ಸೆಮೀಸ್‍ಗೆ ಕಾಲಿಟ್ಟ ಸಾನಿಯಾ-ಹಿಂಗಿಸ್

ವಿಶ್ವದ ನಂಬರ್ ಒನ್ ಮಹಿಳಾ ಡಬಲ್ಸ್ ಆಟಗಾರ್ತಿಯರಾದ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ, ಡಬ್ಲ್ಯೂಟಿಎ ರೋಜರ್ಸ್...
ಸಾನಿಯಾ ಮಿರ್ಜಾ- ಮಾರ್ಟಿನಾ ಹಿಂಗಿಸ್
ಸಾನಿಯಾ ಮಿರ್ಜಾ- ಮಾರ್ಟಿನಾ ಹಿಂಗಿಸ್

ಟೊರಾಂಟೊ: ವಿಶ್ವದ ನಂಬರ್ ಒನ್ ಮಹಿಳಾ ಡಬಲ್ಸ್ ಆಟಗಾರ್ತಿಯರಾದ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ, ಡಬ್ಲ್ಯೂಟಿಎ ರೋಜರ್ಸ್ ಕಪ್ ಟೆನಿಸ್ ಟೂರ್ನಿಯ ಉಪಾಂತ್ಯಕ್ಕೆ ತಲುಪಿದೆ.

ಶನಿವಾರ ನಡೆದ 8ರ ಘಟ್ಟದ ಪಂದ್ಯದಲ್ಲಿ ಭಾರತ-ಸ್ವಿಜರ್ಲೆಂಡ್ ಜೋಡಿ, ಚೈನೀಸ್ ತೈಪೆ ಜೋಡಿಯಾದ ಹವೊ ಚಿಂಗ್ ಚಾನ್ ಮತ್ತು ಯಂಗ್ ಜಾನ್‍ಚಾನ್ ವಿರುದ್ಧ 6-4, 6-2 ನೇರಸೆಟ್‍ಗಳಲ್ಲಿ ಜಯ ಸಾಧಿಸಿ ಮುನ್ನಡೆಯಿತು.

ಸುಮಾರು ಒಂದು ಗಂಟೆ, ಹತ್ತು ನಿಮಿಷಗಳ ಕಾಲ ನಡೆದ ಪಂದ್ಯದ ಆರಂಭದಿಂದಲೇ ಸಾನಿಯಾ-ಹಿಂಗಿಸ್ ಜೋಡಿ ಚುರುಕಿನ ಆಟ ಪ್ರದರ್ಶಿಸಿತಲ್ಲದೆ, ತಮಗೆ ಸಿಕ್ಕ ಮೂರು ಬ್ರೇಕ್ ಪಾಯಿಂಟ್ ಅವಕಾಶದಲ್ಲಿ ಎರಡನ್ನು ಉಳಿಸಿಕೊಂಡರು.

ಆದರೆ, ಇದೇ ವೇಳೆ, ತೈಪೇ ಜೋಡಿ ಎಸಗಿದ ನಾಲ್ಕು ಡಬಲ್ಸ್ ಫಾಲ್ಟ್ ಗಳು ಸಾನಿಯಾ -ಹಿಂಗಿಸ್ ಜೋಡಿಗೆ ಅಂಕಗಳನ್ನು ತಂದಿತ್ತವು. ಅಂತಿಮವಾಗಿ, ಎದುರಾಳಿಗಳನ್ನು ಸುಲಭವಾಗಿ ಮಣಿಸುವಲ್ಲಿ ಯಶಸ್ವಿಯಾದ ಸಾನಿಯಾ-ಹಿಂಗಿಸ್ ಉಪಾಂತ್ಯಕ್ಕೆ ಕಾಲಿಟ್ಟರು. ಸೆಮಿಫೈನಲ್ ಪಂದ್ಯದಲ್ಲಿ ಭಾರತ-ಸ್ವಿಸ್ ಜೋಡಿ, ವಿಶ್ವದ ನಾಲ್ಕನೇ ಶ್ರೇಯಾಂಕಿತ ಜೋಡಿಯಾದ ಕ್ಯಾರೊಲೀನ್ ಗಾರ್ಸಿಯಾ ಹಾಗೂ ಕಟಾರಿಯಾ ಶ್ರಿಬೊಟ್ನಿಕ್ ಅವರನ್ನು ಎದುರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com