

ನವದೆಹಲಿ: ಜನರ ದೃಷ್ಟಿಯಲ್ಲಿ ಕುಸಿದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ವರ್ಚಸ್ಸನ್ನು ಮತ್ತೆ ಪುನರುತ್ಥಾನಗೊಳಿಸುವತ್ತ ಬಿಸಿಸಿಐ ಹೆಜ್ಜೆಯಿಟ್ಟಿದ್ದು, ನೂತನ ನೀತಿ ಸಂಹಿತೆಯ ರಚನೆ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ತಿಳಿಸಿದ್ದಾಗಿ ಐಬಿಎನ್ ಟೈಮ್ಸ್ ವರದಿ ಮಾಡಿದೆ.
``ಬಿಸಿಸಿಐನ ಸಮಗ್ರತೆಗೆ ಧಕ್ಕೆ ಬಾರದಂತೆ ಹಾಗೂ ಜನರ ವಿಶ್ವಾಸವನ್ನು ಮತ್ತೆ ಗಳಿಸುವತ್ತ ಹೆಚ್ಚು ಗಮನ ಹರಿಸಲಾಗಿದೆ'' ಎಂದು ಹೇಳಿರುವ ಅವರು, ``ನೂತನವಾಗಿ ಅಸ್ವಿತ್ವಕ್ಕೆ ಬರಲಿರುವ ನೀತಿ ¸ಸಂಹಿತೆಯಲ್ಲಿ ಬಿಸಿಸಿಐಗೆ ಸಂಬಂಧಪಟ್ಟ ಯಾರೇ ಆಗಲಿ, ಅವರು ನಡೆನುಡಿ, ಅವರ ಚಟುವಟಿಕೆಗಳು... ಹೀಗೆ ಎಲ್ಲವೂ ಒಂದು ಸರಿದಾರಿಯಲ್ಲಿರುವಂತೆ ನೋಡಿಕೊಳ್ಳ ಲಾಗುವುದು. ಆಟಗಾರನಿರಲಿ, ಅಧಿಕಾರಿಯೇ ಇರಲಿ, ಅವರಿಂದ ಬಿಸಿಸಿಐನ ಧ್ಯೇಯೋದ್ದೇಶ ಗಳಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು'' ಎಂದಿದ್ದಾರೆ
ಏಜೆಂಟ್‍ಗಳಿಗೂ ಮಾನ್ಯತೆ
ಕ್ರಿಕೆಟ್ ಕ್ರೀಡೆಗೆ ಅಂಟಿಕೊಂಡಿರುವ ಮೋಸದ ಕಳಂಕವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಆಟಗಾರರ ಏಜೆಂಟ್ಗಳಿಗೆ ಬಿಸಿಸಿಐ ಮಾನ್ಯತೆಯನ್ನು ಕಡ್ಡಾಯ ಗೊಳಿಸಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ತಿಳಿಸಿದ್ದಾರೆ. ಆಟಗಾರರ ವಾಣಿಜ್ಯ ವ್ಯವಹಾರಗಳನ್ನು ನೋಡಿಕೊಳ್ಳಲಿರುವ ಏಜೆಂಟ್ಗಳ ಮೇಲೂ ನಿಗಾ ವಹಿಸಲು ಈ ವ್ಯವಸ್ಥೆ ಜಾರಿಗೊಳಿಸುವುದಾಗಿ ಅವರು ತಿಳಿಸಿದ್ದಾರೆ.