ದೇವರ ಮನೇಲಿ ಸಾಕ್ಷ್ಯ ಚಿತ್ರ ಚಿತ್ರೀಕರಣ..

ಸಚಿನ್ ತೆಂಡೂಲ್ಕರ್ ಬಗ್ಗೆ ತಯಾರಾಗುತ್ತಿರುವ ಸಾಕ್ಷ್ಯಚಿತ್ರ `200 ನಾಟೌಟ್'ನ ಚಿತ್ರೀಕರಣ ಭರದಿಂದ ಸಾಗುತ್ತಿದೆ..
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್
Updated on: 

ಮುಂಬೈ: ಸಚಿನ್ ತೆಂಡೂಲ್ಕರ್ ಬಗ್ಗೆ ತಯಾರಾಗುತ್ತಿರುವ ಸಾಕ್ಷ್ಯಚಿತ್ರ `200 ನಾಟೌಟ್'ನ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಗುರುವಾರ ಸಚಿನ್ ಮನೆಯಲ್ಲಿ ಚಿತ್ರೀಕರಣ ನಡೆಯಿತು. ಈ ವೇಳೆ, ಸಚಿನ್ ಅವರು ತಮ್ಮದೊಂದು ಹಳೆಯ ಟ್ರಂಕ್ ನಲ್ಲಿ ಅಡಗಿಸಿಟ್ಟಿರುವ ಅನೇಕ ಅಮೂಲ್ಯ ಸಂಗ್ರಹಗಳನ್ನು ನಿರ್ದೇಶಕ ಜೇಮ್ಸ್ ಎರ್ಸ್‍ಕಿನ್ ಅವರಿಗೆ ತೋರಿಸಿದರು. ಕ್ರಿಕೆಟ್ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿದ್ದಾಗ ಪಡೆದ ಬಹುಮಾನಗಳು, ಉಪಯೋಗಿಸಿದ್ದ ವಸ್ತುಗಳು, ತಾವು ಸಂಗ್ರಹಿಸಿದ್ದ ಕ್ರಿಕೆಟ್‍ಗೆ ಸಂಬಂಧಪಟ್ಟ ಸಾಮಗ್ರಿಗಳು ಅವರ ಸಂಗ್ರಹದಲ್ಲಿದ್ದವು.

ಪ್ರತಿಯೊಂದು ಸಾಮಗ್ರಿಗಳ ಬಗ್ಗೆ ಸಚಿನ್ ಮಾಹಿತಿಯನ್ನು ವಿವರಿಸುತ್ತಾ ಸಾಗಿದರು. ಅದನ್ನು ಜೇಮ್ಸ್ ಚಿತ್ರೀಕರಿಸಿಕೊಂಡರು. ಭಾರತೀಯ ಮೂಲದ ರವಿ ಭಾಗಚಂದ್ರ ನಿರ್ಮಾಣದ ಈ ಸಾಕ್ಷ್ಯಚಿತ್ರ ಮುಂದಿನ ವರ್ಷ ಎಲ್ಲಾ ಚಿತ್ರಮಂದಿರಗಳಲ್ಲಿ ತೆರೆಕಾಣುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com