ಡರ್ಬಾನ್: ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಹೊಸದೊಂದು ದಾಖಲೆ ಬರೆದಿದ್ದಾರೆ. ಏಕದಿನ ಪಂದ್ಯದಲ್ಲಿ ಅತೀ ಕಡಿಮೆ ಪಂದ್ಯದಲ್ಲಿ ಎಂಟು ಸಾವಿರ ರನ್ ಪೂರೈಸುವ ಮೂಲಕ ಅಗ್ರಗಣ್ಯ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ.
ಎಬಿ ಡೀವಿಲಿಯರ್ಸ್ ನಿನ್ನೆ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದ ವೇಳೆ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಡರ್ಬಾನ್'ನಲ್ಲಿ ನಡೆದ ಕಿವೀಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಡಿವಿಲಿಯರ್ಸ್ 64 ರನ್ ಪೇರಿಸುವ ಮೂಲಕ ಏಕದಿನ ಕ್ರಿಕೆಟ್ ನಲ್ಲಿ 8 ಸಾವಿರ ರನ್ ಮೈಲಿಗಲ್ಲು ಮುಟ್ಟಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ 200 ಪಂದ್ಯಗಳಲ್ಲಿ 8 ಸಾವಿರ ರನ್ ಮೈಲಿಗಲ್ಲು ಮುಟ್ಟಿದ್ದು ಇದೂವರೆಗೆ ದಾಖಲೆಯಾಗಿ ಉಳಿದಿತ್ತು. ಇದೀಗ 182 ಪಂದ್ಯಗಳಲ್ಲಿ 8 ಸಾವಿರ ರನ್ ಪೂರೈಸುವ ಮೂಲಕ ವಿಶ್ವ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ಇದೇ ಅಲ್ಲದೆ ವಿಶ್ವದ ಅತೀ ವೇಗದ ಅರ್ಧಶತಕ, ಶತಕ ಹಾಗೂ 150 ರನ್ನುಗಳ ದಾಖಲೆಗಳು ಎಬಿಡಿ ಹೆಸರಲ್ಲಿದೆ.