ಕೊಲಂಬೋ ಟೆಸ್ಟ್: ಭಾರತ 393 ರನ್‌ಗಳಿಗೆ ಆಲೌಟ್

ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್ 393 ರನ್‌ಗಳಿಗೆ ಮುಕ್ತಾಯವಾಗಿದೆ. ಇಂದು ಪಂದ್ಯ ಪುನರಾರಂಭವಾದಾಗ
ವಿಕೆಟ್ ಪಡೆದ ಸಂಭ್ರಮದಲ್ಲಿ ಅಶ್ವಿನ್  (ಕೃಪೆ: ಎಎಫ್ ಪಿ)
ವಿಕೆಟ್ ಪಡೆದ ಸಂಭ್ರಮದಲ್ಲಿ ಅಶ್ವಿನ್ (ಕೃಪೆ: ಎಎಫ್ ಪಿ)
Updated on: 

ಕೊಲಂಬೋ:  ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್ 393 ರನ್‌ಗಳಿಗೆ ಮುಕ್ತಾಯವಾಗಿದೆ. ಇಂದು ಪಂದ್ಯ ಪುನರಾರಂಭವಾದಾಗ ಭಾರತ6 ವಿಕೆಟ್ ಕಳೆದು ಕೊಂಡು  319 ರನ್‌ ಗಳಿಸಿತ್ತು. ಸ್ಕೋರ್ 321 ರನ್ ಆದಾಗ ಅಶ್ವಿನ್ ಎರಡೇ ಎರಡು ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಆಮೇಲೆ ಅಮಿತ್ ಮಿಶ್ರಾ ಮತ್ತು ವೃದ್ಧಿಮಾನ್ ಸಾಹಾ ಜತೆಯಾಟದಿಂದ ಭಾರತ ಚೇತರಿಸಿಕೊಂಡಿತು. 56 ರನ್ ಗಳಿಸಿದ ಓಟಾದರೆ, ಮಿಶ್ರಾ 24 ರನ್ ಗಳಿಸಿದ್ದಾರೆ.

ಶತಕ ಬಾರಿಸಿದ ಲೋಕೇಶ್ ರಾಹುಲ್ (108 ರನ್ ), ನಾಯಕ ವಿರಾಟ್ ಕೊಹ್ಲಿ (78), ರೋಹಿತ್ ಶರ್ಮಾ (79) ಮೊದಲಾದವರು ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಅದೇ ವೇಳೆ ಶ್ರೀಲಂಕಾದ ರಂಗಣ ಹೆರಾತ್ ನಾಲ್ಕು ವಿಕೆಟ್ ಪಡೆದುಕೊಂಡಿದ್ದಾರೆ. ಧಮ್ಮಿಕ  ಪ್ರಸಾದ್, ಏಂಜಲೋ ಮ್ಯಾಥ್ಯೂಸ್,  ಚಮೀರ ಮೊದಲಾದವರು  ತಲಾ ಎರಡು ವಿಕೆಟ್ ಪಡೆದುಕೊಂಡಿದ್ದಾರೆ.

ಪ್ರಥಮ ಟೆಸ್ಟ್  ಪರಾಭವಗೊಂಡಿರುವ ಟೀಂ ಇಂಡಿಯಾಗೆ ಈ ಪಂದ್ಯ ನಿರ್ಣಾಯಕವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com