ಪ್ರಶಸ್ತಿ ಸನಿಹ ಯೂಕಿ ಭಾಂಬ್ರಿ ಜೋಡಿ

ಭಾರತದ ಯುವ ಟೆನಿಸಿಗ ಯೂಕಿ ಭಾಂಬ್ರಿ ಈ ಋತುವಿನಲ್ಲಿ ಮತ್ತೊಂದು ಎಟಿಪಿ ಡಬಲ್ಸ್ ಪ್ರಶಸ್ತಿಯನ್ನು ಪಡೆಯುವತ್ತ ದಾಪುಗಾಲಿ...
ಯೂಕಿ ಭಾಂಬ್ರಿ
ಯೂಕಿ ಭಾಂಬ್ರಿ

ಆ್ಯಪ್ಟೊಸ್(ಅಮೆರಿಕಾ): ಭಾರತದ ಯುವ ಟೆನಿಸಿಗ ಯೂಕಿ ಭಾಂಬ್ರಿ ಈ ಋತುವಿನಲ್ಲಿ ಮತ್ತೊಂದು ಎಟಿಪಿ ಡಬಲ್ಸ್ ಪ್ರಶಸ್ತಿಯನ್ನು ಪಡೆಯುವತ್ತ ದಾಪುಗಾಲಿಟ್ಟಿದ್ದಾರೆ.

ಇಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೂರ್ನಿ ಯಲ್ಲಿ ಅಮೆರಿಕಾದ ಆಸ್ಟಿನ್ ಕ್ರಾಜಿಸೆಕ್ ಹಾಗೂ ನಿಕೊಲಾಸ್ ಮೊನೊರೊ ಜೋಡಿಯ ಎದುರಿನ ಸೆಮಿಫೈನಲ್ ಸೆಣಸಾಟದಲ್ಲಿ ಯೂಕಿ ಭಾಂಬ್ರಿ ಮತ್ತು ಅವರ ಜತೆಯಾಟಗಾರ ಮ್ಯಾಥ್ಯೂ ಎಬ್ಡೆನ್ ಮೊದಲ ಸೆಟ್‍ನಲ್ಲಿ ಆಘಾತ ಅನುಭವಿಸಿದರೂ, ಬಳಿಕ ಎಚ್ಚರಿಕೆಯ ಆಟದೊಂದಿಗೆ 5-7, 6-4, 10-8 ಸೆಟ್‍ಗಳಿಂದ ಗೆಲುವು ಪಡೆದು ಪ್ರಶಸ್ತಿ ಸುತ್ತಿಗೆ ಮುನ್ನಡೆದರು.

ಫೈನಲ್ ನಲ್ಲಿ ಆಸ್ಟ್ರೇಲಿಯಾದ ಕ್ರಿಸ್ ಗುಸ್ಸಿಯೊನ್ ಮತ್ತು ಆರ್ಟೆಮ್ ಸಿಟಾಕ್ ವಿರುದ್ಧ ಯೂಕಿ ಜೋಡಿ ಸೆಣಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com