ಸೆರೆನಾಗೆ ಅಚ್ಚರಿಯ ಸೋಲು

ವಿಶ್ವದ ನಂಬರ್ ಒನ್ ಆಟಗಾರ್ತಿ ಹಾಗೂ ದಾಖಲೆಯ 21 ಗ್ರಾಂಡ್ ಸ್ಲಾಂ ಪ್ರಶಸ್ತಿ ವಿಜೇತೆ ಅಮೆರಿಕದ ಸೆರೆನಾ ವಿಲಿಯಮ್ಸ್, ರೋಜರ್ಸ್ ಕಪ್ ಟೆನಿಸ್ ಟೂರ್ನಿಯ...
ಬೆಲಿಂಡಾ ಬೆನ್ಸಿಕ್
ಬೆಲಿಂಡಾ ಬೆನ್ಸಿಕ್
ಟೊರಾಂಟೊ: ವಿಶ್ವದ ನಂಬರ್ ಒನ್ ಆಟಗಾರ್ತಿ ಹಾಗೂ ದಾಖಲೆಯ 21 ಗ್ರಾಂಡ್ ಸ್ಲಾಂ  ಪ್ರಶಸ್ತಿ ವಿಜೇತೆ ಅಮೆರಿಕದ ಸೆರೆನಾ ವಿಲಿಯಮ್ಸ್, ರೋಜರ್ಸ್ ಕಪ್ ಟೆನಿಸ್ ಟೂರ್ನಿಯ ಸೆಮಿಫೈನಲ್ ನಲ್ಲಿ ಸೋಲು ಕಂಡಿದ್ದಾರೆ!
ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಸ್ವಿಜರ್ಲೆಂಡ್ನದ ಹದಿಹರೆ ಯದ ಆಟಗಾರ್ತಿ ಬೆಲಿಂಡಾ ಬೆನ್ಸಿಕ್ ವಿರುದ್ಧ ಸೆಣಸಿದ ಸೆರೆನಾ, 3-6, 7-5, 4-6 ಸೆಟ್ ಗಳ ಅಂತರದಲ್ಲಿ ಪರಾಭವಗೊಂಡರು. ಈ ಬಾರಿಯ ಟೆನಿಸ್ ಋತುವಿನಲ್ಲಿ ಸೆರೆನಾ ಈವರೆಗೆ ಆಡಿರುವ 45 ಪಂದ್ಯಗಳಲ್ಲಿ ಇದು ಅವರು ಕಂಡಿರುವ 2ನೇ ಸೋಲು.
2001, 2011 ಹಾಗೂ 2013ರಲ್ಲಿ ದೇ ರೋಜರ್ಸ್ ಅಂಗಣದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಸೆರೆನಾ, ಈ ಬಾರಿ ಉಪಾಂತ್ಯಕ್ಕೆ ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com