ಬಿಐಎ ನೆರವಿಗೆ ಸುಪ್ರೀಂ

ಜನವರಿ 2ರಿಂದ ಆರಂಭವಾಗಲಿರುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಟೂರ್ನಿಗೆ ಮೇಘಾಲಯ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದು ಟೂರ್ನಿಗೆ ಗ್ರೀನ್ ಸಿಗ್ನಲ್ ನೀಡಿದೆ.
ಬಿಐಎ ನೆರವಿಗೆ ಸುಪ್ರೀಂ

ನವದೆಹಲಿ: ಮುಂಬರುವ ಜನವರಿ 2ರಿಂದ ಆರಂಭವಾಗಲಿರುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಟೂರ್ನಿಗೆ ಮೇಘಾಲಯ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದು ಟೂರ್ನಿಗೆ ಗ್ರೀನ್ ಸಿಗ್ನಲ್ ನೀಡಿದೆ.
ಹಾಗಾಗಿ ಸುಪ್ರೀಂಕೋರ್ಟ್ ತೀರ್ಪನ್ನು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಶ್ಲಾಘಿಸಿದೆ. ಶೋಭಗಯ ಮಿಡಿಯಾ ಪ್ರೈ. ಲಿಮಿಟೆಡ್,  ಫ್ರಾಂಚೈಸಿಗಳ ಮಾನ್ಯತೆ ಕುರಿತಂತೆ ಮೇಘಾಲಯ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆಗಾಗಿ ಹೈಕೋರ್ಟ್ ಟೂರ್ನಿಗೆ ತಡೆಯಾಜ್ಞೆ ನೀಡಿತ್ತು. ಮಂಗಳವಾರ ಹೈಕೋರ್ಟ್ ತೀರ್ಪು ಹೋಬರುತ್ತಿದ್ದಂತೆ ಈ ತೀರ್ಪನ್ನು ತಡೆ ಹಿಡಿಯ  ಬೇಕು ಎಂದು ಬಿಎಐ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಬುಧವಾರ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪಿಗೆ ತಡೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com