

ಸಿನ್ಸಿನಾಟಿ: ವಿಶ್ವದ ನಂ.1 ಟೆನಿಸ್ ಜೋಡಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಸಿನ್ಸಿನಾಟಿ ಟೆನಿಸ್ ಪಂದ್ಯಾವಳಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಎಂಟರ ಘಟ್ಟ ತಲುಪಿದ್ದಾರೆ.
2,701,240 ಡಾಲರ್ ಮೊತ್ತದ ಈ ಟೂರ್ನಿಯ ಪ್ರೀ-ಕ್ವಾರ್ಟರ್ಫೈನಲ್‍ನಲ್ಲಿ ಜರ್ಮನ್ ಪೋಲೆಂಡ್ ಜೋಡಿ ಜುಲಿಯಾ ಜಾರ್ಜಸ್ ಹಾಗೂ ಕ್ಲಾಡಿಯಾ ಜಾನ್ಸ್ಇಗ್ನಾಸಿಕ್ ಎದುರು 7-6 (3), 6-4 ಸೆಟ್ ಗಳಿಂದ ಸಾನಿಯಾ ಹಾಗೂ ಹಿಂಗಿಸ್ ಜಯ ಸಾಧಿಸಿದರು.
ಮೊದಲ ಸೆಟ್‍ನಲ್ಲಿ ತೀರಾ ಪ್ರತಿರೋಧ ಒಡ್ಡಿದ ಪ್ರತಿಸ್ಪರ್ಧಿಗಳ ವಿರುದ್ಧ ವಿಂಬಲ್ಡನ್ ಚಾಂಪಿಯನ್ ಜೋಡಿ ಕೊಂಚ ತಿಣುಕಾಡಿತು. ಸರ್ವೀಸ್ ಗೇಮ್ನಲ್ಲಿ ಡಬಲ್ ಫಾಲ್ಟ್ ಎಸಗಿದ ಸಾನಿಯಾ ಹಾಗೂ ಮಾರ್ಟಿನಾ ಟೈಬ್ರೇಕರ್‍ನಲ್ಲಿ ಆ ಗೇಮ್ ಗೆಲ್ಲುವಂತಾಯಿತು. ಬಳಿಕ ಎರಡನೇ ಸೆಟ್‍ನಲ್ಲಿ ಎಚ್ಚರಿಕೆಯಿಂದ ಆಡಿದ ಇಂಡೋಸ್ವಿಸ್ ಜೋಡಿ ಮುಂದಿನ ಸುತ್ತಿಗೆ ಅರ್ಹಗೆ ಪಡೆಯಿತು.