ಸಾವಿರ ರನ್ ಗಡಿ ದಾಟಿದ ಕೇನ್

ನಿರ್ದಿಷ್ಟ ಕ್ರಿಕೆಟ್ ಋತುವಿನ ಟೆಸ್ಟ್ ವೃತ್ತಿಜೀವನದಲ್ಲಿ ಒಂದು ಸಾವಿರ ರನ್ ಪೂರೈಸಿದ ನ್ಯೂಜಿಲೆಂಡ್‍ನ ದ್ವಿತೀಯ ಆಟಗಾರ ಎಂಬ ಹಿರಿಮೆಗೆ ಕೇನ್...
ಕೇನ್  ವಿಲಿಯಮ್ಸನ್
ಕೇನ್ ವಿಲಿಯಮ್ಸನ್
Updated on: 
ಡ್ಯುನೇಡಿನ್ : ನಿರ್ದಿಷ್ಟ ಕ್ರಿಕೆಟ್ ಋತುವಿನ ಟೆಸ್ಟ್ ವೃತ್ತಿಜೀವನದಲ್ಲಿ ಒಂದು ಸಾವಿರ ರನ್  ಪೂರೈಸಿದ ನ್ಯೂಜಿಲೆಂಡ್‍ನ ದ್ವಿತೀಯ  ಆಟಗಾರ ಎಂಬ ಹಿರಿಮೆಗೆ ಕೇನ್  ವಿಲಿಯಮ್ಸನ್ ಪಾತ್ರರಾಗಿದ್ದಾರೆ. ಶ್ರೀಲಂಕಾ ವಿರುದ್ಧ ಯೂನಿವರ್ಸಿಟಿ  ಓವಲ್‍ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್  ಪಂದ್ಯದ ಮೂರನೇ ದಿನವಾದ ಶನಿವಾರ,  ಬ್ಯಾಟಿಂಗ್‍ಗೆ ಇಳಿದಿದ್ದ ಕೇನ್, ಖಾತೆ  ಆರಂಭಿಸಿ 8 ರನ್ ಪೇರಿಸಿದ ಕೂಡಲೇ ಈ  ಸಾಧನೆಗೆ ಪಾತ್ರರಾದರು. ಶನಿವಾರದ  ದಿನದಾಟಕ್ಕೂ ಮುನ್ನ ಪ್ರಸಕ್ತ ಸಾಲಿನಲ್ಲಿ  ಅವರು, ಎರಡು ದ್ವಿಶತಕಗಳನ್ನು  ದಾಖಲಿಸುವ ಮೂಲಕ 992 ರನ್ ಗಳಿಸಿದ್ದರು. ಹಾಲಿ ನಡೆಯುತ್ತಿರುವ ಲಂಕಾ
ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಕೇನ್  ಅವರು ಪ್ರಸಕ್ತ ಸಾಲಿನಲ್ಲಿ ಆಡುತ್ತಿರುವ ಏಳನೇ ಟೆಸ್ಟ್ ಆಗಿದೆ.  ಕಿವೀಸ್‍ಗೆ ಭಾರಿ ಮುನ್ನಡೆ ಶನಿವಾರ ನಡೆದ ಪಂದ್ಯದ ಮೂರನೇ  ದಿನದಾಟದಲ್ಲಿ ಶ್ರೀಲಂಕಾ ತಂಡದ ಮೊದಲ  ಇನಿಂಗ್ಸ್ 294 ರನ್ ಮೊತ್ತಕ್ಕೆ  ಮೊಟಕುಗೊಂಡಿತು. ಇದರಿಂದಾಗಿ, ನ್ಯೂಜಿಲೆಂಡ್ ತಂಡ 137 ರನ್‍ಗಳ ಮುನ್ನಡೆ  (ಮೊದಲ ಇನಿಂಗ್ಸ್ 431) ಪಡೆಯಿತು. ಮಿಂಚಿನ ಬೌಲಿಂಗ್ ನಡೆಸಿದ ಟಿಮ್  ಸೌಥೀ  ಹಾಗೂ ವ್ಯಾಂಗರ್ ತಲಾ 3 ವಿಕೆಟ್ ಪಡೆದರೆ,  ಬೌಲ್ಟ್ ಹಾಗೂ ಸ್ಯಾಂಟ್ನರ್ ತಲಾ 2 ವಿಕೆಟ್ ಪಡೆದು ಲಂಕಾ ಕುಸಿತಕ್ಕೆ ಪ್ರಮುಖ  ಕಾರಣರಾದರು. ಇದಾದ ನಂತರ, ತನ್ನ ದ್ವಿತೀಯ ಇನಿಂಗ್ಸ್ 
ಆರಂಭಿಸಿದ ನ್ಯೂಜಿಲೆಂಡ್ 79 ರನ್ ಮೊತ್ತಕ್ಕೆ ಆರಂಭಿಕ ಗುಪ್ಟಿಲ್ (46 ರನ್) ಅವರನ್ನು  ಕಳೆದುಕೊಂಡಿತು. ಆನಂತರ ಜತೆಯಾದ, ಮತ್ತೊಬ್ಬ ಆರಂಭಿಕ ಲಾಥಮ್  ಹಾಗೂ  ಕೇನ್ ವಿಲಿಯಂಸ್  ತಂಡದ ಮೊತ್ತವನ್ನು 150 ರನ್ ಗಡಿ ದಾಟಿಸಿದರು. ದಿನಾಂತ್ಯದ ಹೊತ್ತಿಗೆ, ಒಂದು ವಿಕೆಟ್  ನಷ್ಟಕ್ಕೆ 171 ರನ್ ಗಳಿಸಿರುವ ನ್ಯೂಜಿಲೆಂಡ್  ಪ್ರವಾಸಿಗರ ವಿರುದ್ಧ 308 ರನ್‍ಗಳ ಬೃಹತ್ ಮುನ್ನಡೆ ಪಡೆದುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com