ಹನಿಮೂನ್‌ನಲ್ಲೂ ರೈನಾ ಯೋಗ!

ಇತ್ತೀಚಿಗಷ್ಟೇ ಮದ್ವೆಯಾದ ಕ್ರಿಕೆಟಿಗ ಸುರೇಶ್ ರೈನಾ ಅವರು ಈಗ ಹಾಟ್ ಯೋಗಪಟು!
ಪ್ರಿಯಾಂಕಾ ಚೌಧರಿ - ಸುರೇಶ್ ರೈನಾ
ಪ್ರಿಯಾಂಕಾ ಚೌಧರಿ - ಸುರೇಶ್ ರೈನಾ

ಇತ್ತೀಚಿಗಷ್ಟೇ ಮದ್ವೆಯಾದ ಕ್ರಿಕೆಟಿಗ ಸುರೇಶ್ ರೈನಾ ಅವರು ಈಗ ಹಾಟ್ ಯೋಗಪಟು!

ಕಳೆದ ಒಂದು ತಿಂಗಳಿಂದ ಹೆಂಡ್ತಿಯೊಂದಿಗೆ ನೆದರ್ಲೆಂಡ್ ಸುತ್ತುತ್ತಿರುವ ರೈನಾ, ಅಲ್ಲಿ ಆಮ್‌ಸ್ಟರ್‌ಡಂನಲ್ಲೂ ಫಿಟ್ನೆಸ್ ಮಂತ್ರ ಜಪಿಸುತ್ತಿದ್ದಾರೆ. ರೈನಾ ಅಲ್ಲಿ ಹಾಟ್ ಹೈ ಅಲ್ಟಿಟ್ಯೂಡ್ ಯೋಗ ಪ್ರಾಕ್ಟೀಸ್ ಮಾಡುತ್ತಿದ್ದಾರೆ.

ಈ ಯೋಗ ಸದ್ಯ ವಿದೇಶಗಳಲ್ಲಿ ಟ್ರೆಂಡ್. ಬಿಸಿಲಿರುವ ಎತ್ತರದ ಪ್ರದೇಶಗಳಲ್ಲಿ ನಡೆಯುವ ಯೋಗಾಭ್ಯಾಸವಿದು. ಹಿಮಾಲಯ ಪರ್ವತ ಶ್ರೇಣಿಯ ಯೋಗಪಟುಗಳ ಶೋಧವಿದು.

ಅಮ್‌ಸ್ಟರ್‌ಡಂನಲ್ಲಿ ನಿತ್ಯ 1 ಗಂಟೆ 43 ಡಿಗ್ರಿ ಉಷ್ಣಾಂಶದಲ್ಲಿ ರೈನಾ ಯೋಗಭ್ಯಾಸ ನಡೆಸುತ್ತಿದ್ದಾರೆ. ಪರ್ವತದ ಮೇಲಿನ ಒಣಗಾಳಿ ದೇಹದ ಅಂಗಾಂಗಳಿಗೆ ಹೆಚ್ಚು ಆ್ಯಕ್ಟಿವ್‌ನೆಸ್ ಕೊಡುತ್ತದಂತೆ. ಈ ಗಾಳಿ ಮಾಲಿನ್ಯ ಮುಕ್ತವೂ ಆಗಿರೋದ್ರಿಂದ, ಇಲ್ಲಿನ ಉಸಿರಾಟ ಹೆಚ್ಚು ಲಾಭ ತಂದುಕೊಡುತ್ತದೆ. ಇನ್ನೊಂದೆಡೆ ಹೆಂಡ್ತಿ ಪ್ರಿಯಾಂಕಾ ಚೌಧರಿ 'ಅಮೃತಧಾರೆ'ಯ ರಮ್ಯಾಳಂತೆ, 'ಹನಿಮೂನ್‌ನಲ್ಲೂ ಧ್ಯಾನ...' ಎಂದು ಹಾಡ್ತಿದ್ದಾಳಾ?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com