್ ಮಾಡಿದ ಯುವರಾಜ್ ತಂಡ 4 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 58ರನ್ ಗಳಿಸಿದರೆ, ಬೋಲ್ಟ್ ತಂಡ 4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 63ರನ್ ದಾಖಲಿಸಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಬೋಲ್ಟ್, ಯುವರಾಜ್ ಸಿಂಗ್ ಅವರಿಗೆ ಸಿಡಿಸಿದ 3 ಸಿಕ್ಸರ್‌ಗಳು ಅಭಿಮಾನಿಗಳನ್ನು ರಂಜಿಸಿತು.

ಇದಕ್ಕು ಮೊದಲು ಉಭಯ ತಂಡಗಳ ನಡುವೆ ಬಾಲ್ ಔಟ್ ನಡೆಸಲಾಗಿದ್ದು, ಅದರಲ್ಲಿ ಎರಡು ತಂಡ 3 ಯಶಸ್ವಿ ಬಾಲ್ ಔಟ್ ಮಾಡಿ ಟೈ ಮಾಡಿಕೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.