

ಗ್ರೆನೆಡಾ: ಆತಿಥೇಯ ವೆಸ್ಟ್ ಇಂಡೀಸ್ ತಂಡದ ಮೊದಲ ಇನಿಂಗ್ಸ್ ಅನ್ನು ಬೇಗನೆ ನಿಯಂತ್ರಿಸಿ ತಮ್ಮ ಮೊದಲ ಸರದಿ ಆರಂಭಿಸಿರುವ ಇಂಗ್ಲೆಂಡ್ ತಂಡ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಉತ್ತಮ ಸ್ಥಿತಿ ಹೊಂದಿದೆ.
ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್‍ನಲ್ಲಿ 299 ರನ್‍ಗಳ ಸಾಧಾರಣ ಮೊತ್ತಕ್ಕೆ ಆಲೌಟಾಯಿತು. ವಿಂಡೀಸ್ ಪರ ಮರ್ಲಾನ್ ಸ್ಯಾಮುಯೆಲ್ಸ್ ಶತಕ ಗಳಿಸಿ ಗಮನ ಸೆಳೆದರು. ಮೊದಲ ದಿನದಾಟ ನಿಂತಾಗ 94 ರನ್‍ಗಳಿಸಿದ್ದ ಸ್ಯಾಮುಯಲ್ಸ್, ಬುಧವಾರ ಎರಡನೇ ದಿನದಾಟ ಮುಂದುವರಿಸಿ 7ನೇ ಟೆಸ್ಟ್ ಶತಕ ಪೂರೈಸುವಲ್ಲಿ ಯಶಸ್ವಿಯಾದರು. ಇವರಿಗೆ ದಿನೇಶ್ ರಾಮದಿನ್ ಮತ್ತು ದೇವೇಂದ್ರ ಬಿಶೂ ಅವರು ಉತ್ತಮ ಬೆಂಬಲ ನೀಡಿದರು.
ಇಂಗ್ಲೆಂಡ್ ದಾಳಿಕಾರರ ಪರ ಸ್ಟುವರ್ಟ್ ಬ್ರಾಡ್ 4 ಹಾಗೂ ಜೇಮ್ಸ್ ಆ್ಯಂಡರ್ಸನ್ ಮತ್ತು ಕ್ರಿಸ್ ಜೋರ್ಡಾನ್ ತಲಾ 2 ವಿಕೆಟ್ ಉರುಳಿಸಿದರು. ಉತ್ತರವಾಗಿ ಇಂಗ್ಲೆಂಡ್ ತಂಡ ಎರಡನೇ ದಿನದಾಟ ನಿಂತಾಗ ತನ್ನ ಮೊದಲ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 74 ರನ್ ಮಾಡಿತ್ತು. ಆರಂಭಿಕರಾದ ನಾಯಕ ಅಲಸ್ಟೆರ್ ಕುಕ್ 37 ಮತ್ತು ಜೊನಾಥನ್ ಟ್ರಾಟ್ 32 ರನ್‍ಗಳಿಸಿ ಕ್ರೀಸ್‍ನಲ್ಲಿದ್ದರು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 104.4 ಓವರುಗಳಲ್ಲಿ 299
(ಮರ್ಲಾನ್ ಸ್ಯಾಮುಯೆಲ್ಸ್ 103, ದಿನೇಶ್ ರಾಮದಿನ್ 31, ದೇವೇಂದ್ರ ಬಿಶೂ 30, ಸ್ಟುವರ್ಟ್ ಬ್ರಾಡ್ 61ಕ್ಕೆ4, ಆ್ಯಂಡರ್ಸನ್ 47ಕ್ಕೆ2, ಜೋರ್ಡಾನ್ 65ಕ್ಕೆ2).
ಇಂಗ್ಲೆಂಡ್ ಮೊದಲ ಇನಿಂಗ್ಸ್ 26 ಓವರುಗಳಲ್ಲಿ 74
(ಅಲಸ್ಟೆರ್ ಕುಕ್ ಬ್ಯಾಟಿಂಗ್ 37, ಜೊನಾಥನ್ ಟ್ರಾಟ್ ಬ್ಯಾಟಿಂಗ್ 32).