ಹ್ಯಾಮಿಲ್ಟನ್ ಚಾಂಪಿಯನ್

ಪ್ರಸಕ್ತ ಸಾಲಿನ ಫಾರ್ಮುಲಾ ಒನ್ ರೇಸ್‍ನಲ್ಲಿ ತಮ್ಮ ಅತ್ಯುತ್ತಮ ಫಾರ್ಮ್ ಮುಂದುವರಿಸಿರುವ ಮರ್ಸಿಡೀಸ್ ತಂಡದ ಚಾಲಕ ಲೂಯಿಸ್..
ಲೂಯಿಸ್ ಹ್ಯಾಮಿಲ್ಟನ್
ಲೂಯಿಸ್ ಹ್ಯಾಮಿಲ್ಟನ್
Updated on

ಬಹರೇನ್: ಪ್ರಸಕ್ತ ಸಾಲಿನ ಫಾರ್ಮುಲಾ ಒನ್ ರೇಸ್‍ನಲ್ಲಿ ತಮ್ಮ ಅತ್ಯುತ್ತಮ ಫಾರ್ಮ್ ಮುಂದುವರಿಸಿರುವ ಮರ್ಸಿಡೀಸ್ ತಂಡದ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಬಹರೇನ್ ಫಾರ್ಮುಲಾ ಒನ್ ಗ್ರ್ಯಾನ್ ಪ್ರೀ ರೇಸ್‍ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಬಹರೇನ್ ಅಂತಾರಾಷ್ಟ್ರೀಯ ಸರ್ಕೀಟ್‍ನಲ್ಲಿ ಭಾನುವಾರ ನಡೆದ ರೇಸ್‍ನಲ್ಲಿ ಪೋಲ್ ಪೊಸಿಷನ್‍ನಿಂದ ರೇಸ್ ಆರಂಭಿಸಿದ ಲೂಯಿಸ್ ಹ್ಯಾಮಿಲ್ಟನ್ 57 ಲ್ಯಾಪ್‍ಗಳ ರೇಸ್ ಅನ್ನು
1:35:05.809 ಗಂಟೆಗಳಲ್ಲಿ ರೇಸ್ ಮುಗಿಸಿದ ಲೂಯಿಸ್ ಅಗ್ರಸ್ಥಾನ ಕಾಯ್ದುಕೊಂಡರು. ಈ ಮೂಲಕ ಪ್ರಸಕ್ತ ಸಾಲಿನ ಚಾಂಪಿಯನ್ ಪಟ್ಟವನ್ನು ಅಲಂಕರಿಸುವತ್ತ ತಮ್ಮ ಮುನ್ನಡೆಯನ್ನು
ಹೆಚ್ಚಿಸಿಕೊಂಡಿದ್ದಾರೆ. ಇನ್ನು ಫೆರಾರಿಯ ಕಿಮಿ ರಾಯ್ಕೋನನ್, ಮರ್ಸಿಡೀಸ್‍ನ ನಿಕೊ ರೋಸ್‍ಬರ್ಗ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದರು.

ಪೆರೆಜ್‍ಗೆ 4 ಅಂಕ: ಭಾರತದ ತಂಡವಾಗಿರುವ ಫೋರ್ಸ್ ಇಂಡಿಯಾ ಚಾಲಕರಾದ ಸೆರ್ಗಿಯೋ ಪೆರೆಜ್ 8ನೇ ಸ್ಥಾನ ಪಡೆಯುವ ಮೂಲಕ 4 ಅಂಕ ಸಂಪಾದಿಸಿದರು. ಮತ್ತೊಬ್ಬ ಚಾಲಕ ನಿಕೊ ಹಲ್ಕನ್‍ಬರ್ಗ್ 13ನೇ ಸ್ಥಾನ ಪಡೆಯುವ ಮೂಲಕ ನಿರಾಸೆ ಅನುಭವಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com