ದುಬೈ: ಪ್ರಬಲ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಟೆಸ್ಟ್ ಸರಣಿಯಲ್ಲಿ 3-0 ಅಂತರದ ಜಯ ಸಾಧಿಸುವ ಮೂಲಕ ಭಾರತ ತಂಡ, ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ಸೋಮವಾರ ಬಿಡುಗಡೆಗೊಂಡ ನೂತನ ರ್ಯಾಂಕಿಂಗ್ ಪಟ್ಟಿಯಂತೆ, ಪ್ರಸಕ್ತ ಕ್ರಿಕೆಟ್ ಋತುವಿನಲ್ಲಿ ಈವರೆಗೆ ತಾನು ಆಡಿರುವ 32 ಪಂದ್ಯಗಳಿಂದ ಒಟ್ಟು 3535 ಅಂಕಗಳನ್ನು ಕಲೆಹಾಕಿರುವ ಅದು, 110 ರೇಟಿಂಗ್ ಮೂಲಕ ದ್ವಿತೀಯ ಸ್ಥಾನಕ್ಕೇರಿದೆ.
ಆದರೆ, ಭಾರತ ವಿರುದ್ಧ ಸರಣಿ ಸೋತರೂ, ಅಂಕ ಗಳಿಕೆಯಲ್ಲಿ ಭಾರತಕ್ಕಿಂತ 227 ಅಂಕ ಹಿನ್ನಡೆ ಹೊಂದಿದ್ದರೂ ದ.ಆಫ್ರಿಕಾ ತಂಡವು (114 ರೇಟಿಂಗ್) ಮೂಲಕ ಅಗ್ರಸ್ಥಾನದಲ್ಲೇ ಮುಂದುವರಿದಿದೆ.