ಡೇವಿಸ್ ಕಪ್ ತಂಡಕ್ಕೆ ಪೇಸ್ ಪುನರಾಗಮನ

ಮುಂದಿನ ತಿಂಗಳು ನಡೆಯಲಿರುವ ಡೇವಿಸ್ ಕಪ್ ವಿಶ್ವ ಪ್ಲೇ-ಆಫ್ ಪಂದ್ಯಾವಳಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಹಿರಿಯ...
ಲಿಯಾಂಡರ್ ಪೇಸ್
ಲಿಯಾಂಡರ್ ಪೇಸ್
Updated on: 

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಡೇವಿಸ್ ಕಪ್ ವಿಶ್ವ ಪ್ಲೇ ಆಫ್ ಪಂದ್ಯಾವಳಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಹಿರಿಯ ಆಟಗಾರ ಲಿಯಾಂಡರ್ ಪೇಸ್ ತಂಡಕ್ಕೆ ಮರು ಸೇರ್ಪಡೆಗೊಂಡಿದ್ದಾರೆ.

ಜೆಕ್ ಗಣರಾಜ್ಯ ಹಾಗೂ ಭಾರತ ನಡುವಿನ ಈ ಪಂದ್ಯಾವಳಿ ಸೆಪ್ಟಂಬರ್ 18ರಿಂದ 20ರವರೆಗೆ ದೆಹಲಿಯಲ್ಲಿ ನಡೆಯಲಿದೆ. ಇದೇ ವರ್ಷ ಮಾಚ್ರ್ ನಲ್ಲಿ ನಡೆದಿದ್ದ ಡೇವಿಸ್ ಕಪ್ ಟೂರ್ನಿಯಲ್ಲಿ ನ್ಯೂಜಿ ಲೆಂಡ್ ತಂಡದ ವಿರುದ್ಧ ಭಾರತ ತಂಡ 3-2 ಅಂತರದಲ್ಲಿ ಜಯ ಸಾಧಿಸಿತ್ತು.

 ಆ ಟೂರ್ನಿಯಲ್ಲಿ ಪೇಸ್ ಆಡಿರಲಿಲ್ಲ. ಇದೀಗ, ಪುನಃ ಅವರು ಭಾರತ ತಂಡಕ್ಕೆ ವಾಪಸ್ಸಾಗಿರುವುದು ತಂಡದ ಬಲವನ್ನು ಹೆಚ್ಚಿಸಿದೆ. ಇನ್ನುಳಿದಂತೆ ತಂಡದಲ್ಲಿ ಅನುಭವಿ ರೋಹನ್ ಬೋಪಣ್ಣ, ಸೋಮ್ದೇವ್ ದೇವವರ್ಮನ್ ಹಾಗೂ ಯೂಕಿ ಭಾಂಬ್ರಿ ಇದ್ದಾರೆ.

ಸಾಕೇತ್ ಜಾಗಕ್ಕೆ ಪೇಸ್: ಮಾರ್ಚ್‍ನಲ್ಲಿ ನಡೆದಿದ್ದ ಡೇವಿಸ್ ಕಪ್ ಟೂರ್ನಿಯ ಡಬಲ್ಸ್‍ನಲ್ಲಿ ಸೆಣಸಿದ್ದ ಸಾಕೇತ್ ಮೈನೇನಿ ಅವರನ್ನು ಬದಿಗೆ ಸರಿಸಿ ಅವರ ಜಾಗಕ್ಕೆ ಪೇಸ್ ಸೇರ್ಪಡೆಗೊಂಡಿದ್ದಾರೆ. ಆದರೂ, ಸಾಕೇತ್ ಅವರು ಮೀಸಲು ಆಟಗಾರರಾಗಿರುತ್ತಾರೆ. ಅವರೊಂದಿಗೆ ಯುವ ಆಟಗಾರ ರಾಮ್ಕುಮಾರ್ ಸಹ ಮೀಸಲು ಆಟಗಾರ ಆಗಿರಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com