

ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್‌ನ ಮುಂದಿನ ಆವೃತ್ತಿಗೆ ಪುಣೆ ಹಾಗೂ ರಾಜ್ ಕೋಟ್ ಎಂಬ ಎರಡು ಹೊಸ ತಂಡಗಳು ಸೇರ್ಪಡೆಯಾಗಿದೆ.
ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಮಂಗಳವಾರ ಐಪಿಎಲ್ ಟೂರ್ನಿಯ ಹೊಸ ತಂಡಗಳನ್ನು ಪ್ರಕಟಿಸಿದ್ದಾರೆ. ಉದ್ಯಮಿ ಸಂಜೀವ್ ಗೋಯೆಂಕಾ ಪುಣೆ ತಂಡವನ್ನು ಖರೀದಿಸಿದ್ದಾರೆ.
ಇಂಟೆಕ್ಸ್ ಮೊಬೈಲ್ ಕಂಪೆನಿ 10 ಕೋಟಿ ನೀಡಿ ರಾಜ್ ಕೋಟ್ ಐಪಿಎಲ್ ತಂಡದ ಒಡೆತನ ಪಡೆದಿದೆ. ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಹೊಸ ಎರಡು ತಂಡಗಳು ಸೇರಿದಂತೆ ೮ ತಂಡಗಳು ಸೆಣಸಾಡಲಿದೆ.
ಸಂಜೀವ್ ಗೋಯೆಂಕಾ ಅವರು ಕೊಲ್ಕೊತ್ತಾ ಪ್ರಾಂಚೈಸಿಯ ಸಹ ಮಾಲೀಕರಾಗಿದ್ದಾರೆ. ಈ ಎರಡು ತಂಡಗಳು ಬಿಸಿಸಿಐ ನಿಂದ ಒಂದು ರೂಪಾಯಿ ಕೂಡ ತೆಗೆದುಕೊಂಡಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ.
.