ಜಮೈಕಾ ಅಥ್ಲೀಟ್ ತಂಡದ ವ್ಯವಸ್ಥಾಪಕ ಲುಡ್ಲೊ ವ್ಯಾಟ್ಸ್ ಈ ಬಗ್ಗೆ ಮಾಹಿತಿ ನೀಡಿರುವುದಾಗಿ 'ಐಬಿಎನ್ ಲೈವ್ ಜಾಲತಾಣ' ವರದಿ ಮಾಡಿದೆ. 'ವಿಶ್ವ ಅಥ್ಲೆಟಿಕ್ಸ್ ಗಾಗಿ ವಿಶೇಷ ತಯಾರಿಯಲ್ಲಿ ತೊಡಗಿರುವ ಉಸೇನ್ ಬೋಲ್ಟ್, ಈ ಸಂಬಂಧ ಕೆಲವಾರು ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ. ಹಾಗಾಗಿ, ಅವರು ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳುತ್ತಿಲ್ಲ'' ಎಂದು ವ್ಯಾಟ್ಸ್ ತಿಳಿಸಿದ್ದಾರೆ.