ಸೆಮಿಫೈನಲ್ ನಲ್ಲಿ ಸೋಲು ಕಂಡ ಸಾನಿಯಾ-ಹಿಂಗಿಸ್‍ ಜೋಡಿ

ವಿಶ್ವ ಮಹಿಳಾ ಡಬಲ್ಸ್‍ನ ನಂಬರ್ ಒನ್ ಜೋಡಿಯಾದ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್...
ಸಾನಿಯಾ ಮಿರ್ಜಾ - ಮಾರ್ಟಿನಾ ಹಿಂಗಿಸ್
ಸಾನಿಯಾ ಮಿರ್ಜಾ - ಮಾರ್ಟಿನಾ ಹಿಂಗಿಸ್

ಟೊರಂಟೊ: ವಿಶ್ವ ಮಹಿಳಾ ಡಬಲ್ಸ್‍ನ ನಂಬರ್ ಒನ್ ಜೋಡಿಯಾದ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್, ಟೊರಾಂಟೊ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್‍ನಲ್ಲಿ ಸೋಲು ಕಂಡಿದ್ದಾರೆ.

ಶನಿವಾರ ತಡರಾತ್ರಿ ಇಲ್ಲಿನ ಅವೈವಾ ಸೆಂಟರ್ ಕೋರ್ಟ್‍ನಲ್ಲಿ ನಡೆದ ಪಂದ್ಯದಲ್ಲಿ ಮಹಿಳೆಯರ ಡಬಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಭಾರತ-ಸ್ವಿಜರ್ಲೆಂಡ್ ಜೋಡಿ, ವಿಶ್ವದ ನಾಲ್ಕನೇ ಶ್ರೇಯಾಂಕಿತ ಜೋಡಿಯಾದ ಫ್ಯ್ರಾನ್ಸ್‍ನ ಕೆರೊಲಿನ್ ಗಾರ್ಸಿಯಾ ಹಾಗೂ ಸ್ಲೊವೇನಿಯಾದ ಕಟಾರಿಯಾ ಸ್ರೆಬೊಟ್ನಿಕ್ ಜೋಡಿ ವಿರುದ್ಧ 3-6, 2-6ರ ಎರಡು ನೇರ ಸೆಟ್‍ಗಳಲ್ಲಿ ಸೋಲು ಕಂಡಿತು. ಸದ್ಯದಲ್ಲೇ ಶುರುವಾಗಲಿರುವ ಯುಎಸ್ ಓಪನ್‍ಗೆ ಸಾನಿಯಾ ಜೋಡಿ ಸಜ್ಜಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com